Advertisement

Vijayapura; ಪಾಕ್ ಪರ ಘೋಷಣೆ ಕೂಗುವವರು ಅಲ್ಲಿಗೆ ಹೋಗಲಿ: ಯತ್ನಾಳ್ ಕಿಡಿ

12:19 PM Mar 05, 2024 | keerthan |

ವಿಜಯಪುರ : ಮೈ ಆದಿಲ್ ಶಾ ಕಾ ಬಾಪ್, ಓ ನಿಜಾಮ ಶಾ ಕಾ ಬಾಪ್ (ಹೈದ್ರಾಬಾದ್ ಶಾಸಕ ರಾಜಾಸಿಂಗ್), ಮೈ ಬರೋಬರ್ ಕಹಾನಾ, ಮೈ ಸಚ್ ಬತಾಯಾನಾ…?

Advertisement

ಹೀಗಂತ ಹತ್ತಾರು ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಸಭಿಕರನ್ನು ಪ್ರಶ್ನಿಸಿದವರು ವಿಜಯಪುರದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ.

ಸೋಮವಾರ ನಗರದ ಶಿವಾಜಿ ಮಹಾರಾಜ ವೃತ್ತದಲ್ಲಿ ಜನತಾ ಸೇವಾ ಗ್ರೂಪ್ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಮೆರವಣಿಗೆ ಬಳಿಕ ತಡರಾತ್ರಿವರೆಗೂ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಕೇವಲ ಒಬ್ಬ ರಾಜಾಸಿಂಗ್ ಇಡೀ ಹೈದರಾಬಾದ್ ಅಲ್ಲಾಡುವಂತೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮ ತಡೆಯಲು ಸಚಿವ ಪ್ರಿಯಾಂಕ ಖರ್ಗೆ ಮುಂದಾದಾಗ ಕೋರ್ಟ್ ನಿಂದ ಪರವಾನಿಗೆ ಪಡೆಯಲಾಯಿತು ಎಂದು‌ ಕಿಡಿ ಕಾರಿದರು.

1946 ರಲ್ಲಿ ಭಾರತ ವಿಭಜನೆ ವಿಷಯ ಪ್ರಸ್ತಾಪವಾದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ಪಾರ್ಟೀಶನ್ ಆಫ್ ಪಾಕಿಸ್ತಾನ ಕುರಿತು ಮಾತನಾಡುತ್ತಾ, ಹಿಂದೂಸ್ತಾನ್ ಮೇ ರಹೆಸೋ ಸುವ್ವರೋಂಕೋ ಪಾಕಿಸ್ತಾನ ಭೇಜದೋ, ಪಾಕಿಸ್ತಾನ ಮೇ ಜೋ ಶೇರ್ ಹೈ ಹಿಂದುಸ್ತಾನ್ ಬುಲಾಲೋ ಎಂದಿದ್ದರು‌ ಎಂದು ವಿವರಿಸಿದರು.

ಭಾರತದ ಅನ್ನ ತಿಂದು, ಭಾರತದ ನೀರು ಕುಡಿದು, ಭಾರತ ಗಾಳಿಯನ್ನು ಉಸಿರಾಡಿ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗುತ್ತಾರೆ. ನಾವೇನಾದರೂ ಭಾರತದಲ್ಲಿ ಮಸೀದಿಗಳ ಮೇಲೆ ಕಲ್ಲು ಎಸೆದಿದ್ದೇವಾ, ಪಾಕಿಸ್ತಾನ ಪರ ಘೋಷಣೆ ಕೂಗುವ ಪಾಕ್ ಪ್ರೇಮಿಗಳು ಅಲ್ಲಿಗೆ ಹೋಗಿ ಎಂದು ಕಿಡಿ ಕಾರಿದರು.

Advertisement

ಪಾಕಿಸ್ತಾನದಲ್ಲಿ ತಿನ್ನಲು ಕೂಳು ಇಲ್ಲ. ಆಕಳು, ಎಮ್ಮೆಗಳನ್ನು ಕೊಂದು ತಿಂದಿರುವ ಕಾರಣ ಅವರಿಗೆ ಕುಡಿಯಲು ಹಾಲೂ ಸಿಗುತ್ತಿಲ್ಲ. ಅಲ್ಲಿ ಕತ್ತೆಗಳೂ ಕಾಣೆಯಾಗಿವೆ ಎಂದು ವ್ಯಂಗ್ಯವಾಡಿದರು.

