Advertisement

‘ತುಳು ಸಂಸ್ಕೃತಿ ಅಭಿವೃದ್ಧಿಗೆ ಕೈಜೋಡಿಸೋಣ’

03:06 PM May 06, 2018 | |

ಬಂಟ್ವಾಳ : ತುಳು ಭಾಷೆಯ ಉಳಿವು-ಬೆಳವಣಿಗೆಗಾಗಿ ಶಾಲೆಗಳಲ್ಲಿ ತುಳುವನ್ನು ಮೂರನೇ ಭಾಷೆಯಾಗಿ ಕಲಿಸಲು ಸರಕಾರ ಅನುಮತಿ ನೀಡಿದೆ. ತುಳು ಸಂಸ್ಕೃತಿ, ತುಳು ಭಾಷೆ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಕರೆ ನೀಡಿದರು.

Advertisement

ಅವರು ಮೇ 4ರಂದು ಮಂಚಿ ನೂಜಿಬೈಲು ಅನುದಾನಿತ ಹಿ.ಪ್ರಾ. ಶಾಲಾ ವಠಾರದಲ್ಲಿ ಬಿ.ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್‌ ಆಶ್ರಯದಲ್ಲಿ ಜರಗಿದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ದಶಮಾನದ ಸಂಭ್ರಮ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡಬಿದಿರೆಯ ಇತಿಹಾಸ ಸಂಶೋಧಕ ಡಾ| ಪುಂಡಿಕಾಯಿ ಗಣಪಯ್ಯ ಭಟ್‌ ಮಾತನಾಡಿ, ರಂಗಾಸಕ್ತರಾದ ಬಿ.ವಿ. ಕಾರಂತರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು ಪವಾಡವೇ ಸರಿ. ಬಿ.ವಿ. ಕಾರಂತ ರಂಗ ಭೂಮಿಕಾ ಟ್ರಸ್ಟನ್ನು ಸ್ಥಾಪಿಸಿ ನಡೆಸಿಕೊಂಡು ಬರುವ ಜತೆಗೆ ಒಂಬತ್ತು ವರ್ಷಗಳಿಂದ ನಾಟಕೋತ್ಸವ ಮಾಡಿಕೊಂಡುರುತ್ತಿರುವುದು ಪವಾಡವೇ ಸರಿ ಎಂದರು.

ಇದೇ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ದೇರಳ ಕಟ್ಟೆ ಕಣಚ್ಚಾರು ಮೆಡಿಕಲ್‌ ಕಾಲೇಜು ಫಿಸಿಶಿಯನ್‌ ಡಾ| ಲ. ಗೋಪಾಲ್‌ ಆಚಾರ್‌ ಉಪಸ್ಥಿತರಿದ್ದರು. ಟ್ರಸ್ಟ್‌ ಅಧ್ಯಕ್ಷ ಕಜೆ ರಾಮಚಂದ್ರ ಭಟ್‌ ಸ್ವಾಗತಿಸಿ, ಶಿಕ್ಷಕ ಮೇರಾವು ಉಮಾನಾಥ ರೈ ವಂದಿಸಿದರು. ರಮಾನಂದ ನೂಜಿಪಾಡಿ ನಿರೂಪಿಸಿದರು. ಅನಂತರ ನವಸುಮ ರಂಗಮಂಚ ರಿ. ಕೊಡವೂರು ಉಡುಪಿ ಇವರಿಂದ ‘ದುರ್ದುಂಡೆ ದ್ರೌಣಿ’ ತುಳು ನಾಟಕ ಜರಗಿತು.

ಸಂಸ್ಕೃತಿ-ಸಂಸ್ಕಾರ ತುಂಬಿರಲಿ
ಸಂಸ್ಕೃತಿ-ಸಂಸ್ಕಾರ ಇರುವಂತಹ ನಾಟಕ ಪ್ರದರ್ಶನ ಆಗಬೇಕು. ನಾಟಕ ಒಂದು ವಿಚಾರವನ್ನು ಜನರಿಗೆ ಮುಟ್ಟಿಸುವಾಗ ಅದರ ಪರಿಣಾಮ ಆಗುತ್ತದೆ. ಯಕ್ಷಗಾನ ಪರಂಪರೆ ಜ್ಞಾನದ ಸಂಪತ್ತನ್ನು ನೀಡಿದೆ. ನಾಟಕ ಯುವ ಸಮೂಹವನ್ನು ಹೆಚ್ಚಾಗಿ ತಟ್ಟುವುದರಿಂದ ಸಂಸ್ಕಾರ ನೀಡುವಲ್ಲಿ ಇದು ಮಹತ್ತರವಾದುದು.
– ಎ.ಸಿ. ಭಂಡಾರಿ, ಅಧ್ಯಕ್ಷರು,
ತುಳು ಸಾಹಿತ್ಯ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next