ಪುತ್ತೂರು : ಬಪ್ಪಳಿಗೆಯ ಅಂಬಿಕಾ ಬಾಲ ವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷದ ಜೂನ್ ತಿಂಗಳ ಪೋಷಕರ ಸಭೆಯು ಜೂ. 10 ರಂದು ನಡೆಯಿತು.
ಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿದ್ದ ಡಾ| ಪೂರ್ಣ ಸಿ ರಾವ್ ಮಾತನಾಡುತ್ತಾ ಮಗುವಿನ ಮನಸ್ಸು ಹಸಿ ಮಣ್ಣು ಇದ್ದ ಹಾಗೆ ಕುಂಬಾರ ಹಸಿ ಮಣ್ಣನ್ನು ತೆಗೆದು ಹೇಗೆ ಮಡಕೆಯನ್ನು ತಯಾರಿಸುತ್ತಾನೋ ಅದೇ ರೀತಿ ಮಕ್ಕಳನ್ನು ಆರೋಗ್ಯ ವಂತ,ಸುಸಂಸ್ಕೃತರಾಗಿ ರೂಪಿಸಬೇಕು, ಪೋಷಕರಾದವರು ತಮ್ಮ ಮಕ್ಕಳಿಗೆ ಸಮತೋಲಿತವಾದ ಆಹಾರವನ್ನು ಕೊಡಬೇಕು ಎಂದರು.
ನೀರು, ಹಾಲು, ಹಣ್ಣು ಮತ್ತು ಸೊಪ್ಪು ತರಕಾರಿಗಳನ್ನು ನೀಡಿದಾಗ ಮಗು ಆರೋಗ್ಯದಿಂದ ಬೆಳೆಯುತ್ತದೆ.ಮನೆಯಲ್ಲಿ ಮಕ್ಕಳ ಆಟ ಪಾಠ ಊಟ ನೋಟಕ್ಕೇ ಅವಕಾಶಕೊಡಬೇಕು.ಅಪ್ಪ-ಅಮ್ಮನ ಜೊತೆ ಆತ್ಮೀಯತೆ ಬೆಳೆಯುವಂತೆ ಮಗುವಿನ ಜೊತೆ ಮಾತನಾಡಬೇಕು,ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಬಾರದು ಇದ್ದೂ ಮಕ್ಕಳ ಎದುರಲ್ಲಿ ತೋರಿಸ ಬಾರದು, ಅಪರೂಪಕ್ಕೊಂದು ನೋಟ – ಹುಡುಗಿಯರು ಹುಡುಗರು ಎಂಬ ಲಿಂಗ ತಾರತಮ್ಯ ಮಾಡಬಾರದು ಹುಡುಗ -ಹುಡುಗಿಯರಿಗೆ ಗೌರವವನ್ನು ಕೊಡುವುದಕ್ಕೆ ಕಲಿಸಿಕೊಡಿ. ಮನೆಯಿಂದಲೇ ಅತ್ಮಸ್ಥೆçರ್ಯವನ್ನು ತುಂಬಬೇಕೆಂದರು.
ಜೀವನದಲ್ಲಿ ಶಿಸ್ತು ಬೇಕು ಅಶಿಸ್ತು ಬೇಡ ಮಕ್ಕಳು ಸ್ವ ಸಾಮರ್ಥ್ಯ ದಿಂದ ಮುಂದೆ ಬರುವಂತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಪೋಷಕರ ಜೊತೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಅಂತ ರ್ಯದ ನಡುಕವನ್ನು ಹೋಗಲಾಡಿ ಸಲು ಸೂಕ್ತವಾದ ವೇದಿಕೆಯ ಅವಕಾಶ ಮಾಡಿಕೊಡಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪ್ರಾಂಶುಪಾಲ ರಾದ ಸುಜನೀ ಬೋಕರ ತಿಳಿಸಿದರು.
ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಖಜಾಂಜಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಪೋಷಕರು ತಮ್ಮ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಂಡರು. ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಭ್ಯಾಗತರನ್ನು ಸ್ವಾಗತಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಿ. ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಬೋಕರ ಅನುಭವವೇ ಪಾಠಶಾಲೆ ಭೂಮಿಗೆ ಬಂದ ಮಗು ಆರು ವರ್ಷದಲ್ಲಿ ತನ್ನ ಭವಿಷ್ಯವನ್ನು ನಿರ್ಧರಿಸುತ್ತದೆ.ಎಂಬ ಅಧ್ಯಕ್ಷೀಯ ನುಡಿ ಗಳೊಂದಿಗೆ ಮಾತನಾಡಿದರು. ಕನ್ನಡ ಉಪನ್ಯಾಸಕ ಸತೀಶ್ ವಂದಿಸಿದರು.