Advertisement

ಭಾಷಾ ಅಭಿವೃದ್ದಿ ವಿಧೇಯಕಕ್ಕೆ ಶಾಸಕರಿಗೆ ಪತ್ರ

10:56 AM Jul 18, 2022 | Team Udayavani |

ಕಲಬುರಗಿ: ಆಡಳಿತದಲ್ಲಿ ಕನ್ನಡ ಪರಿಣಾಮಕಾರಿ ಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಎಸ್‌.ಆರ್‌.ಬನ್ನೂರಮಠ ಅಧ್ಯಕ್ಷತೆ ಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022ರ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವಿಧೇಯಕ ಆಗಸ್ಟ್‌ನಲ್ಲಿ ನಡೆಯುವ ವಿಧಾನಸಭೆ ಕಲಾಪದಲ್ಲಿ ಜಾರಿಯಾಗಲಿ ಎನ್ನುವುದು ನಮ್ಮ ಆಶಯ. ಆ ನಿಟ್ಟಿನಲ್ಲಿ ಎಲ್ಲ 224 ಶಾಸಕರಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷಗಳು ಮುಖಂಡರು, ಸಾಹಿತಿಗಳು, ಬರಹಗಾರರು ಮತ್ತು ಇತರೆ ಸಾಹಿತ್ಯಾಸಕ್ತರಿಗೆ ಈ ಕುರಿತು ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುವುದು. ಎಲ್ಲರ ಒತ್ತಾಸೆಯಿಂದ ಕೂಡಲೇ ವಿಧೇಯಕ ಜಾರಿಯಾದರೆ ಕನ್ನಡದ ಕೆಲಸಗಳು ಹೆಚ್ಚಾಗಲಿವೆ ಎಂದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಕಾನೂನು ಆಗಬೇಕು. ಈ ನಿಟ್ಟಿನಲ್ಲಿ ಕಸಾಪ ದಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು. ಅಗತ್ಯ ಬಿದ್ದರೆ ಅಭಿಯಾನ ಮಾಡಲಾಗುವುದು ಎಂದು ಜೋಶಿ ಹೇಳಿದರು.

ವಿಧೇಯಕದಲ್ಲಿ ಶಿಕ್ಷಣದಲ್ಲಿ ಕನ್ನಡ, ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಬಳಕೆಗೆ ಹೆಚ್ಚಿನ ಒತ್ತು. ನ್ಯಾಯಾಲಗಳಲ್ಲಿ ಕನ್ನಡ, ಉದ್ಯೋಗ ಪೋರ್ಟಲ್‌ ಮಾಡುವುದು ವಿಧೇಯಕದಲ್ಲಿ ಅಡಕವಾಗಿವೆ. ಇವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಅನುಕೂಲವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಬೀದರ್‌ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಳ್ಳಾರಿ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಯಶವಂತರಾಯ ಅಷ್ಟಗಿ, ಶಿವರಾಜ್‌ ಅಂಡಗಿ, ಶರಣರಾಜ್‌ ಚಪ್ಪರಬಂದಿ ಹಾಗೂ ಮತ್ತಿತರರು ಇದ್ದರು.

ಚುನಾವಣೆಯಲ್ಲಿ ಭರವಸೆ ನೀಡಿದಂತೆ ಆ್ಯಪ್‌ಗ್ಳ ಮುಖೇನ ಕನ್ನಡದ ಡಿಂಡಿಮ ಮೊಳಗಲಿದೆ. ಈಗಾಗಲೇ ಹಲವು ಮುಂದಿನ ಚುನಾವಣೆ ಕೂಡ ಆ್ಯಪ ಮೂಲಕ ಒಟಿಪಿ ಪಡೆದು ನಡೆದರೂ ಅಚ್ಚರಿಯಿಲ್ಲ. ಕನ್ನಡ ಶಾಲೆಗಳ ಪುನಶ್ಚೇತನಕ್ಕೂ ಮುಂದಾಗಿದ್ದೇವೆ. ಹೊರರಾಜ್ಯ ಮತ್ತು ಹೊರ ದೇಶಗಳಲ್ಲೂ ಸದಸ್ಯತ್ವ ಅಭಿಯಾನ ನಡೆಯಲಿದೆ. ಕೆನಡಾದಲ್ಲಿ ಈಗಾಗಲೇ ಅಧ್ಯಕ್ಷರ ನೇಮಕವೂ ಆಗಿದೆ. -ನಾಡೋಜ ಮಹೇಶ ಜೋಶಿ, ಕಸಾಪ ಅಧ್ಯಕ್ಷ, ಕೇಂದ್ರ ಸಮಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next