ಯಡ್ರಾಮಿ: ಜಾತಿ,ಮತ,ಪಂಥ, ರಾಜ ಕೀಯ ಹಾಗೂ ಧರ್ಮರಹಿತವಾಗಿ ಮನುಷ್ಯನ ನೋವಿಗೆ ಸ್ಪಂದಿಸುವುದೇ ಯುವಜನ ಜಾಗೃತಿ ವೇದಿಕೆ ಮುಖ್ಯ ಧ್ಯೇಯವಾಗಿದೆ ಎಂದು ಸಿದ್ಧು ಅಂಕುಶದೊಡ್ಡಿ ಜೇವರ್ಗಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ವೇದಿಕೆ ವತಿಯಿಂದ ಜೇವರ್ಗಿಯ ಯುವಜನ ಜಾಗೃತಿ ವೇದಿಕೆ ಸಹಯೋಗದಲ್ಲಿ ನಡೆದ ಹುಣ್ಣಿಮೆ ಕಾರ್ಯಕ್ರಮ(ಸರಣಿ-32)ದಲ್ಲಿ ಅವರು ಮಾತನಾಡಿದರು.
ಕಲುಷಿತ ವಾತಾವರಣದಲ್ಲಿ ಯುವ ಜನತೆ ದಾರಿ ತಪ್ಪುವುದು ಸಾಮಾನ್ಯವಾಗಿದೆ. ಅಂತಹ ಯುವಕ ಯುವತಿಯರನ್ನು ಶಿಕ್ಷಣದ ಕಡೆಗೆ ಗಮನಹರಿಸುವಂತೆ ಮಾಡಿ ಅವರನ್ನು ಸುಸಂಸ್ಕೃತರನ್ನಾಗಿಸುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ನಮ್ಮ ಯುವಜನ ಜಾಗೃತಿ ವೇದಿಕೆಯು 30 ಕ್ಕೂ ಹೆಚ್ಚು ಜನರಿರುವ ತಂಡದೊಂದಿಗೆ ಜೇವರ್ಗಿ ಅಲ್ಲದೇ ಜಿಲ್ಲೆಯಾದ್ಯಂತ ಸಾಮಾಜಿಕ ಸೇವೆ ಕಳೆದ ಏಳು ವರ್ಷದಿಂದ ಮಾಡಿಕೊಂಡು ಬಂದಿದೆ ಎಂದರು.
ಯಡ್ರಾಮಿ ಕಸಾಪ ಘಟಕದ ನೂತನ ಅಧ್ಯಕ್ಷ ನಾಗಪ್ಪ ಸಜ್ಜನ್, ಗೌರವ ಕಾರ್ಯದರ್ಶಿ ಆರ್.ಜಿ. ಪುರಾಣಿಕ, ಮಲ್ಹಾರಾವ್ ಕುಲಕರ್ಣಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಬಿ.ವಾರದ, ಡಾ| ಮಹಾದೇವಿ ಕುಂಬಾರ, ಶಿಕ್ಷಕ ದೇವು ಹಂಗರಗಿ, ಸಿದ್ಧು ಅಂಕುಶದೊಡ್ಡಿ, ಎಸ್.ಎಸ್.ಪಡಶೆಟ್ಟಿ, ತಮ್ಮ ಪುತ್ರಿಯ ಜನ್ಮದಿನದ ನಿಮಿತ್ತ ಪ್ರಸಾದ ಸೇವೆ ಮಾಡಿದ ಕೃಷ್ಣಮೂರ್ತಿ ಸೋನಾರ ದಂಪತಿಯನ್ನು ಸಂಗಮ ಹಾಗೂ ಯುವಜನ ಜಾಗೃತಿ ವೇದಿಕೆ ವತಿಯಿಂದ ಸತ್ಕರಿಸಲಾಯಿತು. ವೇದಿಕೆ ಗೌರವ ಸಂಚಾಲಕ ಪೂಜ್ಯ ಸಿದ್ಧಲಿಂಗ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವೇದಿಕೆ ಸಂಚಾಲಕ ಪ್ರಕಾಶ ಸಾಹು ಬೆಲ್ಲದ, ಪ್ರಶಾಂತ ಕುನ್ನೂರ, ಲಕ್ಷ್ಮೀಕಾಂತ ಸೋನಾರ, ನಿಂಗನಗೌಡ ಜವಳಗಿ, ಪಿಎಲ್‌ಡಿಇ ಬ್ಯಾಂನಿರ್ದೇಶಕ ಮಂಜುನಾಥ ಕುಲಕರ್ಣಿ, ರುದ್ರಗೌಡ ಪಾಟೀಲ, ಬಸವರಾಜ ಗುರುಶೆಟ್ಟಿ, ಮಂಜುನಾಥ, ಕಿರಣ ಹೂಗಾರ, ಸುರೇಶ ಸಾಹು ಪತ್ತಾರ ಇದ್ದರು. ಸಂತೋಷ ನವಲಗುಂದ ನಿರೂಪಿಸಿ, ವಂದಿಸಿದರು.