Advertisement
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗೆದ್ದು ಬರೀ ನಾಲ್ಕು ವರ್ಷದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ತಾಲೂಕಿನ ಜನರ ಮುಂದೇ ಇಡುತ್ತೇನೆ. ಆದರೆ ನೀವು ನರೇಂದ್ರ ಮೋದಿ ಅವರ ಮೂರುವರೇ ವರ್ಷ ಹಾಗೂ
ವಾಲ್ಮೀಕಿ ನಾಯಕ ಶಾಸಕರಾಗಿದ್ದ ಮೂರುವರೇ ವರ್ಷ ಸೇರಿ ಒಟ್ಟು 7 ವರ್ಷದ ಕಾಲಾವಧಿ ಯಲ್ಲಿ ತಾಲೂಕಿಗೆ ಏನು ಕೊಡುಗೆ ನೀಡಿದ್ದೀರಿ? ಆ ಕೊಡುಗೆಗಳನ್ನು ಮಾತ್ರ ಜನರ ಮುಂದೇ ಇಡಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು ಎಂದರು. ಈ ಹಿಂದೆ 371ನೇ(ಜೆ) ಕಲಂ ಜಾರಿಗೆ ತರಲು ಕೇಂದ್ರ ಸರ್ಕಾರ ಒಪ್ಪಿಗೆ
ಸೂಚಿಸಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವಿರೋಧ ನೀತಿ ತಾಳಿತ್ತು. ಬಿಜೆಪಿ ಕೇಂದ್ರದ ನಾಯಕ ಎಲ್.ಕೆ. ಅಡ್ವಾನಿ 371ನೇ (ಜೆ) ಕಲಂ ಜಾರಿಗೆ ತಂದರೆ ಸಾಮಾಜಿಕ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಹೈದ್ರಾಬಾದ್ ಕರ್ನಾಟಕ ಜನರ ಅಭಿವೃದ್ಧಿಗೋಸ್ಕರ 371ನೇ (ಜೆ) ಕಲಂ ಜಾರಿಗೆ ತಂದಿದೆ. ಅದು ಜಾರಿಗೆ ಬಂದಾಗಿನಿಂದಲೂ ಯಾವುದೇ ಸಾಮಾಜಿಕ ಕ್ರಾಂತಿಯಾಗಿಲ್ಲ ಎಂಬುವುದಕ್ಕೆ ಇದು ತಾಜಾ ಉದಾಹರಣೆಯಾಗಿದೆ ಎಂದು ತಿಳಿಸಿದರು.
ಸ್ಲಂ ಬೋರ್ಡ್ ವತಿಯಿಂದ 1000 ಮನೆಗಳ ನಿರ್ಮಾಣಕ್ಕೆ 55 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಪ್ರಾಯೋಗಿಕವಾಗಿ ಜಿ+1 ನಿರ್ಮಿಸಲಾಗುವುದು. ದೇವರಾಜ ಆವಾಸ್ ಯೋಜನೆಯಲ್ಲಿ 236 ಮನೆಗಳಿಗೆ ಅನುಮೋದನೆ ಸಿಕ್ಕಿದೆ. ಅಲ್ಪಸಂಖ್ಯಾತರಿಗಾಗಿ ಮೌಲಾನ ಅಬ್ದುಲ್ ಕಲಂ ಆಜಾದ್ ಪ್ರಾಥಮಿಕ ಶಾಲೆ ಹಾಗೂ ಪಿಯು ಕಾಲೇಜು ಮತ್ತು ಸದಾºವನಾ ಮಂಟಪಕ್ಕೆ ಅನುಮೋದನೆ
ದೊರಕಿದೆ ಎಂದು ತಿಳಿಸಿದರು. ಪಟ್ಟಣದ ಪದವಿ ಕಾಲೇಜಿಗೆ ಹೆಚ್ಚುವರಿಯಾಗಿ 1.5 ಕೋಟಿ ರೂ. ವೆಚ್ಚದಲ್ಲಿ 6 ಕೋಣೆ ನಿರ್ಮಾಣ ಮಾಡಲಾಗುವುದು. ನಾಗಾವಿ ಮತ್ತು ಸನ್ನತಿಯಲ್ಲಿ ಮಾಸ್ಟರ್ ಪ್ಯಾನ್ ಮಾಡಲು ಅನುಮೋದನೆ ಸಿಕ್ಕಿದೆ. ನಾಗಾವಿಗೆ 8 ಕೋಟಿ, ಸನ್ನತಿಗೆ 7 ಕೋಟಿ ರೂ. ವೆಚ್ಚದಲ್ಲಿ ಖಾಸಾಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತದೆ ಎಂದು ತಿಳಿಸಿದರು. ಕಳೆದ ಒಂದು ವಾರದಿಂದ ಅಕ್ರಮ ಮರಳು
ರಾಶಿ ಮೇಲೆ ಅಧಿಕಾರಿಗಳು ದಿನನಿತ್ಯ ದಾಳಿ ಮಾಡಿ ಪ್ರಕರಣ ದಾಖಲಿಸುತ್ತಿದ್ದಾರೆ.
Related Articles
Advertisement