Advertisement

ಬರಹ-ಪ್ರಸಾರ ಸಂಸ್ಕೃತಿ ಮರಳಲಿ

11:56 AM Nov 26, 2021 | Team Udayavani |

ಆಳಂದ: ಕಾಲ ಬದಲಾದಂತೆ ಒಳ್ಳೆಯ ಪುಸಕ್ತಗಳ ಬರಹದ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಹೊಸಬರು ಅರ್ಥಬರಿತ ಮೌಲ್ಯಯುತ ಪುಸ್ತಕ ಬರಹಕ್ಕೆ ಮುಂದಾಗಿ ಪ್ರಸಾರದ ಸಂಸ್ಕೃತಿ ಮರುಕಳಿಸಿ, ಓದಗರನ್ನು ಆಕರ್ಷಿಸುವಂತೆ ಆಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಾಬಾಯಿ ಹಕ್ಕಿ ಹೇಳಿದರು.

Advertisement

ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಗುರುವಾರ ಶಿಕ್ಷಣ ಸಂಯೋಜಕ ತಡಕಲ್‌ ವಲಯದ ಅಂಬರಾಯ ಕಾಂಬಳೆ ರಚಿಸಿದ ಸ್ಫೂರ್ತಿ ಕವಲನ ಸಂಕಲನ ಪುಸ್ತಕವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಪ್ರತಿಭೆಯನ್ನು ಎಷ್ಟೇ ಒತ್ತಡವಿದ್ದರೂ ತಡೆಯಲಾಗದು. ಸರ್ಕಾರಿ ನೌಕರನಾಗಲಿ, ಕೃಷಿಕನಾಗಲಿ, ರಾಜಕಾರಣಿಯಾಗಲಿ, ಹೋರಾಟಗಾರ, ಪುರುಷ ಅಥವಾ ಮಹಿಳೆಯಾಗಲಿ ಎಂದಾದರೂ ಒಮ್ಮೆ ಪ್ರತಿಭೆ ಹೊರಹೊಮ್ಮಿಯೇ ಹೊಮ್ಮುತ್ತದೆ. ಅಂಬರಾಯ ಕಾಂಬಳೆ ತಮ್ಮ ಸರ್ಕಾರಿ ಸೇವೆಯಲ್ಲೂ ಕವನ ಸಂಕಲನ ಹೊರತಂದಿದ್ದು, ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಶಿಕ್ಷಣ ಸಂಯೋಜಕ ಅಂಬರಾಯ ಕಾಂಬಳೆ ತಾವೇ ರಚಿಸಿ, ಮುದ್ರಿಸಿದ ಸ್ಫೂರ್ತಿ ಕವನ ಸಂಕಲನದ ಕುರಿತು ಮಾತನಾಡಿದರು. ಶಿಕ್ಷಣ ಇಲಾಖೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಹೊನಗುಂಡಕರ್‌, ಸಿಬ್ಬಂದಿ ತನುಜಾ, ಸುಪ್ರಿಡೆಂಟ್‌ ಜನಾಬಾಯಿ, ರಂಜನಾ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜಗದೀಶ ಕೋರೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next