Advertisement
ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ ಮಹಾಕಾವ್ಯದ ಕುರಿತು ಮಾತನಾಡಿದ ಅವರು, ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ತಯಾರಿ ನಡೆಯುತ್ತಿದೆ. ಇಂತಹ ಶುಭಗಳಿಗೆಯಲ್ಲಿ ಬಾಹುಬಲಿಗೆ ಕಾವ್ಯಾಭಿಷೇಕ ಮಾಡಲು ಈ ಮಹಾಕಾವ್ಯ ರಚಿಸಿದ್ದೇನೆ. ಅಹಿಂಸೆಯ ಪ್ರತಿಪಾದಕನಾಗಿದ್ದ ಬಾಹುಬಲಿಯನ್ನು ನೆನೆಯುತ್ತಾ 21ನೇ ಶತಮಾನದ ಕ್ರೂರಹಿಂಸೆ ಮತ್ತು ಭಾವಹಿಂಸೆ ದೂರಾಗಬೇಕು ಎಂದು ಹೇಳಿದರು.
Related Articles
Advertisement
ಇದರ ಇಂಗ್ಲಿಷ್ ಅನುವಾದ ಕೂಡ ಸಿದ್ಧವಾಗಿದೆ. ಜೈನ ಸಾಹಿತ್ಯ, ಪುರಾಣ, ಭರತ-ಬಾಹುಬಲಿಯ ತ್ಯಾಗದ ಇತಿಹಾಸದ ಜತೆಗೆ 21ನೇ ಶತಮಾನದ ತಲ್ಲಣ, ಭಯೋತ್ಪಾದನೆ, ಹಿಂಸೆ, ಶೀತಲ ಸಮರ, ಶೋಷಣೆ, ದುರಾಕ್ರಮಣಗಳ ಮೇಲೆಯೂ ಬೆಳಕು ಚೆಲ್ಲಿದ್ದೇನೆ. ಈ ಮಹಾಕಾವ್ಯ ನನ್ನೊಳಗೂ ಬದಲಾವಣೆ ತಂದಿದೆ. ಮಾಂಸಹಾರದಿಂದ ಶಾಖಾಹಾರಕ್ಕೆ ಪರಿವರ್ತನೆ ಗೊಳ್ಳುವಂತೆ ಮಾಡಿದೆ ಎಂದು ಮನದ ಮಾತು ಹಂಚಿಕೊಂಡರು.
ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಆಧುನಿಕ ಮಹಾಕಾವ್ಯದಲ್ಲಿ ಬಾಹುಬಲಿ ಕೇಂದ್ರಿತವಾಗಿ ಯಾವ ಕಾವ್ಯವೂ ಬಂದಿಲ್ಲ. ಈ ಸಾಹಸವನ್ನು ಮೊಯ್ಲಿಯವರು ಮಾಡಿದ್ದಾರೆ. ಅಣುವಸ್ತ್ರದಿಂದ ಅನುವರ್ತದ ದಾರಿಗೆ ಕೊಂಡೊಯ್ಯುವ ವಿಶೇಷ ಕಾವ್ಯ ಇದಾಗಿದೆ. ರಾಮ, ಲಕ್ಷ್ಮಣ, ಭರತ ಹಾಗೂ ಬಾಹುಬಲಿ ಭಾರತದ ಸಾಂಸ್ಕೃತಿಕ ನಾಯಕರಾಗಿದ್ದು, ಬಾಹುಬಲಿ ಹೊರತುಪಡಿಸಿ ಬೇರೆಲ್ಲ ಬಗ್ಗೆಯೂ ಮಹಾಕಾವ್ಯ ಬಂದಿದೆ.
ಮೊಯ್ಲಿಯವರು ಬಾಹುಬಲಿಯ ಬಗ್ಗೆ ಬರೆದಿದ್ದಾರೆ. ಅಹಿಂಸೆ ದಿಗ್ವಿಜಯದ ಕಡೆಗೆ ಕೊಂಡೊಯ್ಯುವ ಕೃತಿ ಇದಾಗಿದೆ ಎಂದು ಹೇಳಿದರು. ಸಾಹಿತಿ ಪ್ರೊ. ಪದ್ಮಪ್ರಸಾದ್ ಜೈನ್ ಮಾತನಾಡಿ, ಜೈನ ಸಿದ್ಧಾಂತಗಳನ್ನು ಓದಿ, ನಾಲ್ಕು ವರ್ಷದ ಪರಿಶ್ರಮದಿಂದ ಈ ಮಹಾಕಾವ್ಯ ರಚನೆ ಮಾಡಿದ್ದಾರೆ. ಭರತನ ಅಸ್ಥಿತ್ವವನ್ನು ಕುಬjವಾಗಿಸದೇ,
ಕಥಾ ನಾಯಕನ ಗೌರವ ಕಡಿಮೆಯಾಗದ ರೀತಿಯಲ್ಲಿ ಮಹಾಕಾವ್ಯ ರಚನೆ ಮಾಡಿದ್ದಾರೆ. ಸಹನೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಇಂತಹ ಕಾರ್ಯ ಮಾಡಿ ಮುಗಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಣ ತಜ್ಞ ಡಾ.ಕೆ.ಇ.ರಾಧಾಕೃಷ್ಣ, ಸಾಹಿತಿ ಬೈರಮಂಗಲ ರಾಮೇಗೌಡ, ಮಾಹೇಶ್ವರಿ ಪ್ರಕಾಶನದ ಕೆ.ಆರ್.ಕಮಲೇಶ್ ಮೊದಲಾದವರು ಉಪಸ್ಥಿತರಿದ್ದರು.
ಚಿಕ್ಕಂದಿನಿಂದಲೂ ಸಣ್ಣ ಕಥೆ, ಕಾವ್ಯ ಹಾಗೂ ನಾಟಕಗಳನ್ನು ಬರೆಯುತ್ತಿದ್ದೆ. ಶಾಲೆಯಲ್ಲಿ ಅನೇಕ ಕಾರ್ಯಕ್ರಮಕ್ಕೆ ನಾನೇ ನಾಟಕ ಬರೆದುಕೊಟ್ಟಿದ್ದೇನೆ. ಸಾಹಿತ್ಯ ಆಸಕ್ತಿ ಇದ್ದುದ್ದರಿಂದಲೇ ಯಶಸ್ವಿ ರಾಜಕಾರಣಿ ಹಾಗೂ ಆಡಳಿತಾಗರನಾಗಲು ಸಾಧ್ಯವಾಗಿದ್ದು. ಸಮಯದ ಸದುಪಯೋಗ ಮಾಡಿಕೊಂಡಾಗ ಎಲ್ಲವೂ ಸಾಧ್ಯ. ಸಾಹಿತ್ಯದ ಕಾರ್ಯಕ್ಕೆ ರಾಜಕೀಯ ಎಂದೂ ಅಡ್ಡಿ ಬಂದಿಲ್ಲ.-ಡಾ.ಎಂ.ವೀರಪ್ಪ ಮೊಯ್ಲಿ, ಸಂಸದ