Advertisement
ಆರ್‌ಟಿಇ ಕಾಯ್ದೆ ಉಲ್ಲಂಘಿಸಿದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ನಗರದ ಪ್ರತಿಷ್ಠಿತ ಖಾಸಗಿ ಶಾಲೆಗೆ ಆರ್‌ಟಿಇ ಅಡಿ 40 ಮಕ್ಕಳು ಆಯ್ಕೆಯಾಗಿದ್ದಾರೆ. ಆದರೆ, 20 ಮಕ್ಕಳಿಗೆ ಆಯ್ಕೆಗೆ ಮುನ್ನವೇ ಸೀಟು ನೀಡಿದ್ದು, ಯಾವ ಮಾನದಂಡ ಅನುಸರಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಇದನ್ನು ಪ್ರಶ್ನಿಸಿಲ್ಲ. ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ ಈ ರೀತಿಯ ಅನೇಕ ದೋಷಗಳಿವೆ.
Related Articles
Advertisement
ಒಮ್ಮೆ ಆಯ್ಕೆಯಾದ ಮಕ್ಕಳ ಹೆಸರು, ವಯಸ್ಸನ್ನು ತಂತ್ರಾಂಶ ಏಕೆ ತಿರಸ್ಕರಿಸಲಿಲ್ಲ? ಯಾರಿಗೆ ಅವಕಾಶ ದೊರೆಯುತ್ತದೆಂದು ಮೊದಲೇ ತಿಳಿಯುವುದಾದರೆ ಲಾಟರಿ ಪ್ರಕ್ರಿಯೆ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿರುವ ಅವರು, ಆರ್‌ಟಿಇ ಸೀಟುಗಳು ಬಿಇಒ ಕಚೇರಿಗಳಿಗೆ ಹಣ ಮಾಡಿಕೊಳ್ಳುವ ಸಾಧನ ಆಗುತ್ತಿದೆ.
ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಆರ್‌ಟಿಇ ಉಲ್ಲಂಘನೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಅನೇಕ ದೂರುಗಳು ಬರುತ್ತಿರುತ್ತದೆ. ಆರ್ಟಿಇಕಾರ್ಯಪಡೆಯಿಂದ ಬಂದಿರುವ ಪತ್ರವನ್ನು ಸಮಗ್ರವಾಗಿ ಪರಿಶೀಲಿಸಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದೇವೆ.
– ಡಾ.ಕೃಪಾ ಆಳ್ವ,
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