Advertisement

ಪರಿಶಿಷ್ಟರು ಸರ್ಕಾರಿ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಲಿ

02:34 PM Dec 01, 2018 | Team Udayavani |

ಸುರಪುರ: ಪರಿಶಿಷ್ಟ ಜಾತಿ ಮತ್ತು ಪಂಗಡ ಜನರ ಸಬಲೀಕರಣಕ್ಕಾಗಿ ಸರಕಾರ ವಿಶೇಷ ಯೋಜನೆ ಜಾರಿಗೊಳಿಸಿದೆ. ಶೈಕ್ಷಣಿಕ ಮತ್ತು ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ ಒದಗಿಸಿದೆ. ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಪರಿಶಿಷ್ಟರು ಮೇಲೆ ಬರಬೇಕು ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಹರಿಬಾ ಜಮಾದಾರ ಹೇಳಿದರು.

Advertisement

ನಗರಸಭೆ ಕಾರ್ಯಾಲಯ ಆವರಣದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ನಗರಸಭೆ, ದೋರನಳ್ಳಿಯ ಸಮತಾ ಸಾಮಾಜಿಕ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ್ದ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಸೆಯದಂತೆ ಪರಿಶಿಷ್ಟರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶೈಕ್ಷಣಿಕ ಪ್ರಗತಿ ಸಾಧಿಸದೆ ಪರಿಶಿಷ್ಟರು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಶೈಕ್ಷಣಿಕವಾಗಿ ಸಿಗುವ ಸೌಲಭ್ಯಗಳನ್ನು ಚಾಚೂ ತಪ್ಪದೇ ಬಳಸಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗಳಿಗೆ ಸ್ಪರ್ಧಿಸುವಂತೆ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸರಕಾರ ಪರಿಶಿಷ್ಟರಿಗೆ ವಿಶೇಷ ಕಾಯ್ದೆ ಜಾರಿ ಮಾಡಿದೆ.

ಇದನ್ನು ಕೆಟ್ಟದಕ್ಕೆ ಬಳಸಿಕೊಳ್ಳದೆ ಒಳ್ಳೆಯದಕ್ಕೆ ಉಪಯೋಗಿಸಿಕೊಂಡು ಸಮಾಜದಲ್ಲಿ ಇತರೆ ಸಮುದಾಯದೊಂದಿಗೆ ಸೌರ್ಹಾದತೆಯಿಂದ ಜೀವಿಸಿ ಅದಕ್ಕೂ ಮೀರಿ ದೌರ್ಜನ್ಯ, ದಬ್ಟಾಳಿಕೆ, ಜಾತೀಯತೆ ನಡೆದಲ್ಲಿ ಅಥವಾ ನಿಮ್ಮ ಹಕ್ಕುಗಳಿಗೆ ದಕ್ಕೆಯಾದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
 
ದಲಿತ ಸಂಘಟನೆ ಮುಖಂಡ ಭೀಮರಾಯ ಸಿಂದಗೇರಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಬ್ರಾಹಿಂ ಸಾಹೇಬ ತಳಗಡೆ ನಗರಸಭೆ ಸಿಎಒ ಓಂಕಾರ ಪೂಜಾರ ವೇದಿಕೆಯಲ್ಲಿದ್ದರು. ಪರುಶುರಾಮ ಕಾಂಬ್ಳೆ ಸ್ವಾಗತಿಸಿದರು. ಶರಣು ದೋರನಳ್ಳಿ ನಿರೂಪಿಸಿದರು. ಗೋಪಿ ಹುಲಿ ವಂದಿಸಿದರು. ವಿಶ್ವ ವಿಬೂತಳ್ಳಿ ಮತ್ತು ಬಲಭೀಮ ಬೇವಿನಳ್ಳಿ ಸಂಗಡಿಗರು ದೌರ್ಜನ್ಯ ಮತ್ತು ಅಸ್ಪೃಶ್ಯತೆ ಕುರಿತ ಕಿರು ನಾಟಕ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next