ನವದೆಹಲಿ: ಬಹುನಿರೀಕ್ಷಿತ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ದ ಐಪಿಒ ಇದೇ ತಿಂಗಳ ಅಂತ್ಯಕ್ಕೆ ನಡೆಯುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರವು ಐಪಿಒಗಾಗಿ ಹೊಸ ಡ್ರಾಫ್ಟ್ ದಾಖಲೆಗಳನ್ನು ಸೆಬಿಗೆ ಸಲ್ಲಿಸಿದೆ.
ಅದರ ಪ್ರಕಾರ ಮೇ.12ರೊಳಗೆ ಐಪಿಒ ನಡೆಯಬೇಕು, ಇಲ್ಲವಾದರೆ ಸರ್ಕಾರ ಮತ್ತೊಮ್ಮೆ ಹೊಸದಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ:ಹಿಜಾಬ್ ತೀರ್ಪಿಗೆ ಬೆದರಿಕೆ : ಆರೋಪಿ ಮನವಿಯ ಮೇಲೆ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ಹಾಗಾಗಿ ಇದೇ ತಿಂಗಳು ಐಪಿಒ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅದೇ ರೀತಿ ಈ ಹಿಂದೆ ಸರ್ಕಾರ ಯೋಚಿಸಿದಂತೆ ಐಪಿಒ ಮೌಲ್ಯವನ್ನು 16 ಲಕ್ಷ ಕೋಟಿ ರೂ. ಮಾಡದೆ, 11 ಲಕ್ಷ ಕೋಟಿ ರೂ.ಗೆ ಇಳಿಸಲಾಗುವುದು ಎನ್ನಲಾಗಿದೆ.