Advertisement

ಕಲಾ ಜಗತ್ತಿನಲ್ಲಿ ಮತ್ತಷ್ಟು ಬೆಳೆಯೋಣ

11:45 PM Aug 13, 2022 | Team Udayavani |

ನಿರ್ಮಲ, ಸ್ವಚ್ಛ, ಬಲಿಷ್ಠ ರಾಷ್ಟ್ರ  ನಮ್ಮದಾಗಬೇಕು. ಇದು ನನ್ನ ಕನಸು, ಎಲ್ಲರ ಕನಸು ಕೂಡ. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಆಗಬೇಕು. ಇದು ಈವರೆಗೂ ಸಾಧ್ಯವಾಗಿಲ್ಲ. ಎಲ್ಲೋ ಒಂದು ಕಡೆ ಆ ನೋವು ಇದೆ.  ವ್ಯವಸ್ಥಿತವಾಗಿ ಯೋಜನೆಗಳನ್ನು ಹಾಕಿಕೊಂಡು ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆಯಬೇಕು. ನಗರ ಪ್ರದೇಶಗಳಲ್ಲಿ  ಟ್ರಾಫಿಕ್‌ ಸಮಸ್ಯೆ ನಮಗೆ ಹೆಚ್ಚು ಬಾಧಿಸಬಾರದು. ವಾತಾವರಣ ಕಲುಷಿತವಾಗಬಾರದು. ಸಾವಿರಾರು ವರ್ಷಗಳ ಭವ್ಯ ಇತಿಹಾಸ ನಮ್ಮದಾಗಿದೆ. ನಮ್ಮ ಕಲಾ ಸಂಪತ್ತು ವಿಶ್ವ ಮಾನ್ಯವಾಗಿದೆ. ಕಲಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ಆಗಬೇಕು. ಇದು ನನ್ನ ದೊಡ್ಡ ಕನಸು.

Advertisement

ನಮ್ಮ ಕಲೆಗಳನ್ನು ಪ್ರಪಂಚದಲ್ಲಿ ಹೆಚ್ಚು ಗೌರವದಿಂದ ನೋಡುತ್ತಾರೆ. ನಾವು ನಮ್ಮ ಕಲೆಗಳ ಬಗ್ಗೆ ಹೆಚ್ಚು ಗೌರವ ಹೊಂದಬೇಕು. ಭಾಷೆ, ಕಲೆಗಳ ಬಗ್ಗೆ ನಾವುಗಳೇ ಹೆಚ್ಚು ಗೌರವ ತೋರದಿದ್ದರೆ ಬೇರೆ ಯಾರು ತೋರಿಸುತ್ತಾರೆ? ಭ್ರಷ್ಟಾಚಾರವನ್ನು ತಿರಸ್ಕರಿಸಬೇಕು. ಸುಂದರವಾದ ಸ್ವತ್ಛ ಸಮಾಜ ನಿರ್ಮಾಣವಾಗಬೇಕು. ಎಲ್ಲರೂ ಎಲ್ಲರನ್ನೂ ಪ್ರೀತಿಸಬೇಕು, ಎಲ್ಲರ ಬಗ್ಗೆ ಎಲ್ಲರಿಗೂ ನಂಬಿಕೆ ಇರಬೇಕು. ಎಲ್ಲರೂ ನಮ್ಮವರು ಎಂಬ ಭಾವನೆ ಬರಬೇಕು. ನಿರೀಕ್ಷೆಗಳು ಸಾವಿರಾರು, ಕನಸುಗಳ ಸಾವಿರಾರು. ಇದು ಸಾಕಾರವಾಗಬೇಕು ಅಂದರೆ ನಮಗೆಲ್ಲರಿಗೂ ಇಚ್ಛಾಶಕ್ತಿ ಇರಬೇಕು. ಬದಲಾವಣೆಗಳು ನಮ್ಮಿಂದಲೇ ಏಕೆ ಪ್ರಾರಂಭವಾಗಬಾರದು ಎಂದು ಯೋಚಿಸಿ ನಾವು ಬದಲಾಗಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು.

-ಮೈಸೂರು ಮಂಜುನಾಥ್‌,
ಅಂತಾರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕರು

 

Advertisement

Udayavani is now on Telegram. Click here to join our channel and stay updated with the latest news.

Next