Advertisement
ತಾಲೂಕಿನ ಎಳೇಸಂದ್ರ ಗ್ರಾಪಂ ಕೋಟರಾಮ ಗುಳ್ಳು ರಸ್ತೆಯಿಂದ ಕನಮನಹಳ್ಳಿವರೆಗೆ 65 ಲಕ್ಷರೂ.ನಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸದ ಎಸ್.ಮುನಿಸ್ವಾಮಿಯಷ್ಟು ಭ್ರಷ್ಟರು ಮತ್ತೂಬ್ಬರಿಲ್ಲ, ಎಸ್.ಎನ್. ಸಿಟಿಯಲ್ಲಿ ಅವರು ಕೇಳಿದಷ್ಟು ನಿವೇಶನ ನೀಡಿದ್ದರೆ ನಾನು ಒಳ್ಳೆಯವನಾಗುತ್ತಿದ್ದೆ, ನಿರಾಕರಿಸಿದ್ದಕ್ಕೆ ನನ್ನ ಮೇಲೆ ಗೋಮಾಳ, ಗುಂಡು ತೋಪು ಒತ್ತುವರಿ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
Related Articles
Advertisement
ಸ್ವಯಂ ಚಿಂತನೆ ಮಾಡಿ ಹೇಳಿಕೆ ನೀಡಿ: ಖರಾಬು ಜಮೀನು ಮಾರಾಟ ಮಾಡಿ, ಅಕ್ರಮವಾಗಿ ಪೆಟ್ರೋಲ್ ಬಂಕ್ ನಿರ್ಮಾಣ, ಅದೇ ರೀತಿ ಗೋಮಾಳ ಜಮೀನಿನಲ್ಲಿ ಅಕ್ರಮ ನಿವೇಶನ ಮಾಡಿ ಮಾರಾಟ ಮಾಡಿಕೊಂಡವರ ಮಾತು ಕೇಳುವುದನ್ನು ಬಿಟ್ಟು ಸಂಸದರು ಮೊದಲು ಸ್ವಯಂ ಚಿಂತನೆ ಮಾಡಿ ಹೇಳಿಕೆ ನೀಡಲಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ರಾಜ್ಯದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಬಿ.ಸಿ.ಪಾಟೀಲ್ ಮನವಿ
ಬಿ.ಪಿ.ವೆಂಕಟಮುನಿಯಪ್ಪ ಶಾಸಕರಾಗಿದ್ದಾಗ ಮಲ್ಲೇಶನಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸಲಾಗದವರು ಇಂದು ಅವರ ಮಗ ಅದೇ ಗ್ರಾಮಕ್ಕೆ ಹೋಗಿ ಜನರ ಸಮಸ್ಯೆ ಆಲಿಸುವ ನಾಟಕ ಮಾಡುತ್ತಿರುವುದಕ್ಕೆ ನಾಚಿಕೆಯಾಗಬೇಕೆಂದು ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್‌ರನ್ನೂ ತರಾಟೆ ತೆಗೆದು ಕೊಂಡರು. ಈ ವೇಳೆ ಎಳೇಸಂದ್ರ ಗ್ರಾಪಂ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ಟಿ.ಮಹಾದೇವ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಅರ್.ವಿಜಯಕುಮಾರ್, ಬೂದಿ ಕೋಟೆ ಗ್ರಾಪಂ ಉಪಾಧ್ಯಕ್ಷ ಬಿ.ಆರ್.ಮಂಜುನಾಥ್, ಮುಖಂಡರಾದ ಬಿ.ಕೃಷ್ಣಪ್ಪಶೆಟ್ಟಿ, ಮುನಿಸ್ವಾಮಿ, ಎಸ್.ಕೆ.ವೆಂಕಟರಾಮಯ್ಯ, ಜಿ.ಆರ್. ಸುರೇಶ್, ಒಬಿಸಿ ಅಧ್ಯಕ್ಷ ಶೋಬನ್‌ಬಾಬು, ತಿಮ್ಮಯ್ಯ, ಕೊಡಗುರ್ಕಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.