ಮೈಸೂರು: ಜೀವನದಲ್ಲಿ ನಿಶ್ಚಿತತೆ, ನಿಶ್ಚಿಂತೆಯೊಂದಿಗೆ ಸಂದೇಹವಿಲ್ಲದೆ ಮುನ್ನಡೆದಾಗ ಯಶಸ್ಸು ಪಡೆಯಲು ಸಾಧ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಸ್ಥೆ ದಾದಿ ಜಾನಕೀಜಿ ಸಲಹೆ ನೀಡಿದರು.
ಮೈಸೂರು ತಾಲೂಕಿನ ಲಿಂಗದೇವರಕೊಪ್ಪಲಿನಲ್ಲಿರುವ ಜ್ಞಾನ ಸರೋವರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಚೇತನಗಳನ್ನು ಬೆಳಗಿಸುವ ಅಪರೂಪದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಭಗವಂತ ನಮ್ಮ ತಂದೆಯಾಗಿ, ಶಿಕ್ಷಕನಾಗಿ ಮಾರ್ಗದರ್ಶನ ನೀಡುತ್ತಿದ್ದು,
ಬ್ರಹ್ಮಬಾಬಾರ ಮೂಲಕ ಸಾಕಾರದ ಅನುಭವ ನೀಡುತ್ತಿ¨ªಾನೆ. ನಮ್ಮ ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ಅನುಭವ ನೀಡಲಿದ್ದು, ನಾವೆಲ್ಲರೂ ಒಟ್ಟಾಗಿ ಶ್ರಮಿಸುವ ಮೂಲಕ ವಿಶ್ವವನ್ನು ಪರಿವರ್ತನೆ ಮಾಡಲು ಮುಂದಾಗೋಣ ಎಂದು ಹೇಳಿದರು.
ಕತ್ತಲು ಹೋಗಲಾಡಿಸಿ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಒಂದು ಕಾಲದಲ್ಲಿ ಇಡೀ ಸಮಾಜ ಕತ್ತಲಿನಿಂದ ಆವರಿಸಿತ್ತು, ಕತ್ತಲು ಎಂಬುದನ್ನು ಹೋಗಲಾಡಿಸಬೇಕಿದೆ.
ಆಧುನಿಕ ಯುಗದಲ್ಲಿ ವಿಶ್ವ ಎರಡು ಮಹಾಯುದ್ಧಗಳಿಗೆ ಸಾಕ್ಷಿಯಾಗಿದ್ದು, ಇದಕ್ಕೆ ಕಾರಣಕರ್ತರು ಯಾರು ಎಂದು ಪ್ರಶ್ನಿಸಿದ ಅವರು, ವಿಜ್ಞಾನ ಎಂಬುದು ಬಾಹ್ಯವಾಗಿ ಎಲ್ಲವನ್ನೂ ನೀಡಿದ್ದರು ಆಂತರಿಕವಾಗಿ ಏನನ್ನು ನೀಡಿಲ್ಲ. ವಿಜ್ಞಾನ ಮಾನವನ ಮನಸ್ಸಿನ ನೋಮ, ಸಮಸ್ಯೆ ಹೋಗಲಾಡಿಸುವುದಿಲ್ಲ ಎಂದರು.
ಮನಸ್ಸು ಹಾಗೂ ಅಂತಃಕರಣ ಶುದ್ಧವಾಗಿರಬೇಕಿದ್ದು, ಇದರಿಂದ ಜೀವನದಲ್ಲಿರುವ ಕತ್ತಲು ಹೋಗಲಾಡಿಸಲು ಸಾಧ್ಯವಿದೆ. ಇದು ಆಧ್ಯಾತ್ಮದ ಮೂಲಕ ಸಾಧ್ಯ. ದಾದೀಜಿ ಅವರು ಇದನ್ನು ಸಾಧಿಸಿದ್ದಾರೆ. ಹೀಗಾಗಿ ಜೀವನದಲ್ಲಿ ಸ್ವಾರ್ಥವನ್ನು ಬಿಟ್ಟು,
ಸಮಾಜದಲ್ಲಿ ನಮ್ಮ ಪಾತ್ರ ಏನೆಂಬುದನ್ನು ತೋರಿಸುವ ಕಡೆಗೆ ಗಮನವಹಿಸಬೇಕಿದೆ. ಆಲ್ಬರ್ಟ್ ಐನ್‌ಸ್ಟಿನ್ ಹೇಳಿರುವಂತೆ ಸಮಸ್ಯೆ ಅರ್ಥಮಾಡಿಕೊಂಡರೆ ಅದನ್ನು ಬಗೆಹರಿಸಲು ಸುಲಭವಾಗಲಿದ್ದು, ಇದಕ್ಕಾಗಿ ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.