ಬ್ಯಾಂಕಾಕ್: ವಿಶ್ವ ಹಿಂದೂ ಸಮುದಾಯದ ಧ್ವನಿಯನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ವಿವಿಧ ಹಿಂದೂ ಸಂಘಟನೆಗಳ ನಡುವೆ ಉತ್ತಮ ಸಮನ್ವಯತೆ ಅಗತ್ಯವಾಗಿದೆ. ಹಿಂದೂ ಸಂಘಟನೆಗಳು ತಮ್ಮೊಳಗಿನ ವೈವಿಧ್ಯತೆಯನ್ನು ಬದಿಗಿರಿಸಿ ಏಕತೆಯನ್ನು ಸಾಧಿಸಬೇಕೆಂದು ಆರ್‌ಎಸ್‌ಎಸ್ ಸರಕಾರ್ಯ ವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ. ಥೈಲ್ಯಾಂಡ್‌ನಲ್ಲಿ ನಡೆದ 3ನೇ ವಿಶ್ವ ಹಿಂದೂ ಸಮ್ಮೇಳನದಲ್ಲಿ ಪಾಲ್ಗೊಂಡು ಹೊಸ ಬಾಳೆ ಮಾತನಾಡಿದರು. ಈ ವೇಳೆ ಸಮಾಜ ಎದುರಿಸುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸಲು ವಿಶ್ವದ ಹಿಂದೂ ಸಂಘಟನೆಗಳೆಲ್ಲವೂ ಒಗ್ಗೂಡಬೇಕು, ಅವುಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಲ್ಲದೇ ಭಾಷೆ, ಪಂಗಡ, ಜಾತಿ, ಉಪಜಾತಿ, ಗುರು ಹೀಗೆ ವಿವಿಧ ಆಧಾರದಲ್ಲಿ ಸಂಘಟನೆಗಳು, ಉಪ ಸಂಘಟನೆಗಳು ರೂಪು ಗೊಂಡಿವೆ. ಆದರೆ ಅದೆಲ್ಲದರ ನಡುವೆ ಹಿಂದೂ ಎಂಬುದೇ ಕಳೆದುಹೋಗಿದೆ. ವೈವಿಧ್ಯತೆಗಳ ನಡುವೆ ನಮ್ಮ ಮೂಲ ಉದ್ದೇಶವೇ ಮರೆತು ಹೋಗುವಂತಿರಬಾರದು. ಈ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳೂ ಒಂದಾಗಬೇಕೆಂದಿದ್ದಾರೆ. ಹಿಂದೂಯಿಸಂ ಬದಲಿಗೆ
ಹಿಂದೂಧರ್ಮ: ಹಿಂದೂಯಿಸಂ(ಹಿಂದೂವಾದ) ಎನ್ನುವುದು ತಾರತಮ್ಯ ಮತ್ತು ದಬ್ಟಾಳಿಕೆಯ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಆ ಪದಬಳಕೆ ಯನ್ನು ಕೈಬಿಡಲಾಗುತ್ತಿದ್ದು, ಸನಾತನ ಧರ್ಮವನ್ನು ಹಿಂದುತ್ವ ಹಾಗೂ ಹಿಂದೂಧರ್ಮ ಎಂಬುದಾಗಿಯೇ ಗುರುತಿಸುವುದಾಗಿ ಸಮ್ಮೇಳನದಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಹಿಂದೂ ಧರ್ಮ ಎಂಬುದರಲ್ಲಿ ಎರಡು ಪದಗಳಿವೆ. “ಹಿಂದೂ’ ಎಂಬುದು ಸನಾತನ ಅಥವಾ ಶಾಶ್ವತವಾದದ್ದು ಎನ್ನುವುದನ್ನು ಪ್ರತಿಬಿಂಬಿಸಿದರೆ “ಧರ್ಮ’ ಎಂಬುದು ಉಳಿ ವನ್ನು ಪ್ರತಿನಿಧಿಸುತ್ತದೆ. ಆದರೆ ಹಿಂದೂಯಿ ಸಂನಲ್ಲಿ “ಯಿಸಂ’ ಎನ್ನುವುದು ದಬ್ಟಾಳಿಕೆ, ತಾರತಮ್ಯದ ಸೂಚಕವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಯಿಸಂ ಎಂಬುದನ್ನು ತ್ಯಜಿಸಲಾಗುತ್ತಿದೆ ಎಂದು ಸಭೆ ತಿಳಿಸಿದೆ.