Advertisement

ಶಿಷ್ಯವೇತನಕ್ಕೆ ಒತ್ತಾಯಿಸಿ ಕಿರಿಯ ವೈದ್ಯರ ಪತ್ರ ಚಳವಳಿ

10:05 AM Jul 06, 2020 | Suhan S |

ದಾವಣಗೆರೆ: ಕಳೆದ 16 ತಿಂಗಳನಿಂದ ಬಾಕಿ ಇರುವ ಶಿಷ್ಯವೇತನಕ್ಕೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಗೃಹ ವೈದ್ಯರು ಭಾನುವಾರದ ಲಾಕ್‌ಡೌನ್‌ ನಡುವೆಯೂ ಶಿಷ್ಯವೇತನಕ್ಕೆ ಒತ್ತಾಯಿಸಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದರು.

Advertisement

ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಒತ್ತಾಯಿಸಿ ಕಳೆದ ಸೋಮವಾರದಿಂದ ಜಯದೇವ ವೃತ್ತದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ. ಭಾನುವಾರ ಪತ್ರಬರೆಯುವ ಮೂಲಕ ಹೋರಾಟದ ಮತ್ತುಂದು ಅಭಿಯಾನ ಕೈಗೊಂಡಿದ್ದಾರೆ. ಗೃಹವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 16 ತಿಂಗಳಿನಿಂದಲೂ ಶಿಷ್ಯವೇತನ ಪಾವತಿಯಾಗಿಲ್ಲ ಸರ್ಕಾರ ಹಾಗೂ ಆಡಳಿತ ಮಂಡಳಿಯ ಸಮನ್ವಯದ ಕೊರತೆಯಿಂದ ನಮಗೆ ತೊಂದರೆಯಾಗುತ್ತಿದೆ. ಮಧ್ಯಮ ಹಾಗೂ ಕೆಳವರ್ಗದಿಂದ ಬಂದಿರುವ ನಮಗೆ ಶಿಷ್ಯವೇತನವೇ ಆಧಾರವಾಗಿದೆ.

ಕೋವಿಡ್  ಸೋಂಕು ಹರಡಿದಾಗಿನಿಂದಲೂ ವಿರಮಿಸದೇ ನಮ್ಮ ಕರ್ತವ್ಯ ಪಾಲನೆ ಮಾಡುತ್ತಿದ್ದೇವೆ. ನಮಗೆ ಶಿಷ್ಯವೇತನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಶನಿವಾರಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಭೇಟಿ ನೀಡಿ ಶಿಷ್ಯವೇತನ ಪಾವತಿಯ ಭರವಸೆ ನೀಡಿದ್ದರು. ಆದರೆ, ಪಟ್ಟು ಬಿಡದ ವಿದ್ಯಾರ್ಥಿಗಳು ಬ್ಯಾಂಕ್‌ ಖಾತೆಗಳಿಗೆ ಶಿಷ್ಯವೇತನ ಹಾಕುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪತ್ರ ಚಳುವಳಿ ಕೈಗೊಂಡಿದ್ದೇವೆ. ಸೋಮವಾರ ಜಯದೇವ ವೃತ್ತದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ನಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಪ್ರಧಾನ ಮಂತ್ರಿಯವರಿಗೂ ಸಹ ಪತ್ರ ಬರೆದಿದ್ದೇವೆ ಎಂದು ಹೋರಾಟ ನಿರತ ವಿದ್ಯಾರ್ಥಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next