Advertisement
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಿ ಕೆಲವು ನಾಯಕರು ಎಲ್ಲಿ ನಮಗೆ ಮೇಲಿಂದ ನೋಟಿಸ್ ಬರುತ್ತದೆಯೋ ಎಂದು ಹೆದರಿ ಒಳಗೆ ಕುಳಿತಿದ್ದಾರೆ. ಅವರು ಯಾರು ಎಂದು ಮಾಧ್ಯಮ ಸೇರಿ ಜನಸಾಮಾನ್ಯರಿಗೂ ಗೊತ್ತಿದೆ.
ಲಿಂಗಾಯತ ಧರ್ಮದ ಹೋರಾಟದಲ್ಲಿ ಯಾರೆಲ್ಲ ಇಲ್ಲವೋ ಅವರೆಲ್ಲ ಒಳಗೆ ಕುಳಿತಂತೆ ಎಂದು ತಿಳಿದುಕೊಳ್ಳಿ. ನನಗೊಬ್ಬ ಯಾವುದೋ ಮಠದ ಸ್ವಾಮೀಜಿ ನೋಟಿಸ್ ಕಳಿಸಿದ್ದಾರೆ. ಅಂಥ ನೂರು ನೋಟಿಸ್ ಬಂದರೂ ನಾನು ಯಾವುದೇ ಕಾರಣಕ್ಕೂ ಹೆದರಲ್ಲ ಎಂದರು.