Advertisement

ಜನಪರ ಆಡಳಿತ, ಹಿಂದುತ್ವದ ಉಳಿವಿಗಾಗಿ ಗುರ್ಮೆ ಅವರನ್ನು ಗೆಲ್ಲಿಸೋಣ : ಹರಿಕೃಷ್ಣ ಬಂಟ್ವಾಳ

06:46 PM May 02, 2023 | Team Udayavani |

ಕಾಪು: ಬಿಲ್ಲವರು ಜಾತಿವಾದಿಗಳಲ್ಲ, ರಾಷ್ಟ್ರೀಯವಾದಿಗಳು. ಹಿಂದೂ ಬಿಲ್ಲವರು ರಾಮನ, ಕೃಷ್ಣರ ಅನುಯಾಯಿಗಳಾಗುತ್ತಾರೆಯೇ ಹೊರತು ಕಂಸ, ರಾವಣನ ಅನುಯಾಯಿಗಳಾಗಲ್ಲ. ಭಾರತ್ ಮಾತಾ ಕೀ ಜೈ ಹೇಳುವ ಬಿಜೆಪಿಯ ಅನುಯಾಯಿಗಳಾಗುತ್ತಾರೆಯೇ ಹೊರತು, ವಿನಃ ಸೋನಿಯಾ ಗಾಂಧಿ ಅವರ ಅನುಯಾಯಿ ಆಗಲ್ಲ. ಮೋದಿಗೆ ಜೈ ಹೇಳುತ್ತೇವೆಯೇ ಹೊರತು ರಾಹುಲ್ ಗಾಂಧಿಗೆ ಜೈ ಹೇಳುವುದಿಲ್ಲ. ಜನಪರ ಆಡಳಿತ, ಅಭಿವೃದ್ಧಿ, ಹಿಂದುತ್ವದ ಉಳಿವಿಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು. ಕಾಪುವಿನಿಂದ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಪೂರ್ಣ ಬಹುಮತದಿಂದ ಗೆಲ್ಲಿಸುವಂತೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕರೆ ನೀಡಿದರು.

Advertisement

ಸೋಮವಾರ ಸಂಜೆ ಕಾಪು ವಿಧಾನಸಭಾ ಕ್ಷೇತ್ರ ಹಿರಿಯಡಕ ವೃತ್ತದಲ್ಲಿ ಬಿಜೆಪಿ ವತಿಯಿಂದ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಕಡೆಗಳಲ್ಲೂ ಜನರು ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಜನರ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿದೆ ಎಂದರು.

ಜನರ ಪ್ರತೀ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಜನರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಸುಭದ್ರ, ಶ್ರೇಷ್ಠ ಭಾರತ ನಿರ್ಮಾಣ ಸಾಧ್ಯವಾಗಿದೆ. ರಾಜ್ಯದಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಜನರ ಸರಕಾರವಾಗಿ ಆಡಳಿತ ನಡೆಸಿದೆ. ಕಾಪು ಕ್ಷೇತ್ರದಲ್ಲಿ ಸಾವಿರಾರು ಕೋ. ರೂ. ಅನುದಾನ ಮತ್ತು ಅಭಿವೃದ್ಧಿ ಕೆಲಸಗಳೇ ಇದಕ್ಕೆ ಸಾಕ್ಷಿ ಎಂದರು.

ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಈ ಚುನಾವಣೆಯಲ್ಲಿ ಧರ್ಮ, ಸಂಸ್ಕಾರ ಗೆಲ್ಲಬೇಕು. ಮೋದಿಯವರ ಸಂಕಲ್ಪ ಗೆಲ್ಲಬೇಕು. ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಮೂರು ಸಾವಿರ ಕೋ. ರೂ. ಅಧಿಕ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ತಂದಿದ್ದಾರೆ. ಎಲ್ಲ ಜನರ ಪ್ರೀತಿ, ವಿಶ್ವಾಸ ಪಡೆದು, ಹಿರಿಯರ ಮಾರ್ಗದರ್ಶನದೊಂದಿಗೆ ಕಾಪು ಕ್ಷೇತ್ರ ಮಾದರಿಯಾಗಿ ರೂಪುಗೊಳ್ಳಲು ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು. ತಾನು ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ದೇವರು ಕೊಟ್ಟದರಲ್ಲಿ ತೃಪ್ತನಿದ್ದೇನೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಕಾಪು ಕ್ಷೇತ್ರ ಮಾದರಿ ಕ್ಷೇತ್ರವಾಗಲು ನಿಮ್ಮ ಮತಗಳ ಮೂಲಕ ನನಗೆ ಬಲ ನೀಡಿ ಎಂದರು.

ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಜಿಲ್ಲೆಯಲ್ಲಿ ಕಾಪು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸಲು ಸಾಕಷ್ಟು ಅನುದಾನ ಸರಕಾರದಿಂದ ಮಂಜೂರು ಮಾಡಿಸಿದ್ದೇನೆ. ಹಲವಾರು ಗ್ರಾ. ಪಂ. ಗರಿಷ್ಠ ಅನುದಾನ ನೀಡಲು ಶ್ರಮಿಸಿದ್ದು, ರಸ್ತೆ, ಕುಡಿಯುವ ನೀರು ಮೂಲಸೌಕರ್ಯ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ತನ್ನ ಉತ್ತರಾಧಿಕಾರಿಯಾಗಲಿರುವ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ಬಾರಿ ನಾವೆಲ್ಲಾ ಸೇರಿ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ತನ್ನ ಊರು ಬೊಮ್ಮರಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ 2018ರ ವಿಧಾನಸಭಾ ಚುನಾವಣೆಗೆ ಅತೀ ಹೆಚ್ಚು ಅಂತರದ ಮುನ್ನಡೆ ನೀಡಿತ್ತು. ಈ ಬಾರಿ 2500ಕ್ಕೂ ಅಽಕ ಮತಗಳ ಅಂತರದಲ್ಲಿ ಮುನ್ನಡೆ ನೀಡುತ್ತೇವೆ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಮತ್ತು ಕಾಪು ಕ್ಷೇತ್ರದಲ್ಲಿ ಮಾದರಿಯಾಗಿ ಅಭಿವೃದ್ಧಿ ಕೆಲಸಗಳು ನಡೆದಿದೆ. ಗುರ್ಮೆ ಸುರೇಶ್ ಶೆಟ್ಟಿ ಅವರು ಈಗಾಗಲೆ ಜನಮಾಸದಲ್ಲಿ ಗುರುತಿಸಿಕೊಂಡ ನಾಯಕ, ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸುರೇಶ್ ಶೆಟ್ಟಿ ಅವರಂತಹ ಪ್ರಮಾಣಿಕ ವ್ಯಕ್ತಿತ್ವವನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ಸಂದೀಪ್ ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಪ್ರ.ಕಾರ್ಯದರ್ಶಿ ಅನಿಲ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next