ಮುಂಬಯಿ: ಕೇಂದ್ರ ಸರಕಾರಿ ಸ್ವಾಮ್ಯದ ಎಲ್‌ಐಸಿ 2022 ಡಿ.31ಕ್ಕೆ ಮುಕ್ತಾಯಗೊಂಡ 9 ತಿಂಗಳ ಅವಧಿಯಲ್ಲಿ ಪ್ರೀಮಿ ಯಂ ಮೂಲಕ ಪಡೆಯುವ ಆದಾಯ ಶೇ.20.65ಕ್ಕೆ ಏರಿಕೆಯಾಗಿದೆ.
ನಗದು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ ಅದರ ಮೊತ್ತ 3,42, 244 ಕೋಟಿ ರೂ. ಆಗಿದೆ. 2021 ಡಿ.31ರಲ್ಲಿ 2,83, 673 ಕೋಟಿ ರೂ. ಸಂಗ್ರಹವಾಗಿತ್ತು.
ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ 22, 970 ಕೋಟಿ ರೂ. ಮೊತ್ತ ತೆರಿಗೆ ಪಾವತಿ ಮಾಡಿದ ಬಳಿಕದ ಲಾಭ (ಪಿಎಟಿ) ಪ್ರಾಪ್ತವಾಗಿದೆ. ಒಂದು ವರ್ಷದ ಅವಧಿಯಲ್ಲಿ ನಿಗಮದ ವಹಿವಾಟು ಪ್ರಮಾಣದಲ್ಲಿ ಭಾರೀ ಏರಿದೆ. 9 ತಿಂಗಳ ಅವಧಿಯಲ್ಲಿ ಸಂಸ್ಥೆ 19,941.60 ಕೋಟಿ ರೂ. ಲಾಭ ಪಡೆದುಕೊಂಡಿದೆ. ಕಳೆದ ಡಿ.31ಕ್ಕೆ ಮುಕ್ತಾಯವಾದಂತೆ ಸಿಕ್ಕಿದ 5,669. 79 ಕೋಟಿ ರೂ, ಮಾತ್ರವಲ್ಲದೆ, ಹಿಂದಿನ ಮೂರು ತ್ತೈಮಾಸಿಕಗಳಲ್ಲಿ 5,580.72 ಕೋಟಿ ರೂ., 4,148.78 ಕೋಟಿ ರೂ., 4,524.31 ಕೋಟಿ ರೂ. ಕೂಡ ಸೇರಿದೆ.
ಎಲ್‌ಐಸಿಯ ವಹಿವಾಟು ಏರಿಕೆಯಾಗುತ್ತಿದೆ ಎಂಬುದಕ್ಕೆ ಪುಷ್ಟಿ ಎಂಬಂತೆ 2021ಕ್ಕೆ ಹೋಲಿಕೆ ಮಾಡಿದರೆ ಕಳೆದ ವರ್ಷದ ಡಿ.31ಕ್ಕೆ ಮುಕ್ತಾಯವಾದಂತೆ ಶೇ.61.40ರಿಂದ ಶೇ.65.38ಕ್ಕೆ ಏರಿಕೆಯಾಗಿದೆ. 1.29 ಕೋಟಿ ಪಾಲಿಸಿಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಶೇ.1.92 ಏರಿಕೆಯಾಗಿದೆ. 2021ರ ಡಿ.31ರ ವೇಳೆಗೆ 1.26 ಕೋಟಿ ಪಾಲಿಸಿಗಳು ಮಾರಾಟವಾಗಿತ್ತು. ಎಲ್‌ಐಸಿ ಹೊಂದಿರುವ ಆಸ್ತಿಯ ನಿರ್ವಹಣೆ 2021ಕ್ಕೆ ಹೋಲಿಕೆ ಮಾಡಿದಾಗ 2022 ಮುಕ್ತಾಯದಲ್ಲಿ 40, 12, 172 ಕೋಟಿ ರೂ.ಗಳಿಂದ 44,34, 940 ಕೋಟಿ ರೂ.ಗೆ ಏರಿಕೆಯಾಗಿದೆ.