Advertisement
2020 ಅಸ್ತಂಗತವಾಗುತ್ತಿದೆ. 2019 ರ ಕೊನೆಯಲ್ಲಿ ಚೀನದಲ್ಲಿ ಉದಯಿಸಿದ ಕೋವಿಡ್ ವೈರಸ್ ಶಾಲಾ ಶಿಕ್ಷಣದ ವೇಳಾಪಟ್ಟಿಯನ್ನು ಅಸ್ತವ್ಯಸ್ತಗೊಳಿಸಿದೆ. ಲಾಕ್ ಡೌನ್, ಕರ್ಫ್ಯೂ, ವೈರಸ್ ಭಯ ಮುಂತಾದ ಸಾಮಾ ಜಿಕ, ರಾಜಕೀಯ ಕಾರಣಗಳಿಂದಾಗಿ ನಿರಂತರವಾಗಿ ಶಾಲೆಗಳು ಸ್ಥಗಿತಗೊಂಡಿವೆ. ಈಗ ಕ್ರಮೇಣ ಜನ ಜೀವನ ಸಾಧಾರಣ ಸ್ಥಿತಿಗೆ ಮರಳುತ್ತಿರುವಾಗ ರೂಪಾಂತರಗೊಂಡ ವೈರಸ್‌ನ ಭಯ ವ್ಯಾಪಿಸುತ್ತಿದೆ. ಇದೀಗ 2021 ರ ಮೊದಲ ದಿನದಿಂದಲೇ ಶಾಲಾ ಪುನರಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ.
Related Articles
Advertisement
ಸ್ವಚ್ಛ ಶಾಲೆಯೇ ಸುರಕ್ಷಿತ ಶಾಲೆನೈರ್ಮಲ್ಯದ ದೃಷ್ಟಿಯಿಂದ ಪ್ರತಿಯೊಂದು ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಶೌಚಾಲಯ ಗಳನ್ನು ಕೂಡ ಶುಭ್ರಗೊಳಿಸಲಾಗಿದೆ. ಅದನ್ನು ಬಳಸಿದ ಪ್ರತಿಯೊಬ್ಬರೂ ಅದನ್ನು ಸ್ವಚ್ಛವಾಗಿ ಮುಂದಿನವರ ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳೇ ಕೋವಿಡ್ ಸುರಕ್ಷತ ರಾಯಭಾರಿ ಗಳಾಗಲಿ; ಪ್ರತಿಯೊಬ್ಬ ವಿದ್ಯಾರ್ಥಿಗಳು ಕೋವಿಡ್ ಸುರಕ್ಷತ ಕ್ರಮಗಳ ಅಗತ್ಯವನ್ನು ಅರಿತು ಪಾಲಿಸಬೇಕು. ಸ್ನೇಹಿತರೊಂದಿಗೆ ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಶಾಲೆಗೆ ಬರುವಾಗ, ಹಿಂದಿರುಗುವಾಗ ಅಥವಾ ಶಾಲೆಯಲ್ಲಿ ಹಿಂದಿನಂತೆ ಗುಂಪು ಗುಂಪಾಗಿ ಇರಬಾರದು. ಬಟ್ಟೆಯ ಮಾಸ್ಕ್ ಸದಾ ಧರಿಸಬೇಕು. ಇತರ ವಸ್ತುಗಳನ್ನಾಗಲೀ, ಮುಖ, ಮೂಗುಗಳನ್ನು ಆಗಾಗ್ಗೆ ಮುಟ್ಟುತ್ತಿರಬಾರದು. ಆಗಾಗ್ಗೆ ಸೋಪ್ ಬಳಸಿ ಕೈ ತೊಳೆದುಕೊಳ್ಳಬೇಕು. ಶಾಲೆಗೆ ಬರುವಾಗ ಕುಡಿಯುವ ನೀರು (ಬಿಸಿ ನೀರು ಆದರೆ ಉತ್ತಮ) ಉಪಾಹಾರ (ಅಗತ್ಯವಿದ್ದರೆ) ತರಬೇಕು. ಇತರರೊಂದಿಗೆ ಆಹಾರ ಹಂಚಿಕೊಳ್ಳುವುದು ಬೇಡ. ನಮಗೆ ಇತರರಿಂದ ರೋಗ ಹರಡದಂತೆ, ನಾವು ಇತರರರಿಗೆ ರೋಗ ಹರಡದಂತೆ ಜಾಗ್ರತೆಯನ್ನು ವಹಿಸಬೇಕು. ಆರಂಭದಲ್ಲಿ ದಿನಕ್ಕೆ ಕೇವಲ 3 ಅಥವಾ 4 ಅವಧಿಯ ಪಾಠಗಳು ನಡೆಯುತ್ತಿವೆ. ಅದನ್ನು ಆಸಕ್ತಿಯಿಂದ ಆಲಿಸೋಣ. ಈಗ ಆರಂಭಗೊಂಡಿ ರುವ ಶಾಲೆಯ ಚಟುವಟಿಕೆಗಳು ನಮ್ಮ ನಿರ್ಲಕ್ಷ್ಯದ ವರ್ತನೆಗಳಿಂದಾಗಿ ಮುಚ್ಚುವ ಅನಿವಾರ್ಯ ಸೃಷ್ಟಿ ಯಾಗದಂತೆ ಜಾಗ್ರತೆಯನ್ನು ವಹಿಸೋಣ. ಸಂತಸದಾಯಕ ಕಲಿಕೆಯೇ ನಿಜವಾದ ಕಲಿಕೆಯ ಲಕ್ಷಣವಾಗಿದೆ. ಅನಾವಶ್ಯಕ ಒತ್ತಡದ ಅಗತ್ಯವಿಲ್ಲ. ಪರೀಕ್ಷೆಯ ಕುರಿತು ಭಯವೂ ಬೇಡ. ಶಿಕ್ಷಕರೂ ನಿಮ್ಮೊಡನೆ ಸಂವಹನಕ್ಕಾಗಿ ಕಾತರದಿಂದ ಕಾದಿದ್ದಾರೆ. ನಿಮ್ಮ ಉತ್ತಮ ಭವಿಷ್ಯಕ್ಕೆ ಭದ್ರ ತಳಹದಿಯನ್ನು ರೂಪಿಸುವುದು ಶಿಕ್ಷಕರು ಮತ್ತು ಪೋಷಕರ ಒತ್ತಾಸೆಯಾಗಿದೆ. ಸಮಾಜವು ಕೋವಿಡ್ ಸಾಂಕ್ರಾಮಿಕವನ್ನು ಓಡಿಸುವಲ್ಲಿ ರೂಪಿಸಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂಬುದನ್ನು ಮರೆಯದಿರೋಣ. ಅಶೋಕ ಕಾಮತ್, ಉಡುಪಿ