Advertisement

ಶಾಲೆ ನಿರ್ಮಾಣದ ಅನುದಾನಕ್ಕಾಗಿ ಸಚಿವರಿಂದ ಮುಖ್ಯಮಂತ್ರಿಗೆ ಪತ್ರ

11:08 PM Nov 04, 2019 | Lakshmi GovindaRaju |

ಬೆಂಗಳೂರು: ಭೀಕರ ಪ್ರವಾಹ ಮತ್ತು ಮಳೆಯಿಂದ ಹಾನಿಯಾಗಿರುವ ಶಾಲೆಗಳ ದುರಸ್ತಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 50 ಲಕ್ಷವನ್ನು ಶಿಕ್ಷಣ ಇಲಾಖೆಗೆ ನೀಡಿ ಆದೇಶಿಸುವಂತೆ ಕೋರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

Advertisement

ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ ಮೊದಲಾದ ಜಿಲ್ಲೆಗಳು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಹಾನಿ ಮತ್ತು ಪ್ರವಾಹದಿಂದ ಶಾಲಾ ಕಟ್ಟಡಗಳಿಗೆ ಗಂಭೀರ ಹಾನಿಯಾಗಿವೆ. ಇತ್ತೀಚೆಗೆ ಈ ಜಿಲ್ಲೆಗಳಿಗೆ ನೀಡಿದ ಪ್ರವಾಸದ ವೇಳೆ ಇದು ಗಮನಕ್ಕೂ ಬಂದಿದೆ. ಈಗಾಗಲೇ 600 ಕೋಟಿ ರೂ. ಪರಿಹಾರದ ಅಗತ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಯಿಂದ ಅಂದಾಜಿಸಲಾಗಿದೆ. ಬಿಡುಗಡೆ ಯಾಗಿರುವ 160 ಕೋಟಿ ರೂ.ಗಳನ್ನು ಆದ್ಯತೆ ಮೇರೆಗೆ ವಿನಿಯೋಗ ನಡೆಯುತ್ತಿದೆ. ಆದರೆ, ಇತರೆ ಆದ್ಯತೆ ಕೆಲಸಗಳನ್ನು ಸಮಾರೋಪಾದಿಯಲ್ಲಿ ನಡೆಸಲು ಅನುದಾನ ಕೊರತೆಯಿದೆ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಶಾಲಾ ಕಟ್ಟಡ ದುರಸ್ತಿ ಸಹಿತ ವಿವಿಧ ಪರಿಹಾರ ಕಾರ್ಯಕ್ಕೆ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಕೈಜೋಡಿಸಿ ದರೆ, ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಸಮಾಜಕ್ಕೂ ಉತ್ತಮ ಸಂದೇಶ ರವಾನೆಯಾಗುತ್ತದೆ. ನೆರೆ ಪೀಡಿತ ಪ್ರದೇಶ ದಲ್ಲಿ ಶಾಲೆಗಳ ಪುನರ್‌ ನಿರ್ಮಾಣಕ್ಕೆ ಸಂಪನ್ಮೂಲದ ಕ್ರೋಢೀ ಕರಣವೂ ಆಗಲಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೆರೆ ಪೀಡಿತ ಗ್ರಾಮಗಳ ಶಾಲೆಯ ನಿರ್ಮಾಣಕ್ಕಾಗಿ ಒಂದು ಬಾರಿಗೆ 2019-20ನೇ ಸಾಲಿನ ತಲಾ 50 ಲಕ್ಷ ರೂ.ಗಳನ್ನು ಇಲಾಖೆಗೆ ಒದಗಿಸಲು ಆದೇಶ ನೀಡಬೇಕೆಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.

ಈ ಕಾರ್ಯಕ್ಕೆ ಬೃಹತ್‌ ಪ್ರಮಾಣದಲ್ಲಿ ಅನುದಾನ ಅಗತ್ಯವಿದೆ. ಹಾಗೆಯೇ ಸಾರ್ವ ಜನಿಕ ಸಹಭಾಗಿತ್ವದ ಅವಶ್ಯಕತೆ ಯೂ ಇದೆ. ಸ್ಥಳೀಯ ಹಂತದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಅನುವಾಗು ವಂತೆ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲಾ ಹಂತದಲ್ಲಿ ಕೆಲಸ ಮಾಡಲು ಕೆಲವು ಸಂಸ್ಥೆಗಳು ಮುಂದೆ ಬಂದಿವೆ. ಸರ್ಕಾರದ ಸಹಕಾರ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next