Advertisement

ಯೂತ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷರನ್ನು ಉಚ್ಚಾಟಿಸಲಿ

01:05 PM Mar 01, 2022 | Team Udayavani |

ಸಿಂಧನೂರು: ಕೆಪಿಸಿಸಿ ಸೂಚನೆ ಪ್ರಕಾರ ನಡೆಯುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಬೋಗಸ್‌ ಸಾಧನೆ ತೋರಿಸಿ, ವಾಮಮಾರ್ಗದಲ್ಲಿ ಪಕ್ಷಕ್ಕೆ ಕೆಟ್ಟು ಹೆಸರು ತರುತ್ತಿರುವ ವ್ಯಕ್ತಿಗಳನ್ನು ಹೈಕಮಾಂಡ್‌ ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಪಂಪನಗೌಡ ಬಾದರ್ಲಿ ಒತ್ತಾಯಿಸಿದರು.

Advertisement

ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ನಿಯಮದ ಪ್ರಕಾರ ಈಗಾಗಲೇ ಬ್ಲಾಕ್‌ ಕಾಂಗ್ರೆಸ್‌ ನೋಂದಣಿ ಅಭಿಯಾನ ನಡೆಸಿದೆ. ಆದರೆ, ರಾಜ್ಯ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಹೆಸರೇಳಿಕೊಂಡು ಕೆಲವು ಯುವಕರು ಬೋಗಸ್‌ ನೋಂದಣಿ ಆರಂಭಿಸಿದ್ದು, ಗಮನಕ್ಕೆ ಬಂದಿದೆ. ಪಕ್ಷಕ್ಕೆ ಕೆಟ್ಟು ಹೆಸರು ತರುವ ಇಂತಹ ಕೆಲಸವನ್ನು ನಾವು ಖಂಡಿಸುತ್ತೇವೆ ಎಂದರು.

ಸಿರುಗುಪ್ಪ ತಾಲೂಕಿನ ಉಪ್ಪಾರಹೊಸಳ್ಳಿಯ ಬನ್ನಿಗೌಡ ಮಾತನಾಡಿ, ಯೂತ್‌ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಚಿದಾನಂದು ರಾಯಡು ಅವರು ನಮ್ಮನ್ನು ಕಳುಹಿಸಿದ್ದು, ಬಸನಗೌಡ ಬಾದರ್ಲಿ ಪರವಾಗಿ ಸಿಂಧನೂರು ತಾಲೂಕಿನಲ್ಲಿ ಮತದಾರರ ಪಟ್ಟಿ ಹಿಡಿದು ನೋಂದಣಿ ಮಾಡಿಸಲು ಹೇಳಿದ್ದರು. ನಾವು ಬೋಗಸ್‌ ರೀತಿಯಲ್ಲಿ ನೊಂದಣಿ ಮಾಡಿದ್ದು, ನಿಜ. ನಾನೊಬ್ಬನೇ ಅಲ್ಲ; ಪ್ರತಿ ಗ್ರಾಮದಲ್ಲೂ ಐದಾರು ಜನರನ್ನು ನಿಯೋಜಿಸಿದ್ದಾರೆ. ನಮಗೆ ದಿನಕ್ಕೆ 500 ರೂ. ಕೂಲಿ ಕೊಡುವುದಾಗಿ ಹೇಳಿದ್ದು, ಸರ್ಕ್ನೂಟ್‌ ಹೌಸ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನಾನು ಮಾಡಿದ್ದು, ತಪ್ಪೆಂದು ಗೊತ್ತಾಗಿದೆ. ಆದರೆ, ಬಾಬುಗೌಡ ಬಾದರ್ಲಿ ಅವರು ನಮಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಊಟ, ಉಪಾಹಾರ ಕೊಟ್ಟು, ಇದ್ದದ್ದನ್ನು ಹೇಳಲು ತಿಳಿಸಿದ್ದಾರೆ ಎಂದರು.

ಸಾಕ್ಷಿ ಸಮೇತ ಬೋಗಸ್‌ ಸದಸ್ಯತ್ವ ಅಭಿಯಾನ ನಡೆಸಿ, ನಾಯಕರ ದಿಕ್ಕು ತಪ್ಪಿಸುವ ಈ ಬೆಳವಣಿಗೆ ಕುರಿತು ಹೈಕಮಾಂಡ್‌ಗೆ ದೂರು ಸಲ್ಲಿಸಲಾಗುವುದು ಎಂದು ಪಂಪನಗೌಡ ಬಾದರ್ಲಿ ಹೇಳಿದರು. ಈಗಾಗಲೇ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ವೀಕ್ಷಕರ ಗಮನಕ್ಕೆ ತರಲಾಗಿದೆ. ಯಾವುದೇ ಕೊಠಡಿಯಲ್ಲಿ ಕುಳಿತು ಬೋಗಸ್‌ ಮೊಬೈಲ್‌ ನಂಬರ್‌ ಕೊಟ್ಟು, ಮುಂದಿನ ದಿನಗಳಲ್ಲಿ ಪಕ್ಷವನ್ನು ಹಳ್ಳ ಹಿಡಿಸುವ ಇಂತಹ ಪ್ರಯತ್ನಗಳನ್ನು ನಾವು ಒಪ್ಪುವುದಿಲ್ಲ ಎಂದರು.

Advertisement

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ಉಪಾಧ್ಯಕ್ಷ ಮುರ್ತುಜಾ ಹುಸೇನ್‌, ನಗರಸಭೆ ಮಾಜಿ ಅಧ್ಯಕ್ಷ ಜಾಫರ್‌ ಜಾಹಗೀರದಾರ್‌, ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ್‌ ಹಿರೇಗೌಡರ್‌, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾಜಿಮಲಿಕ್‌, ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್‌.ವೈ, ಮುಖಂಡರಾದ ಪ್ರಭುರಾಜ್‌ ಕಪೂìರಮಠ, ಛತ್ರಪ್ಪ ಕುರುಕುಂದಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next