Advertisement

“ಸರಕಾರದ ನಿಯಮಗಳನ್ನು ಪಾಲಿಸೋಣ’

11:35 PM Apr 11, 2020 | Sriram |

ಬೆಂಗಳೂರು: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೋವಿಡ್ 19ಸೋಂಕಿನಿಂದ ಪಾರಾಗಲು ಎಲ್ಲ ದೇಶಗಳು ಲಾಕ್‌ಡೌನ್‌ ಮೊರೆ ಹೋಗಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ. ಹೀಗೆ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ಕನ್ನಡಿಗ ಜಾವಗಲ್‌ ಶ್ರೀನಾಥ್‌ ಕೂಡ ಜನಸಾಮಾನ್ಯರಲ್ಲಿ ಕೋವಿಡ್‌-19 ಕುರಿತಾಗಿ ಜಾಗೃತಿ ಮೂಡಿಸಿದ್ದು, ಎಲ್ಲರೂ ಒಗ್ಗಟ್ಟಾಗಿ ಸರಕಾರದ ಆದೇಶಗಳನ್ನು ಪಾಲಿಸುವ ಮೂಲಕ ಜಗತ್ತಿನಿಂದ ಈ ಸೋಂಕನ್ನು ಒ¨ªೋಡಿಸೋಣ ಎಂದು ವೀಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ.
ಕೋವಿಡ್ 19 ಪ್ರಪಂಚದೆಲ್ಲೆಡೆ ಹಬ್ಬಿ ತೊಂದರೆ ಕೊಟ್ಟಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೊಂಚ ಹಿಡಿತದಲ್ಲಿದೆ. ಇದಕ್ಕೆ ಕಾರಣ ಸರಕಾರ ತೆಗೆದುಕೊಂಡ ನಿರ್ಧಾರಗಳು. ಆದರೆ ಸರಕಾರದ ಈ ನಿರ್ಧಾರಗಳನ್ನು ಗಾಳಿಗೆ ತೂರುವಂಥ ಕೆಲಸವನ್ನು ನಾವು ಮಾಡಬಾರದು. ಸರಕಾರ ಹೇಳುವಂತಹ ಎಲ್ಲ ಕ್ರಮಗಳಿಗೆ ನಾವೆಲ್ಲರೂ ಸ್ಪಂದಿಸಿದರೆ ಮಾತ್ರ ಈ ಮಹಾಮಾರಿಯನ್ನು ಹೊಡೆದೋಡಿಸಬಹುದು. ಹೀಗಾಗಿ ಎಲ್ಲರೂ ಸಹಕರಿಸಬೇಕೆಂದು ಶ್ರೀನಾಥ್‌ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.ಪೊಲೀಸ್‌, ವೈದ್ಯ, ಪೌರಕಾರ್ಮಿಕರ ಸೇವೆ ಶ್ಲಾಘನೀಯ. 

Advertisement

ಕೋವಿಡ್ 19ವೈರಸ್‌ ಸಂಕಷ್ಟದ ದಿನಗಳಲ್ಲಿಯೂ ತಮ್ಮ ಕುಟುಂಬವನ್ನು ಮರೆತು ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸ್‌, ವೈದ್ಯಕೀಯ ಬಳಗ ಯೋಧರಂತೆ ಈ ಮಹಾಮಾರಿಯನ್ನು ಹೋಗಲಾಡಿಸಲು ಶ್ರಮ ಪಡುತ್ತಿದ್ದಾರೆ. ಉಳಿದಂತೆ ಪೌರಕಾರ್ಮಿಕರು ಕೂಡ ದಿನನಿತ್ಯ ಕಸವನ್ನು ತೆಗೆದು ದೇಶದಲ್ಲಿ ಶುಚಿತ್ವ ಕಾಪಾಡುತ್ತಿದ್ದಾರೆ. ಹೀಗಿರುವಾಗ ನಾವೆಲ್ಲರೂ ಬೇಜವಾಬ್ದಾರಿಯಿಂದ ಹೊರಗಡೆ ತಿರುಗುತ್ತಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತು ಸರಕಾರದ ನಿಯಮಗಳನ್ನು ಪಾಲಿಸಿ ಮನೆಯಲ್ಲೆ ಇರೋಣ ಈ ಮೂಲಕವಾದರೂ ಪೊಲೀಸ್‌, ವೈದ್ಯ ಹಾಗೂ ಪೌರ ಕಾರ್ಮಿಕರ ಶ್ರಮಕ್ಕೆ ಕೈಜೋಡಿಸೋಣ ಎಂದು ಶ್ರೀನಾಥ್‌ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next