Advertisement

T- 20 ಹುಡುಗರೇ ಆಡಲಿ ಬಿಡಿ…

01:01 AM Dec 17, 2023 | Team Udayavani |

ಕ್ಯಾಶ್‌ ರಿಚ್‌ ಐಪಿಎಲ್‌ನಲ್ಲಿ ಭಾರೀ ಸಂಚಲನ ವುಂಟಾಗಿದೆ. ಗುಜರಾತ್‌ ಟೈಟಾನ್ಸ್‌ ತಂಡದ ಯಶಸ್ವಿ ನಾಯಕ ಹಾರ್ದಿಕ್‌ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರವೇಶಿಸಿದ್ದಲ್ಲದೇ ಈಗ ರೋಹಿತ್‌ ಶರ್ಮ ಅವರನ್ನು ಮೀರಿಸಿ ನಾಯಕರೂ ಆಗಿರುವುದು ಅನೇಕರ ಹುಬ್ಬೇರಿಸಿದೆ. ರೋಹಿತ್‌ ಫ್ಯಾನ್ಸ್‌ ಸಹಜ ವಾಗಿಯೇ ಅಸಮಾಧಾನಗೊಂಡಿದ್ದಾರೆ.

Advertisement

ಹಾಗಾದರೆ ಐಪಿಎಲ್‌ನ ಅತ್ಯಂತ ಯಶಸ್ವಿ ಕಪ್ತಾನ ರೋಹಿತ್‌ ಶರ್ಮ ಅವರ ಭವಿಷ್ಯ ವೇನು? ಅವರು ತನಗಿಂತ ಕಿರಿಯ ಹಾರ್ದಿಕ್‌ ಪಾಂಡ್ಯ ಕೈಕೆಳಗೆ ಆಡುವರೇ? ಇದು ಕ್ರಿಕೆಟ್‌ ಅಭಿಮಾನಿಗಳನ್ನು ಕಾಡುವ ಪ್ರಶ್ನೆ. ಈಗಿನ ಸಾಧ್ಯತೆ ಪ್ರಕಾರ ರೋಹಿತ್‌ ಟಿ20 ಅಂತಾ ರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿಯ ಬಹುದು, ಐಪಿಎಲ್‌ನಲ್ಲಿ ಮುಂದು ವರಿಯುವ ಸಾಧ್ಯತೆ ಫಿಫ್ಟಿ-ಫಿಫ್ಟಿ.
ಇದೊಂದು ದಿಟ್ಟ ನಿಲುವು

ಇರಲಿ… ಐಪಿಎಲ್‌ನಲ್ಲಿ ಸಂಭವಿಸಿದ ಈ ಮಹತ್ವದ ಪರಿವರ್ತನೆ ಎನ್ನುವುದು ಅನೇಕ ದಿಟ್ಟ ನಿಲುವುಗಳಿಗೆ ದಿಕ್ಸೂಚಿ ಆಗಿರುವುದಂತೂ ಸತ್ಯ. ಇದರ ಮುಖ್ಯ ತಿರುಳು ಇಷ್ಟೇ- ಚುಟುಕು ಮಾದರಿಯ ಈ ಹೊಡಿಬಡಿ ಆಟವನ್ನು ಹಿರಿಯರು ಆಡಬೇಕೇಕೆ, ಇದನ್ನು ಹುಡುಗರೇ ಆಡಿಕೊಂಡು ಹೋಗಲಿ ಬಿಡಿ… ಎಂಬುದು.

ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮೊದಲಾದ ಸೀನಿಯರ್ ಇನ್ನೂ ಟಿ20 ಆಡು ವುದರಲ್ಲಿ ಅರ್ಥವಿಲ್ಲ ಎಂಬ ಬಹು ಮಂದಿಯ ಅಭಿಪ್ರಾಯವನ್ನು ಒಪ್ಪದಿರಲು ಸಾಧ್ಯವಿಲ್ಲ. ಏಕೆಂದರೆ ಈ ಚುಟುಕು ಮಾದರಿಯ ಕ್ರಿಕೆಟ್‌ ಯುವ ಹಾಗೂ ಬಿಸಿ ರಕ್ತದ ಪ್ರತಿಭೆಗಳಿಗೆ ಹೇಳಿಮಾಡಿಸಿದ ಆಟ. ಈಗಿನ ಟಿ20 ನಿಯಮ ಕೂಡ ಪಕ್ಕಾ ಯುವ ಆಟಗಾರರಿಗಾಗಿಯೇ ರೂಪು ಗೊಂಡಂತಿದೆ. ಇಲ್ಲಿ ಕಲಾತ್ಮಕತೆಗೆ ಬೆಲೆ ಇಲ್ಲ. ಏನಿದ್ದರೂ “ಪ್ರೊಡಕ್ಟಿ ವಿಟಿ’ಗೇ (ಉತ್ಪಾದಕತೆ) ಹೆಚ್ಚಿನ ಮೌಲ್ಯ. ಇಲ್ಲಿನ ಉತ್ಪಾದಕತೆಯೆಂದರೆ ರನ್‌.

ತೀವ್ರತೆಯ ಅಂಶಗಳು
“ಡಾಟ್‌ ಬಾಲ್‌’ ಕಡಿಮೆ ಮಾಡುವ ನಿಟ್ಟಿನಲ್ಲಿ ಆರಂಭ ದಿಂದಲೇ ಮುನ್ನುಗ್ಗಿ ಬಾರಿ ಸುವ ಶೈಲಿ ಈ ಯುವಕರಿಗೆ ಸಿದ್ಧಿಸಿರುತ್ತದೆ. ಚೆಂಡನ್ನು ಗುರುತಿಸುವ ದೃಷ್ಟಿ ತೀವ್ರತೆ, ಕೈಚಲನೆಯ ವೇಗ ಎಳೆ ಪ್ರಾಯದವರಲ್ಲಿ ಯಾವತ್ತೂ ಹೆಚ್ಚಿರುತ್ತದೆ. ಹೀಗಾಗಿ ಥರ್ಡ್‌ ಮ್ಯಾನ್‌, ಪಾಯಿಂಟ್‌, ಫೈನ್‌ ಲೆಗ್‌ ಏರಿಯಾ ದಲ್ಲಿ ರನ್‌ ಸರಾಗವಾಗಿ ಬರುತ್ತಿರುತ್ತದೆ. ಸೂರ್ಯಕುಮಾರ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಇಶಾನ್‌ ಕಿಶನ್‌ ಅವರೆಲ್ಲ ಇದಕ್ಕೆ ತಾಜಾ ಉದಾಹರಣೆಗಳಾಗಿದ್ದಾರೆ. ಟಿ20 ಬ್ಯಾಟಿಂಗ್‌ಗೆ ಅಗತ್ಯವಿರುವಷ್ಟು ಸ್ಪೀಡ್‌ ಇವರಲ್ಲಿದೆ. ವಯಸ್ಸು ಏರಿದಂತೆಲ್ಲ ಚುಟುಕು ಕ್ರಿಕೆಟಿನ ಇಂಥ ಒಂದೊಂದೇ ಕಡಿಮೆ ಆಗುತ್ತಲೇ ಹೋಗುತ್ತದೆ.

Advertisement

ಇದಕ್ಕೆ ಕೇವಲ ಭಾರತದ ಯುವ ಕ್ರಿಕೆಟಿಗರೇ ನಿದ ರ್ಶನಗಳಾಗಿಲ್ಲ. ಈಗಿನ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌ನ‌ಲ್ಲೂ ಯುವ ಆಟ ಗಾರರನ್ನು ಒಳಗೊಂಡ ಪ್ರತ್ಯೇಕ
ತಂಡಗಳಿರುವುದನ್ನು ಗಮನಿಸಬಹುದು. ಟೆಸ್ಟ್‌, ಏಕದಿನ ಹಾಗೂ ಟಿ20 ಮಾದರಿಗಳಿಗೆ ಪ್ರತ್ಯೇಕ ತಂಡ, ಪ್ರತ್ಯೇಕ ನಾಯಕರಿದ್ದರೆ ಅನುಕೂಲ ಎಂಬ ಸತ್ಯ ಈಗ ಭಾರತಕ್ಕೂ ಅರಿವಾಗತೊಡಗಿದೆ.

