ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು ಧನ್ ವರ್ಷ ಎನ್ನುವ ನೂತನ ಯೋಜನೆ ಪರಿಚಯಿಸಿದೆ. ಈ ಯೋಜನೆಯು ಲಿಂಕ್ ಆಗಿಲ್ಲದ, ಭಾಗವಹಿಸಿದ, ವೈಯಕ್ತಿಕ, ಉಳಿತಾಯ, ಸಿಂಗಲ್ ಪ್ರಿಮಿಯಂ ಜೀವ ವಿಮಾ ಯೋಜನೆಯ ರಕ್ಷಣೆ ಮತ್ತು ಉಳಿತಾಯಗಳ ಸಂಯೋಜನೆಯಾಗಿದೆ.
ಪಾಲಿಸಿಯ ಅವಧಿಯಲ್ಲಿ ವಿಮಾ ದಾರರು ಮರಣ ಹೊಂದಿದರೆ, ಈ ಯೋಜನೆಯು ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುತ್ತದೆ. ವಿಮಾದಾರರಿಗೆ ಮೆಚೂರಿಟಿ ದಿನಾಂಕದಂದು ಖಾತರಿಪಡಿಸಿದ ಮೊತ್ತ ಒದಗಿಸುತ್ತದೆ.
ಈ ಯೋಜನೆಯಲ್ಲಿ ಮರಣೋತ್ತರ ಅನಂತರ ಖಾತ್ರಿ ವಿಮಾ ಮೊತ್ತ ಮತ್ತು ಮೂಲ ವಿಮಾ ಮೊತ್ತವನ್ನು ಹಿಂಪಡೆಯಲು ಅನುಕೂಲ ಮಾಡಿಕೊಟ್ಟಿದೆ.
ವಿಮಾದಾರರು 10 ಅಥವಾ 15 ವರ್ಷ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, 10 ವರ್ಷದ ಅವಧಿಗೆ ಕನಿಷ್ಠ 8 ವರ್ಷ ಮತ್ತು 15 ವರ್ಷದ ಅವಧಿಗೆ ಕನಿಷ್ಠ 3 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ವಯೋಮಿತಿ 35ರಿಂದ 60 ಆಗಿದ್ದು, ಸಾವಿನ ನಂತರ, ಕನಿಷ್ಠ ಖಾತ್ರಿ ಮೊತ್ತ 1.25 ಲಕ್ಷ ರೂ.ಆಗಿದ್ದು, ಗರಿಷ್ಠ ಮೂಲ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.
ಕೆಲವು ಷರತ್ತುಗಳ ಮೂಲಕ ಈ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಯೋಜನೆಗಳನ್ನು ಮಧ್ಯವರ್ತಿಗಳ ಮೂಲಕ ಆಫ್ಲೈನ್‌ನಲ್ಲಿ ಖರೀದಿಸಬಹುದು ಅಥವಾ ಆನ್‌ಲೈನ್‌ನಲ್ಲಿ ನೇರವಾಗಿ //www.licindia.in ವೆಬ್‌ಸೈಟ್ ಮೂಲಕ ಖರೀದಿಸಬಹುದು.
ಹೆಚ್ಚಿನ ಮಾಹಿತಿಗಾಗಿ //www.licindia ಅನ್ನು ಅಥವಾ ಯಾವುದೇ ಎಲ್‌ಐಸಿ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.