ಮೀಯಪದವು: ಕರ್ನಾಟಕ ಗಮಕ ಕಲಾಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಮೀಯಪದವಿನ ಶ್ರೀ ವಿದ್ಯಾವರ್ಧಕ ಹೈಸ್ಕೂಲಿನ ವಿದ್ಯಾರಂಗ ಕಲಾವೇದಿಕೆಯ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಶ್ರೀ ವಿದ್ಯಾವರ್ಧಕ ಹೆ„ಸ್ಕೂಲಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಪ್ರೇಮಾ ಕೆ. ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಗಮಕ ಶ್ರಾವಣದಂತಹ ಕಾರ್ಯಕ್ರಮದ ಮೂಲಕ ಕನ್ನಡದ ಷಟ³ದಿ ಸಾಹಿತ್ಯ ಹೆಚ್ಚು ಜನಪ್ರಿಯವಾಗಲಿ ಎಂಬ ಸದಾಶಯವನ್ನು ಅವರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋ ಪಾಧ್ಯಾಯರಾದ ಶ್ರೀಧರ ರಾವ್ ಮುಖ್ಯ ಅತಿಥಿಯಾಗಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಟಿ.ಶಂಕರ ನಾರಾಯಣ ಭಟ್ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಶಿವರಾಮ ಪಿ.ವಿ. ಚಿತ್ತಾರಿ ಅವರು ತೊರವೆ ರಾಮಾಯಣದ ಆಯ್ದ ಭಾಗಗಳನ್ನು ವಾಚನ ಮಾಡಿದರು.
ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಅವರು ವ್ಯಾಖ್ಯಾನಗೈದರು. ಈ ಕಾರ್ಯಕ್ರಮಕ್ಕೆ ಶಾಲಾ ವಿದ್ಯಾರ್ಥಿನಿಯರಾದ ಫಾತಿಮತ್ ಹಿರ್ಷಾನ ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ವೈಶಾಲಿ ಕಾರ್ಯಕ್ರಮ ನಿರೂಪಿಸಿದರು.