ಬದಲಾವಣೆಯ ಬಿರುಗಾಳಿ

ಮೊನ್ನೆ ಮೊನ್ನೆಯ ತನಕ ಭಾರತದ ಮೂರೂ ಮಾದರಿಯ ತಂಡಗಳಿಗೂ ರೋಹಿತ್‌ ಶರ್ಮ ಅವರೇ ಕ್ಯಾಪ್ಟನ್‌ ಆಗಿದ್ದರು. ಇದೀಗ ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌ ಅವರನ್ನು ಮುನ್ನೆಲೆಗೆ ತರಲಾಗುತ್ತಿದೆ. ವಿಶ್ವಕಪ್‌ನಲ್ಲಿ ವಿಫ‌ಲರಾದ ಸೂರ್ಯಕುಮಾರ್‌ಗೆ ಯಾಕಪ್ಪ ಟಿ20 ನಾಯಕತ್ವ ಎಂಬ ಕೂಗು ದೊಡ್ಡ ದಾಗಿಯೇ ಕೇಳಿಬಂದಿತ್ತು. ಆದರೆ ಅವರದೇ ಸಾರಥ್ಯದಲ್ಲಿ, ಅದೇ ಆಸ್ಟ್ರೇಲಿಯ ವಿರುದ್ಧ ಭಾರತ 4-1ರಿಂದ ಟಿ20 ಸರಣಿ ಜಯಿಸಿತು; ದಕ್ಷಿಣ ಆಫ್ರಿಕಾದಲ್ಲೂ 1-1 ಸಮಬಲ ಸಾಧಿಸಿತು. ನಿಂತ ನೀರಾಗಿದ್ದ ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಬದಲಾವಣೆಯ ಬಿರು ಗಾಳಿಯೇ ಬೀಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ.

ಟಿ20 ವಿಶ್ವಕಪ್‌-2024
ಮುಂದಿನ ವರ್ಷ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. 2007ರ ಚೊಚ್ಚಲ ಟಿ20 ವಿಶ್ವಕಪ್‌ ಬಳಿಕ ಭಾರತ ಚಾಂಪಿಯನ್‌ ಆಗಿದ್ದೆªà ಇಲ್ಲ. ಈ ಕೂಟದಲ್ಲಿ ಭಾರತ ತಂಡದ ಸಾರಥ್ಯವನ್ನು ಹಾರ್ದಿಕ್‌ ಪಾಂಡ್ಯ ಅವರಿಗೆ ವಹಿಸುವುದು ಪಕ್ಕಾ. ಭಾರತದ ವಿಶ್ವಕಪ್‌ ತಂಡ ಹೇಗಿದ್ದೀತು ಎಂಬುದನ್ನು ಇಂದೇ ಕಲ್ಪಿಸಿಕೊಳ್ಳಬಹುದು. ಈಗ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಬಹುತೇಕ ಆಟಗಾರರನ್ನೇ ಇದು ತುಂಬಿರುವುದರಲ್ಲಿ ಅನುಮಾನವಿಲ್ಲ. 2-3 ಜನ ಹೊರಹೋಗಬಹುದು. ಒಂದಿಬ್ಬರು ಅನುಭವಿಗಳು ಮರಳುವ ಜತೆಗೆ 2024ರ ಐಪಿಎಲ್‌ನಲ್ಲಿ ಯಶಸ್ಸು ಕಂಡ ಕೆಲವರಿಗೆ ಅವಕಾಶ ಸಿಗಬಹುದು. ಒಟ್ಟಾರೆ ಭಾರತದ ಟಿ20 ವಿಶ್ವಕಪ್‌ ತಂಡ ಹಿಂದಿನಂತಿರದೆ, ಯುವ ಆಟಗಾರಿಂದಲೇ ತುಂಬಿರುವುದರಲ್ಲಿ ಅನುಮಾನವಿಲ್ಲ.

ಎಚ್‌. ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next