Advertisement

ಬೆಳೆ‌ ಬೆಲೆ ಕುಸಿತ ತಡೆಗೆ ಪಿಎಂಗೆ ಪತ್ರ

08:06 PM May 26, 2021 | Team Udayavani |

ಬೆಂಗಳೂರು: ತೋಟಗಾರಿಕೆ ಬೆಳೆಗಳ ಬೆಲೆಕುಸಿತಕ್ಕೆಆತಂಕ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಕೂಡಲೇ ಎಲ್ಲ ರಾಜ್ಯಗಳ ಕೃಷಿಮತ್ತು ತೋಟಗಾರಿಕೆ ಇಲಾಖೆಗಳು ಈ ಬಗ್ಗೆಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳುವನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂದು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.

Advertisement

ಈ ಸಂಬಂಧ ದೇವೇಗೌಡರುಸೋಮವಾರ ಪ್ರಧಾನಿಮೋದಿಯವರಿಗೆ ಪತ್ರ ಬರೆದಿದ್ದು,ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿದ್ದರೆಕೃಷಿಕರು ಸೇರಿ ಗ್ರಾಮೀಣ ಪ್ರದೇಶದ ಜನರ ಸ್ಥಿತಿಶೋಚನೀಯವಾಗಲಿದೆ ಎಂದು ಎಚ್ಚರಿಸಿದ್ದಾರೆ.ಒಂದೆಡೆ ಕೋವಿಡ್‌ ಸೋಂಕು ಗ್ರಾಮೀಣಪ್ರದೇಶಕ್ಕೆ ವ್ಯಾಪಕವಾಗಿ ಹರಡಿರುವುದು ಆಂತಕಕ್ಕೆಕಾರಣವಾಗಿದ್ದರೆ, ಇನ್ನೊಂದೆಡೆ ತೋಟಗಾರಿಕೆ ಬೆಳೆಗಳ ಬೆಲೆ ಕುಸಿತವು ರೈತರನ್ನು ಕಂಗೆಡಿಸಿದೆ ಎಂದು ದೇವೇಗೌಡರು ಪತ್ರದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಉತ್ತಮ ಬೆಲೆ ಸಿಗದ ಕಾರಣಕೋಲಾರದಲ್ಲಿ ರೈತರು ಟೊಮೊಟೊವನ್ನು ರಸ್ತೆಗೆಸುರಿದಿದ್ದರು. ಕೋಲಾರ ಎಪಿಎಂಸಿಗೆ ದಕ್ಷಿಣಕರ್ನಾಟಕದ ಐದಾರು ಜಿಲ್ಲೆಗಳಿಂದ ಟೊಮೊಟೊಪೂರೈಕೆಯಾಗುತ್ತದೆ. ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 10,000 ಎಕರೆಪ್ರದೇಶದಲ್ಲಿ ಟೊಮೊಟೊ ಬೆಳೆಯಲಾಗುತ್ತಿದೆ ಎಂಬುದು ಗಮನಾರ್ಹ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next