ನವದೆಹಲಿ: ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ (ಪಿಎಂಜೆಜೆಬಿವೈ) ವಿಮೆಗಳನ್ನು ಕೊಂಡವರು ಎಲ್‌ಐಸಿ ಷೇರುಗಳನ್ನು ಕೊಳ್ಳಲು ಅರ್ಹರು. ಜತೆಗೆ ಎಲ್‌ಐಸಿ ಐಪಿಒ ಖರೀದಿ ಪ್ರಕ್ರಿಯೆಯಲ್ಲಿ ಅವರಿಗೆ ಡಿಸ್ಕೌಂಟ್ ಕೂಡ ಸಿಗಲಿದೆ ಎಂದು ಎಲ್‌ಐಸಿ ಅಧ್ಯಕ್ಷ ಎಂ.ಆರ್. ಕುಮಾರ್ ತಿಳಿಸಿದ್ದಾರೆ.
ಎಲ್‌ಐಸಿ ಷೇರು ಮಾರಾಟ ಮುಂದಿನ ತಿಂಗಳು ಶುರುವಾಗಲಿವೆ. ಷೇರು ಮಾರಾಟ ಪ್ರಕ್ರಿಯೆಯಲ್ಲಿ ಸಂಸ್ಥೆಯ ಶೇ, 10ರಷ್ಟು ಷೇರುಗಳನ್ನು ಪಾಲಿಸಿದಾರರಿಗೆ ಮೀಸಲಿಡಲು ಎಲ್‌ಐಸಿ ನಿರ್ಧರಿಸಿದೆ.
ಈ ನಡುವೆ, ಡಿಜಿಟಲ್ ಮಾಧ್ಯಮದ ಮೂಲಕ ಹೆಚ್ಚಿನ ವಹಿವಾಟು ನಡೆಸುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ಇಂಥ ಕ್ರಮದ ಮೂಲಕ ಖಾಸಗಿ ವಿಮಾ ಕಂಪನಿಗಳು ನೀಡುತ್ತಿರುವ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸುವ ಇರಾದೆಯನ್ನು ಹೊಂದಿದೆ.
ಇದನ್ನೂ ಓದಿ:ಗಣಿಗಾರಿಕೆಯ ಹೆಸರಿನಲ್ಲಿ ನಿಸರ್ಗದ ಒಡಲಿಗೆ ಕೊಡಲಿ ಪೆಟ್ಟು : ಅಧಿಕಾರಿಗಳ ವಿರುದ್ದ ಆಕ್ರೋಶ
ಮಾರುಕಟ್ಟೆಯಲ್ಲಿ ಸಂಸ್ಥೆಯ ಷೇರನ್ನು ಪುನರ್‌ಸ್ಥಾಪಿಸಲು, ವಿಮಾ ಮಾರಾಟ ಹಾಗೂ ಷೇರು ಮಾರಾಟ ಸೇರಿದಂತೆ ಸಂಸ್ಥೆಯ ಎಲ್ಲಾ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ಚಿಂತನೆ ನಡೆಸಿದೆ ಎಂದು ಎಂ.ಆರ್. ಕುಮಾರ್ ಹೇಳಿದ್ದಾರೆ.