Advertisement
1. ತೃಪ್ತಿತೃಪ್ತಿ ಎಂದರೆ ಏನು? ಇದು ಮನುಷ್ಯನ ಅತ್ಯಂತ ಜಟಿಲ ಸಮಸ್ಯೆ. ಈಗ ಮಾತ್ರವಲ್ಲ, ಅನಾದಿ ಕಾಲದಿಂದಲೂ. ಹಣದಿಂದ ತ್ರಪ್ತಿ ಏರ್ಪಡುತ್ತಾ ? ಹತ್ತು ಸಾವಿರ ಕೈಯಲ್ಲಿದ್ದರೆ ಅಥವಾ ಇಪ್ಪತ್ತು ಸಾವಿರ ಇದ್ದರೆ ಚೆನ್ನಾಗಿ ಇರುತ್ತೇನೋ ಎಂದು ಅನಿಸುತ್ತದೆ. ಒಂದು ಮನೆ ಸ್ವಂತವಾಗಿದ್ದರೆ ಇನ್ನೊಂದು ಮನೆ ಯಾವಾಗ ತೆಗೆದುಕೊಳ್ಳೋಣ ಎಂಬ ಆಸೆ ಹುಟ್ಟುತ್ತದೆ. ಎÇÉಾ ವಸತಿಗಳು ಹೀಗೆನೆ ತ್ರಪ್ತಿ ಎನ್ನುವುದು ಆಕಾಶವನ್ನು ಮುಟ್ಟುವ ಹಾಗೆ ಹತ್ರ ಹತ್ರ ಬರುತ್ತಿದ್ದ ಹಾಗೆ ದೂರ ಸರಿದು ಹೋಗುತ್ತಾ ಇರುತ್ತದೆ.
ಒಬ್ಬೊಬ್ಬರನ್ನೂ ತಿದ್ದುವುದು ನಮ್ಮ ಕೆಲಸ ಅಲ್ಲ. ಅದು ಸಾಧ್ಯವೂ ಇಲ್ಲ. ಉಳಿದವರನ್ನು ತಿದ್ದಲು ಮುಂದಾದರೆ, ನಮ್ಮ ಸಮಯವೇ ನಷ್ಟವಾಗುತ್ತದೆ. ನಮ್ಮಲ್ಲಿಯೇ ಎಷ್ಟೋ ತಪ್ಪುಗಳು ಇರುವಾಗ, ಅವನ್ನು ತಿದ್ದಿಕೊಳ್ಳಲು ಪ್ರಯತ್ನ ಪಡದೆ ಬೇರೆಯವರನ್ನು ವಿಮರ್ಶಿಸಲು ಹೋಗುವುದು ಸರಿಯಲ್ಲ. 3. ಮತ್ಸರ ಬೇಡ
ನಾವು ಆಸೆ ಪಡುವ ವಿಷಯಗಳೇ ನಮ್ಮ ಸುತ್ತ ನಡೆಯಬೇಕು ಎಂದು ಎದುರು ನೋಡುವುದಕ್ಕೆ ನಮಗೆ ಎನು ಅಧಿಕಾರ ಇದೆ ? ಇರುವುದು ಅಥವಾ ನಡೆಯುವುದನ್ನು ಹಾಗೆಯೇ ಸ್ವೀಕರಿಸಿದರೆ ತಾಳ್ಮೆಯನ್ನು ಕಳೆದುಕೊಳ್ಳಬೇಕಾದ ಅಗತ್ಯನೇ ಇರುವುದಿಲ್ಲ. ಸುಲಭದಲ್ಲಿ ಕೋಪ ಪಟ್ಟುಕೊಳ್ಳುತ್ತೇವೆ. ಇದು ಅಗತ್ಯವಾ ಎಂದು ಕೆಲವು ಸೆಕೆಂಡುಗಳು ಯೋಚಿಸಿ ನೋಡಿದರೆ, ಇಷ್ಟು ಅಲ್ಪ$ತನವಾದ ಕಾರ್ಯಗಳಿಗೆÇÉಾ ನಾವು ವಶವಾಗುತ್ತೇವೆ ಎನ್ನುವುದು ತಿಳಿಯುತ್ತದೆ. ತಾಳ್ಮೆ ಇಲ್ಲದೇ ಹೋದರೆ ಜೀವನ ಮತ್ಸರದಿಂದ ತುಂಬಿ ಬಿಡುತ್ತದೆ .
