Advertisement

ಆರೋಗ್ಯ, ಸ್ವಚ್ಛತೆಗೆ ಗಮನ ಹರಿಸೋಣ: ಶೋಭಾ ರಮೇಶ ರೈ

03:04 PM Apr 08, 2021 | Team Udayavani |

ಮುಂಬಯಿ, ಎ. 7: ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿದೆ. ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುವ ಗೃಹಿಣಿಯರು ಈ ಸಂದರ್ಭದಲ್ಲಿ ಭಯಭೀತರಾಗದೆ ಇದರ ವಿರುದ್ಧ ಜಾಗೃತರಾಗಬೇಕು. ಪರಿವಾರದ ಆರೋಗ್ಯದ ಬಗ್ಗೆ ಹಾಗೂ ಸ್ವಚ್ಛತೆಯ ಕಡೆಗೆ ಗಮನ ಹರಿಸೋಣ ಎಂದು ಪೊವಾಯಿ ಕನ್ನಡ ಸೇವಾ ಸಂಘ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ರಮೇಶ್‌ ರೈ ತಿಳಿಸಿದರು.

Advertisement

ಪೊವಾಯಿ ಕನ್ನಡ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಅರಸಿನ ಕುಂಕುಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀವರ್ಷ ನಮ್ಮ ಸಂಘದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ಬಹಳ ವಿಜೃಂಭಣೆ ಯಿಂದ ನಡೆಯುತ್ತಿತ್ತು. ನಮ್ಮ ಪರಿಸರದಲ್ಲಿ ಉತ್ಸವದ ವಾತಾವರಣವಿತ್ತು. ಕೊರೊನಾದಿಂದ
ಕಳೆಗುಂದಿದೆ. ಆದಷ್ಟು ಬೇಗ ಇದರಿಂದ ಮುಕ್ತಿ ಸಿಗುವಂತಾಗಲಿ ಎಂದು ಹೇಳಿದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಬಂಟರ ಸಂಘ ಮುಂಬಯಿ ಇದರ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಜ್ರಾ ಕೆ. ಪೂಂಜಾ ಮಾತನಾಡಿ, ಕನ್ನಡ ಸೇವಾ ಸಂಘದ ಕಾರ್ಯಚಟುವಟಿಕೆಗಳು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ತಿಳಿಸಿ
ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಶಾಂತಿ ದಿವಾಕರ ಶೆಟ್ಟಿ ಅವರ ಸಂಘಟನ ಚಾತುರ್ಯವನ್ನು ಪ್ರಶಂಸಿಸಿದರು. ಕೋವಿಡ್ ಸಂದರ್ಭದಲ್ಲಿ ನೀವು ಮಾಡಿದ ಸೇವಾ ಕಾರ್ಯವೈಖರಿ ಅಭಿನಂದನೆಯ. ಕೊರೊನಾ ಬಗ್ಗೆ ಜಾಗೃತಿಯಿಂದ ಹೆಜ್ಜೆಯಿಡೋಣ ಎಂದರು.

ಮುಖ್ಯ ಅತಿಥಿಯಾಗಿದ್ದ ಹರ್ಷಲತಾ ಅಪ್ಪಣ್ಣ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಪೊವಾಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ರಮೇಶ್‌ ರೈ ದಂಪತಿಯನ್ನು ಸಮ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಾಂತೂರು ಅಶೋಕ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಗುಣಾ ಶೆಟ್ಟಿ, ಕೋಶಾಧಿಕಾರಿ ಆಶಾ ಶೆಟ್ಟಿ ಉಪಸ್ಥಿತರಿದ್ದರು.

Advertisement

ಕನ್ನಡ ಸೇವಾ ಸಂಘದ ಉಪಾಧ್ಯಕ್ಷ ಬಾಬಾ ಪ್ರಸಾದ್‌ ಅರಸ ಕುತ್ಯಾರು, ಮಾಜಿ ಅಧ್ಯಕ್ಷರಾದ ಅಡ್ವೊಕೇಟ್‌ ಆರ್‌. ಜಿ. ಶೆಟ್ಟಿ, ನಾನಯರ ಗರಡಿ ಪ್ರಭಾಕರ ಶೆಟ್ಟಿ, ದಯಾನಂದ ಬಂಗೇರ, ರಮೇಶ ರೈ, ಮಾಜಿ ಉಪಾಧ್ಯಕ್ಷ ದಿವಾಕರ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಪ್ರಶಾಂತಿ ಶೆಟ್ಟಿ, ಶೈಲಜಾ ಶೆಟ್ಟಿ, ಜ್ಯೋತಿ ಆರ್‌. ಶೆಟ್ಟಿ, ಸವಿತಾ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಕವಿತಾ ಪಿ. ಶೆಟ್ಟಿ, ಭಜನ ಸಮಿತಿಯ ಇಂದಿರಾ ಎಂ. ಪೂಜಾರಿ, ಉಮೇಶ್‌ ಆಚಾರ್ಯ, ಆನಂದ್‌ ಪೂಜಾರಿ, ಯಶೋದಾ ಪೂಜಾರಿ, ಕುಶಲಾ ಬಂಗೇರ, ಪ್ರಮೀಳಾ ಶೆಟ್ಟಿ, ಅಕ್ಷಿತ್ ಶೆಟ್ಟಿ, ರೇಖಾ ಶೆಟ್ಟಿ, ಉಷಾ ಪೂಜಾರಿ, ಭವಾನಿ
ಸೀತಾರಾಮ್‌ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ಜರಗಿತು.
ಸುಚಿತ್ರಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನಿತಾ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಗುಣಾ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next