Advertisement
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ನ.29ರಂದು ಅಮೃತವರ್ಷಣಿ ಸಭಾಂಗಣದಲ್ಲಿ ಜರಗಿದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಉದ್ಘಾಟಿಸಿ ದ ಅವರು, ಸರಕಾರಕ್ಕೂ ಮಿಗಿಲಾಗಿ ಕರ್ನಾಟಕದ ಹಳ್ಳಿ ಹಳ್ಳಿಗೆ ತಲುಪಿದ ಯೋಜನೆಯೊಂದಿದ್ದರೆ ಅದು ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆ. ಇದು ದೇಶದೆಲ್ಲೆಡೆ ವಿಸ್ತರಣೆಯಾಗುವ ಮೂಲಕ ಸರ್ವಧರ್ಮದ ಆರ್ಥಿಕ ಮತ್ತು ಮೌಲ್ಯಾಧಾರಿತ ಪ್ರಗತಿಗೆ ಸಾಕ್ಷಿಯಾಗಬೇಕು ಎಂದರು.
Related Articles
Advertisement
ಎಸ್.ಡಿ.ಎಂ. ಆಸ್ಪತ್ರೆಯಿಂದ ಉಚಿತ ಡಯಾಲಿಸಿಸ್ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಮುಂದಿನ ಜನವರಿಯಿಂದ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಒದಗಿಸಲಾಗುವುದು. ವರ್ಷಕ್ಕೆ 10 ಸಾವಿರ ಮಂದಿಗೆ ಉಪಯೋಗವಾಗುವಂತೆ ಸುಮಾರು 1.50 ಕೋ.ರೂ. ನೀಡುವುದಾಗಿ ಪ್ರಕಟಿಸಿದರು. ಒಂದು ಧರ್ಮದ ವಿಶೇಷತೆಯನ್ನು ಮತ್ತೊಂದು ಧರ್ಮ ಅರಿತಾಗಷ್ಟೆ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾಧ್ಯ. ಆದರೆ ಧರ್ಮ ಅಥವಾ ಆಚರಣೆಗಳನ್ನು ಸಂಕುಚಿತಗೊಳಿಸಿದಾಗ ಜಾತಿ, ಮತ, ಪಂಥ, ಪಂಗಡಗಳ ನಡುವೆ ಭಿನ್ನಾಭಿಪ್ರಾಯ, ತಿಕ್ಕಾಟ, ಘರ್ಷಣೆ ಉಂಟಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದರು. ಧರ್ಮವು ನಮ್ಮ ಎಲ್ಲ ಚಟುವಟಿಕೆಯಲ್ಲಿ ಹಾಸುಹೊಕ್ಕಾಗಿರಬೇಕು. ನಡೆ, ನುಡಿ, ನೈತಿಕತೆಗಳು ಧರ್ಮದ ನೆಲೆಗಟ್ಟಿನಲ್ಲಿ ಇರಬೇಕು. ಆಗ ಧೀಮಂತ ಸಮಾಜ ನಿರ್ಮಾಣವಾಗುತ್ತದೆ. ಒಬ್ಬನ ನೈತಿಕ ಪತನವಾದರೆ ಜಗತ್ತಿನ ಪತನವೂ ಆಗಬಲ್ಲದು, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಧರ್ಮನಿಷ್ಠೆಯಲ್ಲಿ ನಡೆಯಬೇಕು ಎಂದು ಸಂದೇಶ ನೀಡಿದರು. ಇತ್ತೀಚೆಗೆ ಧರ್ಮಸ್ಥಳದ ಆಯುರ್ವೇದ ಕಾಲೇಜುಗಳು, ಆಸ್ಪತ್ರೆಗಳು ದೇಶದಲ್ಲೇ ಮೊದಲ 10 ಸ್ಥಾನಗಳಲ್ಲಿವೆ. ಧಾರವಾಡದ ವೈದ್ಯಕೀಯ ವಿವಿಯು ತನ್ನ ಅತ್ಯುತ್ತಮ ಸೇವೆಗಾಗಿ ಖ್ಯಾತಿಗಳಿಸಿದೆ. ಈ ಎಲ್ಲ ಸಂಸ್ಥೆಗಳಲ್ಲಿ ಎಲ್ಲ ಮತದವ ರಿಗೂ ಅವಕಾಶ ನೀಡಲಾಗಿದೆ ಎಂದರು. ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ
ಓರ್ವ ವ್ಯಕ್ತಿ 50 ವರ್ಷಗಳಿಂದ ಸಂಗ್ರಹಿಸಿದ ತಾಳೆ ಗರಿ ಬರಹ, ಹಳೆ ಪುಸ್ತಕ, ವಿಂಟೇಜ್ ಕಾರು ಸಹಿತ 75 ಸಾವಿರಕ್ಕೂ ಅಧಿಕ ಪ್ರಾಚೀನ ವಸ್ತುಗಳ ಸಂಗ್ರಹಕಾರ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವವನ್ನು ಗೃಹಸಚಿವರ ಸಮ್ಮುಖದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ಮುಖ್ಯ ತೀರ್ಪುಗಾರ ಡಾ|ಪ್ರದೀಪ್ ಭಾರದ್ವಾಜ್ ಪದಕ ಹಾಗೂ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಸವಾಲು ಸ್ವೀಕರಿಸುವ ಮನಃಸ್ಥಿತಿ ಇಂದಿನ ಅಗತ್ಯ: ಡಾ| ಜಿ. ಪರಮೇಶ್ವರ
ಭಾರತ ಎಲ್ಲ ರಂಗದಲ್ಲೂ ಸಮಾನತೆ ಬಯಸುತ್ತದೆ. ಇದು ಭವಿಷ್ಯದ ಪೀಳಿಗೆಗೆ ಅತ್ಯಾ ವಶ್ಯಕವಾಗಿದೆ. ಭವಿಷ್ಯ ಸವಾಲಾಗಿದೆ, ಆದರೆ ಅಷ್ಟೇ ಅವಕಾಶಗಳನ್ನು ತೆರೆದಿಟ್ಟಿದೆ. ಭವಿಷ್ಯವನ್ನು ಎದುರಿಸಿ ಸವಾಲುಗಳನ್ನು ಸ್ವೀಕರಿಸುವ ಮನಸ್ಥಿತಿ
ಯುವ ಪೀಳಿಗೆಗೆ ಬರಬೇಕಿದೆ. ನಾನು ಸರಕಾರ ದವನಾಗಿ, ಸ್ವತಃ ಪರಮೇಶ್ವರನಾಗಿ ಬಂದಿರುವೆ. ಸರ್ವ ಧರ್ಮ ಸಮ್ಮೇಳನ ಅರ್ಥಪೂರ್ಣ ಎಂದು ಡಾ| ಜಿ.ಪರಮೇಶ್ವರ ಅಭಿಪ್ರಾಯಪಟ್ಟರು. ಉಪನ್ಯಾಸ
ಸಂಶೋಧಕ ಮತ್ತು ಸಂವಹನಕಾರ ಡಾ| ಜಿ.ಬಿ.ಹರೀಶ, ನಿವೃತ್ತ ಪ್ರಾಂಶುಪಾಲ ಡಾ| ಜೋಸೆಫ್ ಎನ್.ಎಂ., ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಕಾಗವಾಡ ಮೆಹತಾಬ ಇಬ್ರಾಹಿಂ ಸಾಬ ಉಪನ್ಯಾಸ ನೀಡಿದರು. ಬಳಿಕ ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದಡಿ ಚೆನ್ನೈಯ ಶೀಜಿತ್ ಮತ್ತು ಪಾರ್ವತಿ ತಂಡ ಭರತನಾಟ್ಯ ಪ್ರಸ್ತುತಪಡಿಸಿತು. ನ.30ರಂದು ಸಾಹಿತ್ಯ ಸಮ್ಮೇಳನ ಜತೆಗೆ ಲಕ್ಷದೀಪೋತ್ಸವ ಸಮಾಪನಗೊಳ್ಳಲಿದೆ.