Related Articles
ನಾವು ಬಯಸುವುದು ಸಿಗದೇ ಹೋಗುವ ಸಂದರ್ಭಗಳು ಕೆಲವಾರು ಇರುತ್ತದೆ. ಅದಕ್ಕಾಗಿ ಅದನ್ನೇ ನೆನಸಿಕೊಂಡು ಜೀವನವನ್ನು ನಾಶ ಮಾಡಿಕೊಳ್ಳಬಾರದು. ಯಾವುದು ಸಿಗುತ್ತೋ ಅದರಿಂದಲೇ ನೆಮ್ಮದಿ ಪಡೆಯಲು ಯೋಚಿಸಬೇಕು. ಅಂಥ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ನಮ್ಮ ಮನಸ್ಸನ್ನು “ರೆಡಿ’ ಮಾಡಿಕೊಳ್ಳಬೇಕು. ಪಾಲಿಗೆ ಬಂದದ್ದೇ ಪಂಚಾಮೃತ ಎಂಬುದು ನಮ್ಮ ಬದುಕಿನ ಆಶಯವೂ ಆಗಬೇಕು. ಹೀಗಾದಾಗ ನಮ್ಮ ಜೀವನ ಸುಂದರವೂ ಆಗುತ್ತದೆ.
Advertisement
5. ಬೇರೆಯವರೊಂದಿಗೆ ಮಾತಾಡುವಾಗ…ಒಬ್ಬರ ಜೊತೆ ಮಾತಾಡುವುವಾಗಲೇ , ಅವರು ಮಾತಾಡುವುದನ್ನು ಸಂಪೂರ್ಣವಾಗಿ ಕೇಳುವುದನ್ನು ನಿರ್ಧಾರ ಮಾಡಿಕೊಳ್ಳಿ. ನಡುವಿನಲ್ಲಿ ಮಾತಾಡಬೇಕು ಅನಿಸಿದರೂ ಮಾತಾಡಬೇಡಿ. ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳಿದ ನಂತರ ನಿಮ್ಮ ತೀರ್ಮಾನವನ್ನು ನಾಜೂಕಾಗಿ ತಿಳಿಸಿ. ಹೀಗೋಎ ಮಾಡುವುದರಿಂದ ನಿಮ್ಮೊಂದಿಗೆ ಸಮಸ್ಯೆ ಹೇಳಿಕೊಂಡವರಿಗೂ ಸಮಾಧಾನವಾಗುತ್ತದೆ. ಜೊತೆಗೆ ನಿಮ್ಮ ಕುರಿತು ಅವರಲ್ಲಿ ಮೆಚ್ಚುಗೆಯ ಮನೋಭಾವ ಕೂಡ ಉಂಟಾಗುತ್ತದೆ. ಹೀಗೆ ಮಾಡದೇ ಅವರ ಮಾತಿನ ಮಧ್ಯೆಯೇ ಮೂಗು ತೂರಿಸಿ, ನಿಮ್ಮ ಅಭಿಪ್ರಾಯ ಹೇಳಲು ಹೋದರೆ, ಅದರಿಂದ ನಿಮ್ಮ ಕುರಿತು ಎದುರಿದ್ದವರಿಗೆ ಸದಭಿಪ್ರಾಯ ಉಂಟಾಗುವುದೇ ಇಲ್ಲ. ನಾವು ಸಣ್ಣ ವಿಷಯಗಳನ್ನು ಆಲಕ್ಷಿಸಲು ತೊಡಗಿಸಿದರೆ ಅವುಗಳನ್ನು ತಡೆಯಬಹುದು. ಯೋಚಿಸಿ ನೋಡಿದರೆ ಎಲ್ಲವೂ ಸಣ್ಣ ವಿಷಯಗಳೇ ಆಗಿರುತ್ತದೆ. ಎಲ್ಲದಕ್ಕೂ ಕಾರಣ ನಮ್ಮ ಮನಸ್ಸೇ ಆಗಿರುತ್ತದೆ. ಜೀವನದಲ್ಲಿ ಏರ್ಪಡುವ ಕೆಲವು ತೊಂದರೆಗಳಿಗೆ ತಪ್ಪಾದ ನಮ್ಮ ಮನೋಭಾವವೇ ಕಾರಣವಾಗಿರುತ್ತದೆ… – ಮಂಜುಳಾ ರಾವ್