Advertisement

ಗಿರಿಜನರು ಸರಕಾರದ ಸೌಲಭ್ಯ ಪಡೆಯಲಿ

05:49 PM Jan 16, 2022 | Team Udayavani |

ದೇವದುರ್ಗ: ಗಿರಿಜನರಲ್ಲಿ ಸಾಮಾನ್ಯ ಜನರು, ಸ್ವಾತಂತ್ರ್ಯ ಹೋರಾಟಗಾರರು, ಆಡಳಿತ ಚುಕ್ಕಾಣಿ ಹಿಡಿದವರು ಇದ್ದಾರೆ. ಆದರೂ ಅವರು ನಿರೀಕ್ಷಿತ ಮಟ್ಟದ ಪ್ರಗತಿ ಹೊಂದಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ನಾಗರಾಜ ಅಕ್ಕರಕಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಮುರಿಗೆಪ್ಪ ಖೇಣೆದ್‌ ಫಂಕ್ಷನ್‌ ಹಾಲನಲ್ಲಿ ನಡೆದ ಗಿರಿಜನ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಗಿರಿಜನ ಸಮುದಾಯಗಳು ಎಲ್ಲ ರಂಗದಲ್ಲಿ ಮುಂದೆ ಬರಬೇಕಾದರೆ ಪಾಲಕರು ಮಕ್ಕಳಿಗೆ ಮೊದಲು ಶಿಕ್ಷಣ ಸೌಲಭ್ಯ ಕಲ್ಪಿಸಬೇಕು. ಶಿಕ್ಷಣ ಪಡೆದಲ್ಲಿ ಸರಕಾರದ ಹಲವು ಯೋಜನೆಗಳ ಸೌಲಭ್ಯಗಳು ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಮತಾಂತರಗೊಂಡ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಾಸಂಖ್ಯಾತರನ್ನು ಕೇವಲ ಒಂದೇ ಸೌಲಭ್ಯ ಪಡೆಯುವಂತಾಗಬೇಕು. ಅರಣ್ಯ ಉತ್ಪನ್ನಗಳ ಮೇಲಿನ ಹಕ್ಕು ವನವಾಸಿಗಳಿಗೆ ದೊರಕುವಂತಾಗಬೇಕು. ಎಲ್ಲರೂ ಒಗ್ಗಟ್ಟಾಗಿ ಇಂತಹ ಸಮಾವೇಶಗಳ ಮೂಲಕ ಗಿರಿಜನರ ಸಮಸ್ಯೆಗಳು ಬಗ್ಗೆ ಚರ್ಚಿಸಿ ಒಕ್ಕೊರಲ ಧ್ವನಿಯನ್ನು ಸರಕಾರದ ಮಟ್ಟಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ತಿರುಮಲೇಶ ಆಚಾರ್ಯ ರಾಜಜೋಷಿ, ವಾಲ್ಮೀಕಿ ಮಹಾಸಭಾ ತಾಲೂಕಾಧ್ಯಕ್ಷ ರಾಮಣ್ಣ ಕರಡಿಗುಡ್ಡ, ಯಮನೂರಪ್ಪ ನಾಯಕ, ಗಿರಿಜನ ಸುರಕ್ಷಾ ವೇದಿಕೆಯ ವೆಂಕಟೇಶ ಚಿಂತಲಕುಂಟಿ, ಆರ್‌. ಶ್ರೀನಿವಾಸ ಮೈಸೂರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next