ನವ ದೆಹಲಿ : ಭಾರತೀಯ ಜೀವ ವಿಮೆ ನಿಗಮ ಅಥವಾ ಎಲ್ ಐ ಸಿ ಯ ಪರಿಚಯ ಯಾರಿಗಿಲ್ಲ ಹೇಳಿ. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಒಂದಾದರೂ ಎಲ್ ಐ ಸಿ ವಿಮೆಯನ್ನು ತೆಗೆದುಕೊಂಡವರು ಇದ್ದೇ ಇರುತ್ತಾರೆ. ಕಾಲ ಕಾಲಕ್ಕೆ ಗ್ರಾಹಕ ಸ್ನೇಹಿ ಪಾಲಿಸಿಗಳನ್ನು ಯೋಜನೆಗಳನ್ನು ಎಲ್ ಐಸಿ ತರುತ್ತಲೇ ಇದೆ. ಇತ್ತೀಚಗ ಆ ಪೈಕಿ ಹೊಸ ಪಾಲಿಸಿಯೊಂದನ್ನು ಆಗರಂಭಿಸಿದೆ.
ಹೌದು, ‘ಸರಳ್ ಪೆನ್ಶನ್’ ಹೆಸರಿನಲ್ಲಿ ಆ್ಯನ್ಯುಟಿ ಯೋಜನೆಯನ್ನು ಇತ್ತೀಚೆಗೆ ಭಾರತೀಯ ಜೀವ ವಿಮಾ ನಿಗಮವು ಎಲ್‌ಐಸಿ ಆರಂಭಿಸಿದೆ.
ಇದನ್ನೂ ಓದಿ : ರಕ್ಷಿತ್ ಬಗ್ಗೆ ಈ ರೀತಿ ಸುದ್ದಿ ಸಲ್ಲದು : ಸುದ್ದಿ ವಾಹಿನಿ ವಿರುದ್ಧ ನಿರ್ಮಾಪಕ ಪುಷ್ಕರ ಗರಂ
ಈ ಯೋಜನೆ ಅಡಿಯಲ್ಲಿ ವಿಮಾ ಪ್ರೀಮಿಯಂ ಮೊತ್ತವನ್ನು ಒಂದು ಬಾರಿಗೆ ಪಾವತಿಸಬೇಕಾಗುತ್ತದೆ, ಮತ್ತು ಪಾವತಿ ಆದ ನಂತರ ಪಿಂಚಣಿ ಸೌಲಭ್ಯವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಎಲ್ ಐ ಸಿ ತನ್ನ ಪ್ರಕಟಣೆ ಮಾಹಿತಿ ನೀಡಿದೆ.
ಇನ್ನು, ಈ ಯೋಜನೆಯನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಿದ್ದರೇ ಅಥವಾ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀವು ಪಡೆಯಲು ಬಯಸಿದರೇ, ಎಲ್ ಐ ಸಿ ಶಾಖೆಗಳಿಂದ ಅಥವಾ www.licindia.in ವೆಬ್ ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಪಿಂಚಣಿ ಮೊತ್ತವನ್ನು ವರ್ಷಕ್ಕೊಮ್ಮೆ, ವರ್ಷಕ್ಕೆ ಎರಡು ಬಾರಿ, ಮೂರು ತಿಂಗಳಿಗೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ಪಡೆದುಕೊಳ್ಳುವ ಆಯ್ಕೆಯನ್ನೂ ಕೂಡ ಎಲ್ ಐ ಸಿ ಈ ಯೋಜನೆಯಲ್ಲಿ ನೀಡುತ್ತಿದೆ.
ಇದನ್ನೂ ಓದಿ : ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