Advertisement
ಈ ಪರಿಸ್ಥಿತಿಯಲ್ಲಿ ಯಕ್ಷಗಾನ ಹಾಗೂ ನಾಟಕ ಕಲೆಯನ್ನು ಒಂದೇ ಸೂರಿನಡಿ ತಂದಲ್ಲಿ ಯಕ್ಷನಾಟಕಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿ ಇನ್ನಷ್ಟು ಹಾಳಾಗುವುದು ನಿಶ್ಚಯ. ಪ್ರಸ್ತುತ ನಾಟಕರಂಗ ಸಂಸ್ಥೆಗಳು ಕಲಾ ಅಭಿನಯಕ್ಕೆ ಅನುಕೂಲವಾಗುವ ಲಯ, ತಾಳ ನರ್ತನದ ಪ್ರಾಥಮಿಕ ಅಭ್ಯಾಸಕ್ಕಾಗಿ ನಾಟಕ ಕಲಿಯುವ ಆಸಕ್ತರನ್ನು ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಳುಹಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ.
Advertisement
ಯಕ್ಷಗಾನ ಕಲೆಯ ಸರ್ವಾಂಗೀಣ ಅಧ್ಯಯನಕ್ಕಾಗಿಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳಾಗಿಸಿ ಯಕ್ಷಗಾನ ಅಕಾಡೆಮಿಯನ್ನು ಒಳಗೊಂಡ ಒಂದು ರಂಗಾಯಣ ಮಾದರಿಯ ರೆಪರ್ಟರಿ ಸಂಸ್ಥೆಯನ್ನು ಸರಕಾರದ ವತಿಯಿಂದ ನಡೆ ಸುವ ಅಗತ್ಯವಿದೆ. ಇದರಿಂದ ಈಗಾಗಲೇ ಅನ್ಯರಂಗದ ಅಪಸವ್ಯಗಳ ಮೂಲಕ ಹಾದಿ ತಪ್ಪಿರುವ ಪ್ರಪಂಚದೆಲ್ಲೆಡೆ ಖ್ಯಾತಿ ಹೊಂದಿದ ಯಕ್ಷಗಾನ ಕಲೆಯ ಸಾಂಪ್ರದಾಯಿಕ ಸೊಗಡನ್ನು ಮುಂದಿನ ಪೀಳಿಗೆಗೆ ಅನನ್ಯವಾಗಿ ಕಾಯ್ದಿರಿಸಬಹುದಾಗಿದೆ. ಈ ರೀತಿಯ ಕೆಲಸವನ್ನು ಈಗಾಗಲೇ ನೆರೆಯ ರಾಜ್ಯ ಕೇರಳದಲ್ಲಿ ಸರಕಾರದ ವತಿಯಿಂದ ಕಥಕ್ಕಳಿ ಕಲೆಯ ಉಳಿವಿಗಾಗಿ “ಕಲಾಮಂಡಲ’ ಎಂಬ ಸಂಸ್ಥೆಯ ಮೂಲಕ ಮಾಡಲಾಗುತ್ತಿದ್ದು ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಸುಮಾರು 600 ವರ್ಷಗಳಿಗೂ ಮಿಕ್ಕಿದ ಇತಿಹಾಸ ಇರುವ ಉಡುಪಿಯನ್ನೇ ಕೇಂದ್ರ ವಾಗಿಸಿ ಆರಂಭಗೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭದ್ರ ನೆಲೆ ಕಂಡುಕೊಂಡ ಯಕ್ಷಗಾನ ಕಲೆಯ ಉಳಿವಿಗೆ ಸದ್ಯ ಒಂದು ಅಕಾಡೆಮಿಕ್ ರೆಪರ್ಟರಿಯು ಅತೀ ಅಗತ್ಯವಿದೆ. ರಂಗಾಯಣವು ಉಡುಪಿ ಜಿಲ್ಲೆಯಲ್ಲಿ ಎಲ್ಲಾದರೂ ತುರ್ತಾಗಿ ಸ್ಥಾಪನೆಯಾಗಬೇಕು. ಅದು ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್‌ನ ಆವರಣದಲ್ಲಿ ಸ್ಥಾಪಿಸಿದಲ್ಲಿ ಅದೊಂದು ಐತಿಹಾಸಿಕ ತೀರ್ಮಾ ನವೂ ಆಗಬಹುದು. ಜತೆಗೆ ಯಕ್ಷ ಗಾನ ಅಕಾಡೆಮಿಕ್ ರೆಪರ್ಟರಿಯೂ ಆಗಲಿ.
– ಸುರೇಂದ್ರ ಪಣಿಯೂರು