Advertisement

ಮಠಾಧೀಶರು ಬೀದಿ ಜಗಳ ಬಿಟ್ಟು ಒಂದಾಗಲಿ: ರಾಯರಡ್ಡಿ

08:20 AM Aug 25, 2017 | Team Udayavani |

ಬೆಂಗಳೂರು: ವೀರಶೈವ ಲಿಂಗಾಯತ ಮಠಾಧೀಶರು ಬೀದಿ ಜಗಳ ಮಾಡುವುದನ್ನು ಬಿಟ್ಟು ಒಂದಾಗಿ ಹೋಗಬೇಕೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಪ್ರತ್ಯೇಕ ಧರ್ಮದ ವಿಷಯದಲ್ಲಿ ವಿರಕ್ತ ಮಠಾಧೀಶರು ಮತ್ತು ಪಂಚ ಪೀಠಾಧೀಶರು ಪ್ರತ್ಯೇಕ ಸಭೆಗಳನ್ನು ಮಾಡಿ ನಿರ್ಣಯಗಳನ್ನು ಕೈಗೊಳ್ಳುವುದರಿಂದ ಸಮಸ್ಯೆ
ಪರಿಹಾರವಾಗುವುದಿಲ್ಲ. ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕಿಂತ ಭಿನ್ನವಾಗಿರುವುದರಿಂದ ಮಠಾಧೀಶರು, ಚಿಂತಕರೆಲ್ಲರೂ ಒಟ್ಟಾಗಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಸಮಾಜದ ನಾಗರಿಕರಾಗಿ ಭಾಗವಹಿಸುತ್ತಿದ್ದೇವೆ. ಸರ್ಕಾರಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಎಲ್ಲರೂ ಒಟ್ಟಾಗಿ ಬಂದರೆ, ಪ್ರತ್ಯೇಕ ಧರ್ಮ ಘೋಷಣೆ ಮಾಡುವ ಕುರಿತು
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದರು. ಬಿಜೆಪಿ ನಾಯಕರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಕುರಿತಂತೆ ಒಂದೆಡೆ ಸಹಿ ಮಾಡುತ್ತಾರೆ. ಮತ್ತೂಂದೆಡೆ
ವೀರಶೈವ ಲಿಂಗಾಯತ ಹಿಂದೂ ಧರ್ಮದ ಭಾಗ ಎಂದು ಹೇಳುತ್ತಾರೆ. ಅವರು ಆರ್‌ಎಸ್‌ಎಸ್‌ ಕಪಿ ಮುಷ್ಠಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಲಿಂಗಾಯತರಲ್ಲ ಎಂದು ಹೇಳಿದಾಗಿ ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next