Advertisement
ಯೋಜನೆಯ ಸಂಘಗಳ ಸದಸ್ಯರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ 2007ರಿಂದ ಗ್ರಾಮಾಭಿವೃದ್ಧಿ ಯೋಜ ನೆಯು ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಡಿಮೆ ಪ್ರೀಮಿಯಂನ ವಿಶೇಷ ಪಾಲಿಸಿಗಳನ್ನು ಪರಿ ಚಯಿಸಲಾಗುತ್ತಿದೆ. ಪ್ರಸ್ತುತ ಮೈಕ್ರೋಬಚತ್ ಮತ್ತು ಭಿಮಾ ಜ್ಯೋತಿ ಪಾಲಿಸಿಗಳ ಪ್ರಯೋಜನ ವನ್ನು ಸದಸ್ಯರು ಪಡೆಯುತ್ತಿದ್ದಾರೆ.
ಪ್ರತಿ ಗ್ರಾಮದ ಜನಸಂಖ್ಯೆ ಮತ್ತು ಅಲ್ಲಿ ಮಾಡಲಾದ ಮೈಕ್ರೋಬಚತ್ ಪಾಲಿಸಿಯ ಆಧಾರದಲ್ಲಿ ವಿಮಾ ಗ್ರಾಮ ಗುರುತಿಸುವ ಕೆಲಸ ಭಾರತೀಯಜೀವ ವಿಮಾ ನಿಗಮವು ಮಾಡುತ್ತದೆ. ಈಗಾಗಲೇ 2019ರಿಂದ ರಾಜ್ಯದಾದ್ಯಂತ 300 ವಿಮಾ ಗ್ರಾಮ ಗುರುತಿಸಲಾಗಿದೆ. ಆಯ್ಕೆಯಾದ ಗ್ರಾಮಗಳಿಗೆ ಒಂದು ಘಟಕಕ್ಕೆ 35,000 ರೂ. ವೆಚ್ಚದಲ್ಲಿ ಈ ಕೆಳಗಿನ ಯಾವುದಾದರೂ ಒಂದು ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಶಾಲೆ, ಗ್ರಾ.ಪಂ., ದೇವಸ್ಥಾನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ (ನೀರಿನ ಟ್ಯಾಂಕ್, ಶುದ್ಧಕುಡಿಯುವ ನೀರಿನ ಘಟಕ), ಶಾಲೆಗಳಿಗೆ ಶೌಚಾಲಯ, ಸೋಲಾರ್ ದಾರಿದೀಪ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಒಳಗೊಂಡಿರುತ್ತದೆ.
Related Articles
Advertisement
ಸೌಲಭ್ಯಕ್ಕೆ ಮಾನದಂಡಗಳು2000 ಜನರಿರುವ ಗ್ರಾಮದಲ್ಲಿ ಕನಿಷ್ಠ 75 ಮಂದಿ ಹಾಗೂ 5000 ಮಂದಿ ಇರುವಲ್ಲಿ ಕನಿಷ್ಠ 100 ಮಂದಿ ವಿಮಾ ಯೋಜನೆಗೆ ನೊಂದಾಯಿಸಿರಬೇಕು. ಜನಸಂಖ್ಯೆ 5001 ರಿಂದ 10,000 ಇರುವಲ್ಲಿ ಕನಿಷ್ಠ 150 ವಿಮೆ ನೊಂದಾಯಿಸಿರಬೇಕು. ಗ್ರಾ.ಪಂ. ವತಿಯಿಂದ ಗ್ರಾಮದ ಜನಸಂಖ್ಯೆ ಕುರಿತು ದೃಢೀಕರಣ ನೀಡುವುದು ಕಡ್ಡಾಯವಾಗಿದೆ ಎಂದಿದ್ದಾರೆ.