ಪಾಕ್ ಪ್ರೀತಿಯ ನಮಕ್ ಹರಾಮ್ ಗಳಿಂದ ಹಿಂದೂಗಳು ಜಾಗೃತರಾಗಬೇಕಿದೆ. ದೇಶದ ಉಳಿವಿಗಾಗಿ ಪ್ರಶ್ನಿಸಬೇಕಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ವೈಫಲ್ಯದಿಂದಾಗಿ ಮುಖ್ಯಮಂತ್ರಿ, ಗೃಹಮಂತ್ರಿ ರಾಜಿನಾಮೆ ನೀಡುವಂತೆ ಆಗ್ರಹಿಸಿದರು.

ನಮ್ಮೊಂದಿಗೆ ಚಂದಗ ಇರಂಗಿದ್ರ ಇರ್ರಿ, ವಾಪಸ್ ನಮ್ಮ ಧರ್ಮಕ್ಕೆ ಬರ್ರಿ, ಇಲ್ಲಂದ್ರ ಪಾಕಿಸ್ತಾನಕ್ಕೆ ಹೋಗಿ ಎಂದು ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಿಡಿ ಕಾರಿದರು.

ಇಂಥವರ ಮಧ್ಯೆಯೂ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ ಅವರಂಥ ದೇಶ ಭಕ್ತರೂ ಇದ್ದಾರೆ ಎಂದು ಶ್ಲಾಘಿಸಿದ ಯತ್ನಾಳ, ವಿಧಾನಸಭೆ ಇತಿಹಾಸದಲ್ಲೇ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಬಳಸಬಾರದ ಪದಗಳನ್ನೆಲ್ಲ ಬಳಸಲು ಖಾದರ್ ಅವರು ನನಗೆ ಅವಕಾಶ ನೀಡಿದರು. ಆದರೆ ಹಿಂದೂ ಶಾಸಕನೊಬ್ಬ ಆಕ್ಷೇಪಿಸಲು ಬಂದಾಗ ಏ ಸುಮ್ಮನೆ ಕೂಡು ಎಂದು ಹೇಳಿದ್ದೆ ಎಂದು ಸದನದಲ್ಲಿ ನಡೆದ ಚರ್ಚೆಯ ಪ್ರಸಂಗವನ್ನು ಉಲ್ಲೇಖಿಸಿದರು.

ಮುಸ್ಲಿಮರ ಜಗದ್ಗುರು ಸಿದ್ದರಾಮಯ್ಯ ಅವರು ಮುಸ್ಲಿಮರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಪಸಂಖ್ಯಾತ ಎಂದರೆ ಭಾರತದಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲ ಜೈನ್, ಸಿಖ್ ಸೇರಿದಂತೆ ಇತರೆ ಸಮುದಾಯದ ಜನರೂ ಇದ್ದಾರೆ ಎಂದರು.

ಹಿಂದೂ ದೇವಸ್ಥಾನಗಳ ಹಣದಿಂದ ಮುಸ್ಲಿಮರ ವಕ್ಫ್ ಆಸ್ತಿ ರಕ್ಷಣೆಗೆ ಮುಂದಾಗಿದ್ದಾರೆ. ಹಿಂದೂ ದೇವಸ್ಥಾನಗಳಲ್ಲಿ ನಿತ್ಯವೂ ಅನ್ನ ಪ್ರಸಾದ ನಡೆಯುತ್ತದೆ. ಆದರೆ ಒಂದೇ ಒಂದು ಮಸೀದಿಯಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಇದೆಯೇ ಎಂದು ಶಾಸಕ ಯತ್ನಾಳ ಪ್ರಶ್ನಿಸಿದರು.

ವಿಜಯಪುರದಲ್ಲಿ ತೊರವಿ ಲಕ್ಷ್ಮಿಗುಡಿ, ಪೊಲೀಸ್ ಹೆಡ್ ಕ್ವಾರ್ಟರ್ಸ್, ಸರ್ಕಾರಿ ಆಸ್ಪತ್ರೆ ಹೀಗೆ ಹಲವು ಆಸ್ತಿ ವಕ್ಫ್ ಆಸ್ತಿಯಾಗಿವೆ. ಈ ಬಗ್ಗೆ ಹೋರಾಟ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next