Advertisement
ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ಆಡಳಿತತ್ಮಾಕ ದೃಷ್ಟಿಯಿಂದ ವಿಭಜಿಸುವುದಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲನ್ನು ಜಿಲ್ಲಾ ಕೇಂದ್ರವ°ನಾಗಿ ಮಾಡಬೇಕು. ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಹಾಗೂ ಸಾಮಾಜಿಕ, ಐತಿಹಾಸಿಕ, ವಾಣಿಜ್ಯ, ಕೃಷಿ, ಕಾನೂನು ಇತ್ಯಾದಿಗಳಿಂದ ಕೇಂದ್ರಿಕೃತವಾಗಿದ್ದು, ದೇಶದ ಸ್ವಾತ್ರಂತ್ರ್ಯಕ್ಕೋಸ್ಕರ ಹೋರಾಡಿದ ಈ ಗಂಡುಮೆಟ್ಟಿನ ನಾಡಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇನ್ನೂ ಅನೇಕ ವೀರರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ. ಏಷ್ಯಾದಲ್ಲಿಯೇ ಪ್ರಸಿದ್ಧವಾದ ಹತ್ತಿ ಮಾರುಕಟ್ಟೆಗಳಲ್ಲಿ ಬೆ„ಲಹೊಂಗಲ ಎಪಿಎಂಸಿ ರಾಜ್ಯದಲ್ಲಿಯೇ ಮೊದಲನೆಯದು. ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು ಎಲ್ಲ ಸವಲತ್ತು ಹೊಂದಿವೆ.
Related Articles
Advertisement
ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಅಮಿತ ಪಾಟೀಲ, ಶಂಕರ ಮಾಡಲಗಿ, ಪ್ರಮೋದಕುಮಾರ ವಕ್ಕುಂದಮಠ, ಬಿ.ಬಿ.ಗಣಾಚಾರಿ, ಡಾ.ಚಿದಂಬರ ಕುಲಕರ್ಣಿ, ಡಾ. ಶರಣಕುಮಾರ ಅಂಗಡಿ, ಡಾ.ಮಂಜುನಾಥ ಮುದುಕನಗೌಡರ, ಡಾ.ಅಶೋಕ ದೊಡವಾಡ, ಕಿರಣ ಸಾಧುನವರ, ಬೊಮ್ಮನಾಯ್ಕ ಪಾಟೀಲ, ಕಾರ್ತಿಕ ಪಾಟೀಲ, ಮಂಜುನಾಥ ಸೋಮನ್ನವರ, ಬುಡ್ಡೇಸಾಬ ಶಿರಸಂಗಿ ದಾವಲಬಾಯಿ ಕೊಂಡಗೊಳಿ, ಕುಮಾರ ದೇಶನೂರ, ಮಹಾಂತೇಶ ಮತ್ತಿಕೊಪ್ಪ, ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ, ಶ್ರೀಶೈಲ ತೊಟಗಿ, ಬಸವರಾಜ ಉಪ್ಪಾರ, ವಿರುಪಾಕ್ಷ ವಾಲಿ, ಸುಭಾಸ ತುರಮರಿ, ಸೋಮನಾಥ ಸೊಪ್ಪಿಮಠ, ಶಿವಾನಂದ ಬಡ್ಡಿಮನಿ, ಅಬ್ದುಲರೆಹಮಾನ ಹುಬ್ಬಳ್ಳಿ, ಬಾಬುಸಾಬ ಸುತಗಟ್ಟಿ, ಸಂಗಮೇಶ ಸವದತ್ತಿಮಠ, ಉಮಾ ಬುಲಾಕೆ, ಪಿ.ಬಿ.ಬಡಿಗೇರ, ಎಮ.ಆರ್. ಮೆಳವಂಕಿ, ಜ್ಞಾನೇಶ್ವರ ಬೊಂಗಾಳೆ, ಎಂ.ಎಂ. ಸೋಪಿನ, ಶಿವಾನಂದ ಇಂಚಲ, ಸಂತೋಷ ಕೊಳವಿ, ಮಹೇಶ ಕೋಟಗಿ, ಸುನೀಲ ಮರಕುಂಬಿ, ಮನೋಜ ಕೆಳಗೇರಿ ಸಾವಿರಾರು ಜನರು ಇದ್ದರು.
ಕಲಾಪದಿಂದ ದೂರ: ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ಕರೆ ನೀಡಿದ್ದ ಪ್ರತಿಭಟನೆಗೆ ವಕೀಲರ ಸಂಘ ತಮ್ಮ ಕಲಾಪಗಳಿಂದ ದೂರವುಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಡಿವೈಎಸ್‌ಪಿ ಶಿವಾನಂದ ಕಟಗಿ ಹಾಗೂ ಸಿಬ್ಬಂದಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.