Advertisement

ಸಾಹಿತ್ಯ ಸಮ್ಮೇಳನ ಸ್ವರೂಪ ಬದಲಾಗಲಿ: ಪ್ರಭಾಕರ ಜೋಶಿ

07:30 AM Mar 08, 2018 | Team Udayavani |

ಸುಳ್ಯ: ಸಾಹಿತ್ಯ ಸಮ್ಮೇಳನಗಳ ಸಂಘಟನೆಯ ಸ್ವರೂಪಗಳನ್ನು ಆಮೂಲಾಗ್ರವಾಗಿ ಬದಲಾಯಿಸಲು ಗಂಭೀರ ಚಿಂತನೆ ನಡೆಸಬೇಕು. ಸಾಂಸ್ಕೃತಿಕ ಸಮ್ಮೇಳನದ ತರಹ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದರೆ ಅದರಿಂದ ಸಕಾರಾತ್ಮಕ ಫಲಿತಾಂಶ ಸಿಗ ಬಹುದು ಎಂದು ಸಾಹಿತಿ, ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಶಿ ಹೇಳಿದರು.

Advertisement

ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂರು ದಿನಗಳ ಕಾಲ ನಡೆದ 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಗೈದರು. ಸಾಹಿತ್ಯ ಸಮ್ಮೇಳನಕ್ಕೆ ಜನ ಬರುವುದಿಲ್ಲ ಎನ್ನಲಾಗುತ್ತದೆ. ಬಾರದೇ ಇರುವುದು ಜನರ ತಪ್ಪಲ್ಲ. ಜನರು ಬರುವಂತಾಗಲು ಬೇಕಾದ ಬದಲಾವಣೆಗಳನ್ನು ಸಂಘಟನಾತ್ಮಕ ನೆಲೆಯಲ್ಲಿ ಮಾಡಬೇಕಾದ ಜವಾಬ್ದಾರಿ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಜಾಗತೀಕರಣ, ಸಾಮಾಜಿಕ ಜಾಲ ತಾಣಗಳನ್ನು ಟೀಕಿಸುವ ಬದಲು ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುವುದು ಹೇಗೆ ಅನ್ನುವ ಬಗ್ಗೆ ಚಿಂತಿಸಬೇಕು. ಅನೇಕ ಬಾರಿ ಕೆಟ್ಟ ವ್ಯವಸ್ಥೆ ಗಳನ್ನು ದೂರ ಮಾಡಲು ಜಾಗತೀ ಕರಣ ಸಹಕಾರಿ ಎಂದು ಅವರು ಉಲ್ಲೇಖೀಸಿದರು.

ಸರಕಾರಿ ಶಾಲೆಗಳ ಬಗ್ಗೆ ಸರಕಾರಗಳ ಧೋರಣೆ ಹೇಗಿದೆ ಎಂದರೆ ತನ್ನಷ್ಟಕ್ಕೆ ಕನ್ನಡ ಶಾಲೆಗಳು ಮುಚ್ಚುವುದಾದರೆ ಮುಚ್ಚಲಿ. ತಾನಾಗಿಯೇ ಉಳಿದರೆ ಉಳಿ ಯಲಿ ಎಂಬಂತಿದೆ. ಸರಕಾರಿ ಶಾಲೆ ಗಳ ಸುಧಾರಣೆಗೆ ಆದ್ಯತೆ ನೀಡ ಬೇಕು ಎಂದ ಅವರು, ಸರಕಾರಿ ಕನ್ನಡ ಶಾಲೆಗಳಿಗೆ ಮಂಜೂರಾತಿ ಮಾಡಿದ ಶಿಕ್ಷಕರ ಹುದ್ದೆಗಳ ಪೈಕಿ 60 ರಷ್ಟನ್ನು ತತ್‌ಕ್ಷಣ ಭರ್ತಿ ಮಾಡ ಬೇಕು. ಖಾಸಗಿ ಅನುದಾನ ಬಳಸಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸ ಬೇಕು. ಶಾಲೆಗೆ ಪೂರಕವಾದ ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ವಿಶೇಷ ಅನುದಾನ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಸಭಾಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಎ.ಪಿ.ಮಾಲತಿ ಮಾತನಾಡಿ ದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಕರ್ಣಾಟಕ ಬ್ಯಾಂಕ್‌ ಮಹಾ ಪ್ರಬಂಧಕ ಚಂದ್ರ ಶೇಖರ ರಾವ್‌ ಬಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್‌ ನಾಯಕ್‌, ಬಿ.ಎಸ್‌. ಲೋಕೇಶ್‌, ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ ಮೊದ ಲಾದ ವರು ಉಪಸ್ಥಿತ ರಿದ್ದರು. ಇದೇ ಸಂದರ್ಭ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವ ರಿಗೆ ಬಹುಮಾನ ವಿತರಿಸಲಾಯಿತು.

Advertisement

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರೊ| ರಂಗಯ್ಯ ಶೆಟ್ಟಿಗಾರ್‌ ವಂದಿಸಿದರು. ಅರೆಭಾಷೆ ಅಕಾಡೆಮಿ ಸದಸ್ಯ ಕೆ.ಟಿ. ವಿಶ್ವನಾಥ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next