Advertisement

ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸೋಣ: ಸುಣಗಾರ

01:10 PM Jan 13, 2018 | |

ಬಸವನಬಾಗೇವಾಡಿ: ಕಾಂಗ್ರೆಸ್‌ ಪಕ್ಷದಿಂದ ದೇವರಹಿಪ್ಪರಗಿ ಮತಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಇಚ್ಚೆ ಹೊಂದಿದ್ದೇನೆ. ಆದರೆ ಹೈಕಮಾಂಡ್‌ ಬೇರೆ ಯಾರಿಗಾದರೂ ಟಿಕೇಟ್‌ ನೀಡಿದಲ್ಲಿ ನಾನು ಅವರ ಪರವಾಗಿ ಪ್ರಚಾರ ಮಾಡಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಶರಣಪ್ಪ ಸುಣಗಾರ ಹೇಳಿದರು.

Advertisement

ತಾಲೂಕಿನ ಭೈರವಾಡಗಿ ಗ್ರಾಮದ ಲಕ್ಕಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಸಾಧನೆ
ಮನೆ, ಮನೆ ತಲುಪಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1999 ರಲ್ಲಿ ಸಿಂದಗಿ ಮತಕ್ಷೇತ್ರ ಶಾಸಕನಾಗಿ ಹಲವಾರು ಅಭಿವೃದ್ಧಿ ಪರ ಕಾರ್ಯಕ್ರಮ ಮಾಡಿದ್ದೇನೆ. ನಂತರ ಕ್ಷೇತ್ರ
ಪುನರ್‌ ವಿಂಗಡಣೆ ಸಂದರ್ಭದಲ್ಲಿ ಸಿಂದಗಿ ಮತಕ್ಷೇತ್ರ ಬಹುತೇಕ ಹಳ್ಳಿಗಳು ದೇವರಹಿಪ್ಪರಗಿ ಕ್ಷೇತ್ರ ವ್ಯಾಪ್ತಿಯಲ್ಲಿ
ಸೇರಿಕೊಂಡಿವೆ. ಅದಕ್ಕೆ ಈ ಕ್ಷೇತ್ರದಿಂದ ನಾನು ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂದರು.

ಈ ವಿಷಯದ ಬಗ್ಗೆ ರಾಜ್ಯ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ಸಿಂದಗಿ ಹಾಗೂ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಕಳೆದ ನಾಲ್ಕುವರೆ ವರ್ಷದಲ್ಲಿ ಕಾಂಗ್ರೆಸ್‌ ಸರಕಾರ ರಾಜ್ಯದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಕಾರ್ಯಕರ್ತನಾಗಿ, ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ನನಗೆ ಯಾರಿಗೆ, ಯಾವ ಕ್ಷೇತ್ರದಲ್ಲಿ ಟಿಕೇಟ್‌ ದೊರೆಯುತ್ತದೆ ಎಂದು ನಿಶ್ಚಿತವಾಗಿ ಹೇಳಲು ಅಸಾಧ್ಯ. ಪಕ್ಷ ಯಾರಿಗೆ ಟಿಕೇಟ್‌ ನೀಡಿದರು ಒಗ್ಗಟಿನಿಂದ ಅಭ್ಯರ್ಥಿ ಆಯ್ಕೆಗೆ ಶ್ರಮಿಸೋಣ ಎಂದು ಹೇಳಿದರು. 

Advertisement

ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಕಳೆದ 4 ವರ್ಷದಿಂದ ಅಧಿಕಾರದಲ್ಲಿದ್ದರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ ಕಾಂಗ್ರೆಸ್‌ ಸರಕಾರ ರಾಜ್ಯದ ಅನ್ನದಾತನ 50 ಸಾವಿರವರೆಗಿನ ಸಾಲ ಮನ್ನಾ ಮಾಡಿದೆ. ರಾಜ್ಯದ ರೈತರಿಗೆ ಅನೇಕ ಯೋಜನೆ ಜಾರಿಗೆ ತರುವ ಮೂಲಕ ರೈತರ ಸಂಕಟದಲ್ಲಿ ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
 
ಬಿಜೆಪಿ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದೆ. ಇದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ. ಅವರ ಮಿಷನ್‌ 150 ಟುಸ್‌ ಆಗಲಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಚ್ಚತ ಎಂದು ಹೇಳಿದರು.

ಎಂ.ಬಿ. ಹಯ್ನಾಳ, ವಸಂತ ರಡ್ಡಿ, ಕೆಂಪೇಗೌಡ ಕೇಶಪ್ಪಗೋಳ, ನೀಲಕಂಠರಾಯಗೌಡ ಮೂಲಿಮನಿ, ಕೂಡಲಯ್ಯ ಸ್ವಾಮಿಜಿ, ಎಸ್‌.ಬಿ. ಪಾಟೀಲ, ಎಂ.ಎನ್‌. ಪಾಟೀಲ, ಎಸ್‌.ಎಂ. ಉತ್ನಾಳ, ಆಯೂಬ ದೇವರಮನಿ, ಕೆ.ಎಚ್‌. ಸೋಮಪುರ, ನಜೀರಸಾಬ ಪಾನ್‌ ಪರೋಶಿ, ಬಸನಗೌಡ ಬಿರಾದಾರ, ವಿ.ಎಸ್‌. ಪಾಟೀಲ, ಶಂಕರ ಕುರಿ, ಬಾಬುಗೌಡ ಪಾಟೀಲ, ಬಾಳಾಸಾಹೇಬಗೌಡ ಪಾಟೀಲ, ಪಿ.ಜಿ. ಗೋಠೆದ, ಸಂತೋಷ ದೊಡಮನಿ ಇದ್ದರು.
ಮಹೇಶ ಮುರಾಳ ಸ್ವಾಗತಿಸಿದರು. ಇಮಾಬಸಾಬ ಶಾಬಾದಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next