Advertisement
ರಾಜ್ಯದಲ್ಲಿ ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರು ಹಿಂದೂ ಸಂಘಟನೆಗಳ 23 ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾಗಿ ದ್ದು, ಹಲವರ ಬಂಧನ ವಾಗಿತ್ತು. ಆದರೆ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪ್ರಕರಣಗಳನ್ನು ಹಿಂಪಡೆದಿತ್ತು. ಈ ಕೆಟ್ಟ ನಿರ್ಧಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ರವಿಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
Related Articles
Advertisement
ಪ್ರಧಾನಿ ಜನಪ್ರಿಯತೆ ಸಹಿಸದೆ ವಿರೋಧ: ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್.ರವಿಕುಮಾರ್, ದೇಶದಲ್ಲಿ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯನ್ನು ಸಹಿಸದೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮೂಲಕ ಎಸ್‌ಡಿಪಿಐ, ಪಿಎಫ್ಐ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ.
ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಪ್ರಧಾನಿಯವರ ವರ್ಚಸ್ಸು ಕುಗ್ಗಿಸಲು ಈ ಸಂಘಟನೆಗಳು ವಿರೋಧ ವ್ಯಕ್ತಪಡಿ ಸುತ್ತಿವೆ ಎಂದು ವಾಗ್ಧಾಳಿ ನಡೆಸಿದರು. ಸಿಎಎ ವಿರೋಧಿ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ 73 ಮಂದಿಗೆ ವಿದೇಶಗಳಿಂದ 123 ಕೋಟಿ ರೂ. ಸಂದಾಯವಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಹಲವರಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ ಎಂದು ರವಿಕುಮಾರ್ ಹೇಳಿದರು.
ಮಿಣಿ-ಮಿಣಿ ಕುಮಾರಸ್ವಾಮಿ: ಮಂಗಳೂರು ವಿಮಾನನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮುಖಕ್ಕೆ ಹಚ್ಚಿ ಕೊಳ್ಳುವ ಮಿಣಿ, ಮಿಣಿ ಪೌಡರ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಸಿ.ಡಿ ಕುಮಾರಸ್ವಾಮಿಯವರು ಈಗ ಮಿಣಿ, ಮಿಣಿ ಕುಮಾರಸ್ವಾಮಿಯಾಗಿ ದ್ದಾರೆ ಎಂದು ಕಿಡಿ ಕಾರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಿಎಎ ಕಾಯ್ದೆಯು ದಲಿತರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರೋಧಿ ಎಂದಿದ್ದಾರೆ. ಆದರೆ ಪೌರತ್ವ ಪಡೆಯುತ್ತಿರುವ ನಿರಾಶ್ರಿತರಲ್ಲಿ ಶೇ. 70ರಷ್ಟು ಜನ ದಲಿತರೇ ಆಗಿದ್ದಾರೆ. ಕಾಯ್ದೆ ವಿರೋಧಿಸುವ ಮೂಲಕ ಸಿದ್ದರಾಮಯ್ಯ ಅವರು ದಲಿತರು, ಅಂಬೇಡ್ಕರ್ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿದರು.
1.15 ಕೋಟಿ ಜನರಿಗೆ ಮಾಹಿತಿ: ಪಕ್ಷದ ಕರೆಯ ಮೇರೆಗೆ ಸಿಎಎ ಬೆಂಬಲಿಸಿ ಮನೆ- ಮನೆ ಸಂಪರ್ಕ, ಮಿಸ್ಡ್ ಕಾಲ್, ಸಹಿ ಸಂಗ್ರಹ, ಜಿಲ್ಲಾ- ಮಂಡಲ ಮಟ್ಟಗಳಲ್ಲಿ ಸಾರ್ವಜನಿಕ ಸಭೆ, ಚಾಯ್ ಪೇ ಚರ್ಚಾ, ಪಂಜಿನ ಮೆರವಣಿಗೆ, ಜಿಲ್ಲಾ ಮಟ್ಟದ ಪ್ರಬುದ್ಧರ ಗೋಷ್ಠಿ, ಕಾರ್ಯಾಗಾರ ಸೇರಿದಂತೆ 12 ರೀತಿಯ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ 1,15,13,075 ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿ ಮಾಹಿತಿ ಪಡೆದಂತಾಗಿದೆ. ಪ್ರಧಾನಿ, ಕೇಂದ್ರ ಗೃಹ ಸಚಿವರು ಸೇರಿದಂತೆ 50ಕ್ಕೂ ಹೆಚ್ಚು ನಾಯಕರು ಸಾರ್ವಜನಿಕ ಸಭೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿಎಎ ಪರ ಜಾಗೃತಿ ಅಭಿಯಾನದ ಸಂಚಾಲಕ ಎನ್. ರವಿಕುಮಾರ್ ಹೇಳಿದರು.
ಜಾಗೃತಿ ಅಭಿಯಾನದ ವಿವರ* ಮನೆ- ಮನೆ ಸಂಪರ್ಕ- 32,21,653 (96,64,959 ಜನರನ್ನು ತಲುಪಲಾಗಿದೆ)
* ಮಿಸ್ಡ್ ಕಾಲ್- 16,54,805
* ಸಹಿ ಸಂಗ್ರಹ- 10,20,672
* ಅಭಿನಂದನಾ ಪತ್ರ- 2,19,000
* ಭಾರತ ಮಾತಾ ಪೂಜಾ- 12,174
* ಬೃಹತ್ ರ್ಯಾಲಿ- 4 (ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಚಿಂತಾಮಣಿ)
* ಜಿಲ್ಲಾ ಮಟ್ಟದ ರ್ಯಾಲಿ- 19
* ಮಂಡಲ ಮಟ್ಟದ ರ್ಯಾಲಿ- 17
* ವಿಭಾಗ ಮಟ್ಟದ ರ್ಯಾಲಿ- 12
* ಮಂಡಲ ಮಟ್ಟದ ಕಾರ್ಯಾಗಾರ- 221
* ಜಿಲ್ಲಾ ಮಟ್ಟದ ಪ್ರಬುದ್ಧರ ಗೋಷ್ಠಿ- 15
* ಮಂಡಲ ಮಟ್ಟದ ಪ್ರಬುದ್ಧರ ಗೋಷ್ಠಿ- 51
* ಎಲ್ಲ ಮೋರ್ಚಾಗಳ ಕಾರ್ಯಾಗಾರ- 1
* ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರ ಕಾರ್ಯಾಗಾರ- 1
* ಪಂಜಿನ ಮೆರವಣಿಗೆ- 8 ಜಿಲ್ಲೆ
* ಕಾಲ್ನಡಿಗೆ ಜಾಥಾ- 1 ಜಿಲ್ಲೆ (ಬೆಂಗಳೂರು- 1000 ಮಂದಿ)
* ಜ.26ರಂದು ರಾಷ್ಟ್ರ ಧ್ವಜಾರೋಹಣ- 47,312 ಬೂತ್ (ಭಾಗವಹಿಸಿದ್ದವರು- 11,82,800)
* ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಕೃತಿ 36,703 ಬೂತ್‌ಗಳಿಗೆ ಮಾರಾಟ
* ಅತಿಗಣ್ಯರು, ಗಣ್ಯರಿಂದ ಪ್ರಧಾನಿಗೆ ಅಭಿನಂದನಾ ಪತ್ರ- 160