Advertisement

ಪ್ರಾಂತೀಯ ಭದ್ರತಾ ವ್ಯವಸ್ಥೆ ಬರಲಿ: ಮೋದಿ

06:00 AM Nov 15, 2017 | Team Udayavani |

ಮನಿಲಾ: ಭಾರತ- ಪೆಸಿಫಿಕ್‌ ಪ್ರಾಂತ್ಯದಲ್ಲಿ ನಿಯಮಾಧಾರಿತ ಪ್ರಾಂತೀಯ ಭದ್ರತಾ ವ್ಯವಸ್ಥೆ ಜಾರಿಗೊಳ್ಳಬೇಕಿದೆ ಎಂದು ಪ್ರಧಾನಿ  ಮೋದಿ ಏಷ್ಯಾದ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

Advertisement

ಆಸಿಯಾನ್‌-ಭಾರತ ಹಾಗೂ ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗದಲ್ಲಿ ಮಂಗಳವಾರ ಮಾತನಾಡಿದ ಪ್ರಧಾನಿ ಮೋದಿ, ಉಗ್ರವಾದ, ತೀವ್ರವಾದ, ಗಡಿ ಯಾಚೆಗಿನ ಭಯೋತ್ಪಾದನೆಗಳು ದಕ್ಷಿಣ ಏಷ್ಯಾ ರಾಷ್ಟ್ರಗಳು ನಿತ್ಯವೂ ಎದುರಿಸುತ್ತಿರುವ ಗುರುತರ ಸವಾಲುಗಳಾಗಿವೆ. ಈ ಸವಾಲನ್ನು ಹೆಡೆಮುರಿ ಕಟ್ಟಲು ಎಲ್ಲ ರಾಷ್ಟ್ರಗಳೂ ಕೈಜೋಡಿಸಬೇಕೆಂದು ಮೋದಿ ಆಗ್ರಹಿಸಿದರು.

“ನಿಯಮಾಧಾರಿತ ಪ್ರಾಂತೀಯ ಭದ್ರತಾ ವ್ಯವಸ್ಥೆಯ ರಚನೆಗೆ ಭಾರತವು ಎಂದೆಂದಿಗೂ ಬೆಂಬಲ ನೀಡುತ್ತದೆ ಎಂದು ಆಸಿಯಾನ್‌ ರಾಷ್ಟ್ರ ಗಳಿಗೆ ಭಾರತ ಭರವಸೆ ನೀಡುತ್ತದೆ’ ಎಂದ ಅವರು, “ಇಂಥದ್ದೊಂದು ಭದ್ರತಾ ವ್ಯವಸ್ಥೆ ಏಷ್ಯಾ ಪೆಸಿಫಿಕ್‌ ಪ್ರಾಂತ್ಯದ ಬೆಳವಣಿಗೆ ಹಾಗೂ ಶಾಂತಿಯುತ ಸಹಬಾಳ್ವೆಗೆ ಪೂರಕವಾದ ವಾತಾವರಣ ನಿರ್ಮಿಸಿ ಕೊಡಲಿದೆ’ ಎಂದರು. ಅಲ್ಲದೆ, ಇದನ್ನು ಸಾಧಿಸಲು ಜಗತ್ತಿನ ದೈತ್ಯ ರಾಷ್ಟ್ರಗಳ ಜತೆ ಮಾತುಕತೆ ನಡೆಸಿ ಸೂಕ್ತ ರಣತಂತ್ರವನ್ನು ರೂಪಿಸುವಂತೆಯೂ ಆಸಿಯಾನ್‌ ದೇಶಗಳ ನಾಯಕರಿಗೆ ಕರೆ ನೀಡಿದರು.

ಮೋದಿ ಅವರ ಈ ಕರೆ, ಈಗಾಗಲೇ ಅಮೆರಿಕ, ಜಪಾನ್‌, ಆಸ್ಟ್ರೇಲಿಯಾ ಜತೆ ಉಗ್ರವಾದದ ವಿರುದ್ಧ ಹೊಸ ರಣತಂತ್ರ ರೂಪಿಸುತ್ತಿರುವ ಮಹಾನ್‌ ಯೋಜನೆಗೆ ಮತ್ತಷ್ಟು ಶಕ್ತಿ ತುಂಬುವ ಪ್ರಯತ್ನ ಎಂದೇ ಹೇಳಲಾಗುತ್ತಿದೆ. ಅಲ್ಲದೆ, ಭಾರತದ ಗಡಿಯಲ್ಲಿ ತನ್ನ ಸೇನಾ ಬಲ ಪ್ರದರ್ಶಿಸುವ ಚೀನಕ್ಕೆ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದರು.

ತಮ್ಮ ಭಾಷಣದಲ್ಲಿ, ಏಷ್ಯಾ ಪೆಸಿಫಿಕ್‌ ವಲಯ ವನ್ನು ಪರಮಾಣು ಮುಕ್ತ ಪ್ರಾಂತ್ಯವನ್ನಾಗಿಸ ಬೇಕೆಂದು ತಾಕೀತು ಮಾಡಿರುವ ಪ್ರಧಾನಿ ಮೋದಿ, ಉತ್ತರ ಕೊರಿಯಾದಿಂದ ವ್ಯಕ್ತವಾಗಿರುವ ಪರಮಾಣು ಶಸ್ತ್ರಾಸ್ತ್ರ ಭೀತಿಯ ಹಿಂದಿನ ಕಾಣದ ಕೈಗಳನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದರು. ಈ ಮೂಲಕ, ಅಮೆರಿಕದ ವಿರುದ್ಧ  ಸಡ್ಡು ಹೊಡೆದಿ
ರುವ ಉತ್ತರ ಕೊರಿಯಾದ ರಣೋತ್ಸಾಹಕ್ಕೆ ಬೆಂಬಲ ವ್ಯಕ್ತಪಡಿಸಿರುವ ಪಾಕಿಸ್ಥಾನಕ್ಕೂ ಪರೋಕ್ಷವಾಗಿ ಚಾಟಿ ಬೀಸಿದರು.

Advertisement

ಮುಂದಿನ ವರ್ಷ ನಡೆಯಲಿರುವ ಆಸಿಯಾನ್‌ ಶೃಂಗಸಭೆಯು ಭಾರತದ ಗಣರಾಜ್ಯೋತ್ಸವ ದಿನಾ ಚರಣೆಗೂ ಮುನ್ನಾದಿನ (ಜ. 25) ಜರಗುವಂತಾ ಗಲಿ ಎಂದು ಆಶಿಸಿದರಲ್ಲದೆ, ಭಾರತದ 1.25 ಬಿಲಿಯನ್‌ ನಾಗರಿಕರು ನಾಯಕರನ್ನು ಸ್ವಾಗತಿಸಲು ಸಜ್ಜಾಗಿರಲಿದ್ದಾರೆಂದು ವಾಗ್ಧಾನ ನೀಡಿದರು.

ಇದೇ ವೇಳೆ, ಕಾನೂನುಬಾಹಿರ ಹಣ ವರ್ಗಾವಣೆ ಹಾಗೂ ಗಡಿಯಾಚೆಗಿನ ಭಯೋ ತ್ಪಾದಕತೆಗೆ ನಿಧಿ ಸಂಗ್ರಹಣೆಯಂಥ ಕುಕೃತ್ಯಗಳನ್ನು ತಡೆಗಟ್ಟಲು ಏಷ್ಯಾ ಪೆಸಿಫಿಕ್‌ನ ಎಲ್ಲ ರಾಷ್ಟ್ರಗಳೂ ಕೈಜೋಡಿಸಬೇಕೆಂದು ಅವರು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next