Advertisement
ಮಂಗಳವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ಕುಂಬಾರ ಸಮಾಜ ರಾಜಕೀಯವಾಗಿ ಬಹಳ ಹಿಂದುಳಿದಿದೆ. ಸಮಾಜದಲ್ಲಿ ಏನಾದರೂ ಬೆಳವಣಿಗೆ ಆಗಬೇಕಾದರೆ ನಾವು ಹಾಕಿಕೊಂಡಿರುವ ಯೋಚನೆ ಯೋಜನೆಗಳಾಗಿ ಅನುಷ್ಠಾನಕ್ಕೆ ಬರಬೇಕು. ಆಗಲೇ ಸರ್ವಜ್ಞ ಎಂಬ ಮಹಾತ್ಮನ ಬಡ ಸಮಾಜ ಅಭಿವೃದ್ಧಿ ಸಾಧಿ ಸಿ ಸಮಾಜದಲ್ಲಿ ಸುಧಾರಣೆ ಕಾರಣಲು ಸಾಧ್ಯ. ಸರ್ಕಾರ ಸರ್ವಜ್ಞರ ವೃತ್ತ, ಭವನವನ್ನು ನಿರ್ಮಿಸಬೇಕು. ಕುಂಬಾರ ಸಮಾಜದಲ್ಲಿ ಜನಿಸಿದ ಸರ್ವಜ್ಞ ಸಂತ ಸರ್ವ ಸಮಾಜದ ಆದರ್ಶ ಕಾಯಕವಾದಿ ಎಂದು ವಿವರಿಸಿದರು.
ಪಾಲಿಕೆ ಸದಸ್ಯ ಉಮೇಶ ವಂದಾಲ, ಆರ್. ಕುಂಬಾರ, ಜಿ.ವಿ. ದಶವಂತ, ಸಿ.ಬಿ. ಕುಂಬಾರ, ಎಸ್ .ಪಿ. ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಎಸ್.ಜಿ. ಕುಂಬಾರ ಸೇರಿದಂತೆ ಇದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಮಹೇಶ ಪೋತದಾರ ನಿರೂಪಿಸಿದರು. ಶಶಿಕಲಾ ಕುಲಹಳ್ಳಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದರೆ, ನವರಸ ನೃತ್ಯ ಕಲಾ ಸಂಸ್ಥೆಯ ರಂಗನಾಥ ಬತ್ತಾಸೆ ನೇತೃತ್ವದಲ್ಲಿ ಕಲಾವಿದರು ಸರ್ವಜ್ಞರ ನೃತ್ಯ ರೂಪಕ ಪ್ರದರ್ಶಿಸಿದರು. ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಕುಂಭಮೇಳದೊಂದಿಗೆ ಮೆರವಣಿಗೆ ನಡೆಯಿತು. ಉಪ ವಿಭಾಗಾಧಿಕಾರಿ ಡಾ| ಶಂಕರ ವಣಕ್ಯಾಳ ಮೆರವಣಿಗೆಗೆ ಚಾಲನೆ ನೀಡಿದರು.