Advertisement

ಪತ್ರ ಬರೆಯುವುದು ಭಾರತೀಯ ಸಂಸ್ಕೃತಿ

07:45 AM Mar 05, 2019 | |

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಬಾಹುಬಲಿ ಚಿತ್ರ ಇರುವ ವಿಶೇಷ ಅಂಚೆ ಚೀಟಿ ಹಾಗೂ ಲಕೋಟೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಮೂಲಕ ಹೆಚ್ಚು ಪ್ರಚಾರಕ್ಕೆ ಸಹಕಾರ ನೀಡಿತ್ತು ಎಂದು ಜೈನಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

Advertisement

ಇಲ್ಲಿನ ಚಾವುಂಡರಾಯ ಸಭಾಮಂಟಪದಲ್ಲಿ ನಡೆದ ಅಖೀಲ ಭಾರತ 16ನೇ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಮ್ಮೇಳನ ಹಾಗೂ ಅಂಚೆ ನೌಕರರ ಸಂಘದ 3ನೇ ವರ್ಗ ಮತ್ತು ಜಿಡಿಎಸ್‌ ನೌಕರರ 24ನೇ ಜಂಟಿ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಆಶೀರ್ವಚನೆ ನಿಡಿದರು ಶ್ರೀ ಕ್ಷೇತ್ರಕ್ಕೆ ಅಂಚೆ ಇಲಾಖೆ ಸಾಕಷ್ಟು ಸೇವೆ ಸಲ್ಲಿಸಿದೆ ಎಂದು ಶ್ಲಾ ಸಿದರು.

ಪತ್ರ ಬರೆಯುವ ಸಂಸ್ಕೃತಿ ಉಳಿಸಿ: ಪತ್ರ ಬರೆಯುವುದು ಭಾರತ ದೇಶದ ಪ್ರಾಚೀನ ಸಂಸ್ಕೃತಿ, ಆಧುನಿಕತೆಯಿಂದ ಪತ್ರ ಬರೆಯುವುದು ನಿಂತು ಹೋಗಿದೆ.ಇದನ್ನು ಸಂರಕ್ಷಿಸಿ ಬೆಳೆಸಬೇಕಿದೆ, ಅಂಚೆ ಇಲಾಖೆ ಎಂದರೆ ಬಾಲ್ಯದ ಹಲವು ವಿಷಯ ನೆನಪಾಗುತ್ತವೆ, ಅಂಚೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಪತ್ರ ತಲುಪಿಸುತ್ತಿದ್ದು ಮನೆಗೆ ಪತ್ರ ಬಂತೆಂದರೆ ಕುಟುಂಬದಲ್ಲಿ ಸಂತಸ ಮೂಡುತ್ತಿತ್ತು, ಆದರೆ ಈಗ ಮೊಬೈಲ್‌ಗೆ ಬರುವು ಸಂದೇಶದಲ್ಲಿ ಇಷ್ಟೊಂದು ಸಂಭ್ರಮವಿರುವುದಿಲ್ಲ ಎಂದರು.

ಅಂಚೆ ನೌಕರರ ಸಮಸ್ಯೆ ಪರಿಹರಿಸಿ: ಗ್ರಾಮೀಣ ಅಂಜೆ ನೌಕರರಿಗೆ ಹಲವು ಸಮಸ್ಯೆ ಇವೆ ಅವುಗಳನ್ನು ಸಮ್ಮೇಳನಗಳಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರುವ ಮೂಲಕ ಬಗೆ ಹರಿಸಿಕೊಳ್ಳಬೇಕು, ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಿ ಮೇಲಧಿಕಾರಿಗಳ ಮೂಲಕ ಅಗತ್ಯ ಬೇಡಿಕೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.

ಪ್ರಾಮಾಣಿಕ ಸೇವೆ: ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತ್ಯಂತ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಅಂಚೆ ಇಲಾಖೆ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ, ಬಡವರ, ಅನಕ್ಷರಸ್ಥರಿಗೆ ಸರ್ಕಾರದ ಹಲವು ಯೋಜನೆಯನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಯಲ್ಲಿ ಅಂಚೆಯಣ್ಣ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಇತರ ಇಲಾಖೆಗೆ ಹೋಲಿಕೆ ಮಾಡಿದರೆ ಅಂಚೆ ಇಲಾಖೆಯಲ್ಲಿ ಕಡಿಮೆ ಸಂಭಾವನೆ ಪಡೆದು ಜನರ ನಡುವೆ ಉತ್ತಮ ಸಂಬಂಧ ಹೊಂದಿ ಗುಣಮಟ್ಟದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

Advertisement

ಗ್ರಾಮೀಣ ಅಂಚೆ ನೌಕರರಿಗೆ ಸೌಲಭ್ಯ ನೀಡಿ: ರಾಷ್ಟ್ರೀಯ ಅಂಚೆ ನೌಕರರ ಮಾಜಿ ಪ್ರಧಾನ ಕಾರ್ಯದರ್ಶಿ ಡಿ.ತ್ಯಾಗರಾಜನ್‌ ಮಾತನಾಡಿ, ದೇಶದಲ್ಲಿ ಸುಮಾರು 1.55 ಲಕ್ಷ ಅಂಚೆ ಕಚೇರಿಗಳಿದ್ದು 1.23 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳಿವೆ. ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸೇವೆ ನೀಡುತ್ತಿರುವ ಏಕೈಕ ಸಂಸ್ಥೆ ಇದಾಗಿದೆ.

ಭಾರತೀಯ ಅಂಚೆ ಇಲಾಖೆಯ ವ್ಯಾಪ್ತಿ ಗ್ರಾಮೀಣ ಭಾಗದಲ್ಲಿ ಅಧಿಕವಾಗಿದ್ದು ಅಲ್ಲಿನ ನೌಕರರಿಗೆ ಉತ್ತಮ ಸೌಲಭ್ಯ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಗ್ರಾಮೀಣ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಯು.ಮುರುಳಿಧರನ್‌, ಸಹಾಯಕ ಕಾರ್ಯದರ್ಶಿ, ಬಿ.ಶಿವಕುಮಾರ್‌, ಅಧ್ಯಕ್ಷ ಸಿ.ಎಚ್‌.ಲಕ್ಷ್ಮೀನಾರಾಯಣ, ಬದರಿನಾಥ್‌, ಎಸ್‌.ಎನ್‌.ಅಶೋಕ್‌ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next