ಕಾಪು : ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ಶಿಕ್ಷಕ / ಶಿಕ್ಷಕಿಯರು ತಮ್ಮ ಸೇವಾ ಅವಧಿಯಲ್ಲಿ ಗಳಿಸುವ ಜ್ಞಾನ ಮತ್ತು ಅನುಭವವನ್ನು ನಿವೃತ್ತಿಯ ನಂತರವೂ ಸಮಾಜಕ್ಕೆ ನೀಡುವುದರ ಮೂಲಕ ಸಮಾಜದ ಋಣ ತೀರಿಸಲು ಸಾಧ್ಯವಿದೆ. ಆ ಮೂಲಕ ಅವರು ತಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಕಾಣುವಂತಾಗಬೇಕು ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಾಧಿಪತಿ / ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎನ್.ವಿನಯ ಹೆಗ್ಡೆ ಹೇಳಿದರು.
ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರ ಸಮ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಾಂಶುಪಾಲ ಪ್ರೊ| ವಿನೋಬ್‌ನಾಥ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ಶಾರದ ಎಂ. ಇವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು.
ಆಡಳಿತ ಮಂಡಳಿಯ ಪರವಾಗಿ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ| ವೈ. ಭಾಸ್ಕರ ಶೆಟ್ಟಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದದ ಪರವಾಗಿ ಪ್ರೊ| ಟಿ. ಮುರುಗೇಶಿ ನಿವೃತ್ತರನ್ನು ಅಭಿನಂದಿಸಿ ಶುಭಹಾರೈಸಿದರು.
ಸಮ್ಮಾನ ಸ್ವೀಕರಿಸಿದ ಪ್ರೊ| ವಿನೋಬ್‌ನಾಥ ಮತ್ತು ಡಾ| ಶಾರದಾ ಅವರು ತಾವು ಸಲ್ಲಿಸಿದ ಸುಧೀರ್ಘ ಸೇವಾವಧಿಯನ್ನು ಸ್ಮರಿಸಿ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿರ್ವ ಎಂ. ಎಸ್. ಆರ್. ಎಸ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದ ಉಪಸ್ಥಿತರಿದ್ದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ. ಸುಬ್ಬಯ್ಯ ಹೆಗ್ಡೆ ಸ್ವಾಗತಿಸಿದರು. ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್‌ನ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ಡೆ ವಂದಿಸಿದರು. ಕಾಲೇಜಿನ ಉಪನ್ಯಾಸಕಿಯರಾದ ಸುಪ್ರೀತಾ ಮತ್ತು ಲಕೀÒ$¾ದೇವಿ ಕಾರ್ಯಕ್ರಮ ನಿರೂಪಿಸಿದರು.