Advertisement

ನಮ್ಮ ಕನಸುಗಳಿಗೆ ಬಣ್ಣ ತುಂಬೋಣ

11:53 PM Mar 10, 2021 | Team Udayavani |

ಮುಂದೆ ಗುರಿ, ಹಿಂದೆ ಗುರು, ಸಾಗುತ್ತಿದೆ ರಣಧೀರರ ಸಾಲು
– ರಾಷ್ಟ್ರಕವಿ ಕುವೆಂಪು ಅವರ ಈ ಸಾಲುಗಳು ಜೀವನದಲ್ಲಿ ಗುರಿ ಹಾಗೂ ಮಾರ್ಗದರ್ಶಿಯ ಮಹತ್ವವನ್ನು ಸಾರು ತ್ತದೆ. ಜೀವನದಲ್ಲಿ ನಾವು ಏನಾದರೂ ಉತ್ತಮ ಸಾಧನೆ ಮಾಡಬೇಕಾದರೆ ಕನಸುಗಳನ್ನು ಕಾಣಬೇಕು. ನಾವು ಮುಂದೇನಾಗ
ಬೇಕು, ಮುಂದೆ ಏನು ಮಾಡಬೇಕು, ನಾವು ಯಾವ ದಾರಿಯಲ್ಲಿ ನಡೆಯಬೇಕು, ಏನೇನು ತಯಾರಿ ಮಾಡಿಕೊಳ್ಳಬೇಕು, ಹೀಗೆ ಸಾಗಬೇಕು ನಮ್ಮ ಕನಸುಗಳು.

Advertisement

“ನಾವು ಕಂಡ ಕನಸಿನ ಬೆನ್ನೇರಿ ಸತತ ಪರಿಶ್ರಮದಿಂದ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಬಲು ಎತ್ತರಕ್ಕೆ ಬೆಳೆಯಬೇಕು’ ಎಂದು ಸದಾ ನುಡಿಯುತ್ತಿದ್ದ ಮಾಜಿ ರಾಷ್ಟ್ರಪತಿ ಡಾ|ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಮಾತುಗಳು ಬಹಳ ಪ್ರಸ್ತುತ.
ನಾವು ಕನಸು ಕಾಣಬೇಕು, ಆದರೆ ರಾತ್ರಿ ಕಂಡು ಬೆಳಗ್ಗೆ ಮರೆಯುವು ದಕ್ಕಲ್ಲ. ನಾವು ಕಾಣುವ ಕನಸುಗಳು ಆಲೋಚನೆಗೆ ಗ್ರಾಸವನ್ನು ಒದಗಿಸಬೇಕು.

ನಮ್ಮ ಆಲೋಚನೆಗಳು ಯೋಚನೆ ಹಾಗೂ ಯೋಜನೆಗಳಿಗೆ ಮತ್ತು ಮುಂದಕ್ಕೆ ಪ್ರಗತಿಪರ ಕ್ರಿಯೆಗಳಿಗೆ ನಾಂದಿಯಾಗಬೇಕು. ಕನಸುಗಳು ಬದುಕಿನ ಸಾಧನೆಗಳಿಗೆ ಮಾರ್ಗದರ್ಶಿಯಾಗಬೇಕು. ಕನಸುಗಳನ್ನು ನನಸು ಮಾಡುವುದು ನಮ್ಮ ಗುರಿಯಾಗಬೇಕು.

ಕನಸು-ಗುರಿ ಒಂದೇ ನಾಣ್ಯದ ಎರಡು ಮುಖಗಳು. ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರು ಶಿಷ್ಯರಿಗೆ ಬಿಲ್ವಿದ್ಯೆಯನ್ನು ಧಾರೆಯೆರೆದು ಪರೀಕ್ಷೆ ಮಾಡಲು ಮುಂದಾಗುತ್ತಾರೆ. ಮರದ ಮೇಲೆ ಗಿಳಿಯ ಗೊಂಬೆಯನ್ನಿಟ್ಟು, ಅದರ ಕಣ್ಣಿಗೆ ಬಾಣ ಹೂಡಲು ಹೇಳುತ್ತಾರೆ. ನಿಮಗೇನು ಕಾಣುತ್ತದೆ ಎಂಬ ದ್ರೋಣಾಚಾರ್ಯರ ಪ್ರಶ್ನೆಗೆ ಭೀಮನ ಉತ್ತರ ಮರ, ಇನ್ನೊಬ್ಬನ ಉತ್ತರ ಗಿಳಿ ಎಂದು, ಆದರೆ ಅರ್ಜುನನ ಉತ್ತರ ಗಿಳಿಯ ಕಣ್ಣು, ಆದುದರಿಂದ ಸ್ಪಷ್ಟವಾದ ಗುರಿಯಿದ್ದ ಅರ್ಜುನ ಶ್ರೇಷ್ಠ ಬಿಲ್ಗಾರನಾಗುತ್ತಾನೆ.

“ಗುರಿಯನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನಶೀಲರಾಗಿ. ನಿಮ್ಮ ಯಶಸ್ಸಿನ ಮೂಲಕ ಎಲ್ಲ ತೊಂದರೆಗಳು ಮಾಯವಾಗಲಿದೆ’ ಎನ್ನುತ್ತಾರೆ ಪ್ರಾಜ್ಞರು. ನಮಗೆಲ್ಲರಿಗೂ ಸಮಾನ ಪ್ರತಿಭೆ ಇಲ್ಲದಿರಬಹುದು, ಆದರೆ ಸಮಾನ ಅವಕಾಶ ಇದ್ದೇ ಇದೆ. ನಮ್ಮ ಜೀವನದಲ್ಲಿ ಗುರಿ ಮತ್ತು ಕನಸು ಎರಡೂ ಇವೆಯೇ?, ಹಾಗಾದರೆ ಸಂಪೂರ್ಣ ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಾ ಮುನ್ನಡೆಯಿರಿ. ನಾವು ಎತ್ತರ ಬೆಳೆಯಲು ನಮ್ಮೊಳಗಿನ ಮನೋಧರ್ಮ ಹಾಗೂ ನಾವು ಹೇಗೆ ನಮಗೆದುರಾದ ಸಮಸ್ಯೆಗಳಲ್ಲಿ ಅವಕಾಶ ವನ್ನು ಕಂಡುಕೊಳ್ಳುತ್ತೇವೆ ಎನ್ನುವುದರಲ್ಲಿ ಅಡಗಿದೆ. ಕನಸು, ಪ್ರಯತ್ನ, ಸಾಧನೆ ಇವು ಮೂರೂ ನಮ್ಮ ಜೀವನದ ಭಾಗವಾಗಬೇಕು. ಇವು ಮೂರನ್ನು ನಾವು ನಿರ್ಲಕ್ಷಿಸುವಂತಿಲ್ಲ. ಕನಸು ಕಂಡಾಗ ಅದನ್ನು ನನಸಾಗಿರುವ ಛಲ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ನಿರಂತರ ಪ್ರಯತ್ನ ಅತ್ಯವಶ್ಯ. ಇದರಿಂದ ಸಾಧನೆ ಅಥವಾ ಯಶಸ್ಸು ಸಾಧ್ಯ.

Advertisement

ನಮ್ಮ ಸಂಸ್ಕೃತಿಯಲ್ಲಿ ಮಕ್ಕಳ ಮಾರ್ಗ ದರ್ಶಿಯಾಗಿ ಹೆತ್ತವರು ಹಾಗೂ ಶಿಕ್ಷಕರ ಮಹತ್ತರವಾದ ಪಾತ್ರ ಇದ್ದೇ ಇದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಮಾನವನಲ್ಲಿ ಸಹಜವಾಗಿ ಹುದುಗಿರುವ ಪರಿಪೂರ್ಣತೆಯನ್ನು ಪ್ರಕಾಶಿಸುವಂತೆ ಮಾಡುವ ಮಾಧ್ಯಮ.

ಒಂದರ್ಥದಲ್ಲಿ ಎಲ್ಲರೂ ಶಿಕ್ಷಕರೇ, ಕನಸುಗಳಿಗೆ ಬಣ್ಣ ತುಂಬಿ, ಕನಸುಗಳು ಸಾಕಾರವಾಗಲು ಬೇಕಾದ ಅಗತ್ಯ ವಾತಾವರಣ ಹೊಂದಿಸಿಕೊಂಡು, ಯೋಜನೆ, ಸಾಧನೆಗಳಿಗೆ ಮಾರ್ಗದರ್ಶಿ ಯಾಗುವುದು. ಕನಸುಗಳು, ಗುರಿ ಹಾಗೂ ಪ್ರಯತ್ನಗಳ ಮೂಲಕ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗೋಣ.

- ಡಾ| ಎ. ಜಯಕುಮಾರ ಶೆಟ್ಟಿ , ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next