ಕಲಬುರಗಿ: ಬಹು ಸಂಸ್ಕೃತಿಯಿಂದ ತುಂಬಿರುವ ನಮ್ಮ ನಾಡಿನಲ್ಲಿ ಏಕಸಂಸ್ಕೃತಿ ತರುವುದು ಸುಲಭವಲ್ಲ. ವೈಚಾರಿಕ, ವೈಜ್ಞಾನಿಕ ಚಿಂತನೆಯಿಂದ ಮಾತ್ರ ಅಜ್ಞಾನಮುಕ್ತವಾದ ರಾಷ್ಟ್ರನಿರ್ಮಾಣ ಸಾಧ್ಯವಾಗುತ್ತದೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ| ಮಲ್ಲಿಕಾ ಘಂಟಿ ತಿಳಿಸಿದರು.
ನಗರ ಹೊರವಲಯದ ತಾಜಸುಲ್ತಾನಪುರದ ಕೆಎಸ್‌ಆರ್‌ಪಿ ಕ್ಯಾಂಪ್‌ನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ 9 ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಕೃತಿ ಪ್ರೇಮದ ಮಾಸದ ಪಯಣದಂಗವಾಗಿ ವೈಚಾರಿಕ ಮಾರ್ಗದಲ್ಲಿ ಒಂದಿಷ್ಟು ಮಥನ ವಿಶೇಷ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಚನಗಳಲ್ಲಿನ ಬೆಳಕು ನಮ್ಮೊಳಗಿನ ಕತ್ತಲು ಎಂಬ ವಿಷಯದ ಮೇಲೆ ಮಾತನಾಡಿದ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಕತ್ತಲೆಯನ್ನು ಹಳಿಯುವ ಬದಲು ಕಡ್ಡಿ ಗೀರುವ ಕೆಲಸ ಮಾಡಬೇಕಿದೆ. ವೈಜ್ಞಾನಿಕವಾಗಿ ಮುಂದುವರೆದಂತೆ ವೈಚಾರಿಕೆ ಚಿಂತನೆ ಮರೆಯುತ್ತಿದ್ದೇವೆ.ಅಜ್ಞಾನವೇ ಭಯಕ್ಕೆ ಮೂಲ ಕಾರಣ.
ವೈಜ್ಞಾನಿಕ ಚಿಂತನೆಯಿಂದ ಮಾತ್ರ ಭಯದ ನಿವಾರಣೆ ಸಾಧ್ಯ. ಮಾನವನಿಗೆ ನೆಮ್ಮದಿ ನೀಡಬೇಕಾದ ಧರ್ಮ, ಸಮಾಜದಲ್ಲಿ ಅಶಾಂತಿ ಮೂಡಿಸಬಾರದು ಎಂದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೆಎಸ್‌ಆರ್‌ಪಿ ಕಮಾಂಡೆಂಟ್ ಬಸವರಾಜ ಜಿಳ್ಳೆ ಅಧ್ಯಕ್ಷತೆ ವಹಿಸಿದ್ದರು.
ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ತುಂಗಳ, ಕವಿಯಿತ್ರಿ ಶ್ರೀದೇವಿ ಹೂಗಾರ, ಡಾ| ಪ್ರತೀಮಾ ಕಾಮರೆಡ್ಡಿ, ಸಚೀನ ಫರಹತಾಬಾದ, ಡಾ| ಬಾಬುರಾವ ಶೇರಿಕಾರ, ಪರಮೇಶ್ವರ ಶಟಕಾರ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಕೆ.ಗಿರಿಮಲ್ಲ ಮಾತನಾಡಿದರು.
ಕಲ್ಯಾಣಪ್ಪ ಪಾಟೀಲ ಮಳಖೇಡ, ಶರಣಪ್ಪ ದೇಸಾಯಿ, ಪ್ರಭುಲಿಂಗ ಮೂಲಗೆ, ವಿ.ಎಂ. ಪತ್ತಾರ, ಸೋಮು ಕುಂಬಾರ, ಸತೀಶ ಸಜ್ಜನ, ರವಿ ಹರಗಿ, ಪ್ರಸನ್ನ ವಾಂಜರಖೇಡೆ, ನೀಲಾಂಬಿಕಾ ಚೌಕಿಮಠ, ಜಯಶ್ರೀ ಚೌಧರಿ, ನಾಗರಾಜ ಹೆಬ್ಟಾಳ, ಹಣಮಂತರಾಯ ಅಟ್ಟೂರ, ಯಶೋಧಾ ಕಟಕೆ, ಮಹಾದೇವ ಬಡಾ, ಎಂ.ಬಿ. ನಿಂಗಪ್ಪ, ಎಸ್.ಎಂ.ಪಟ್ಟಣಕರ, ಇನ್ಸಪೆಕ್ಟರ್ ಶರಣಬಸವ ಹಾಗೂ ಪೊಲೀಸ್ ಅಧಿಕಾರಿಗಳು, ಸಾಹಿತ್ಯಾಸಕ್ತರು ಹಾಜರಿದ್ದರು.