ಧಾರವಾಡ: ನಿವೃತ್ತ ಲೆಫ್ಟಿನೆಂಟ್ ಜನರಲ್ ಶ್ರೀಕೃಷ್ಣ ಚಿದಂಬರ ಸರ್‌ದೇಶಪಾಂಡೆ (90) ಅವರು ಬೆಂಗಳೂರಿನಲ್ಲಿ ಬುಧವಾರ ನಿಧನ ಹೊಂದಿದ್ದಾರೆ.
ಮೃತರು ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸರ್‌ದೇಶಪಾಂಡೆ ಅವರ ಇಚ್ಛೆಯಂತೆ ಅವರ ದೇಹವನ್ನು ದಾನ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಜನಿಸಿದ ಎಸ್.ಸಿ. ಸರ್‌ದೇಶಪಾಂಡೆ ಅವರು ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣವನ್ನು ಧಾರವಾಡದ ಕೆ.ಇ. ಬೋರ್ಡ್ಸ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿದರು. ಮಗ ಸೇನೆಗೆ ಸೇರಬೇಕೆಂಬುದು ಅವರ ತಂದೆಯ ಇಚ್ಛೆಯಾಗಿತ್ತು. ಕರ್ನಾಟಕದಿಂದ ಗಣರಾಜ್ಯೋತ್ಸವ ಪರೇಡ್‌ಗೆ ಹೋದ ಮೊದಲ ಕೆಡೆಟ್ ಎಂಬುದು ಸರ್‌ದೇಶಪಾಂಡೆ ಅವರ ಹೆಗ್ಗಳಿಕೆ.
ಇದನ್ನೂ ಓದಿ: ಗಾಂಧಿ ಮೌಲ್ಯಗಳು ಜಗತ್ತನ್ನು ಪ್ರೇರೇಪಿಸುತ್ತಿವೆ: ಸಬರಮತಿ ಆಶ್ರಮಕ್ಕೆ ಆಸ್ಟ್ರೇಲಿಯ ಪ್ರಧಾನಿ