Advertisement

ಮನೆ ಮನೆಗಳಲ್ಲೂ ಸ್ವಾತಂತ್ರ್ಯದ ದೇಶಭಕ್ತಿ ಮೆರೆಯಲಿ

05:58 PM Apr 02, 2022 | Shwetha M |

ವಿಜಯಪುರ: ಭಾರತ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದಲ್ಲಿದೆ. ಇಂಥ ಸಂದರ್ಭದಲ್ಲಿ ಸ್ವಾತಂತ್ರ್ಯ ವರ್ಷಾಚರಣೆ ಕೇವಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಸಂಘ ಸಂಸ್ಥೆಗಳಿಗೆ ಸೀಮಿತವಾಗದೇ ಮನೆ ಮನೆಯಲ್ಲಿ ಸ್ವಾತಂತ್ರ್ಯದ ದೇಶಭಕ್ತಿಯ ದೀವಿಗೆ ಬೆಳಗಲಿ ಎಂದು ದಕ್ಷಿಣ ಮಧ್ಯಕ್ಷೇತ್ರದ ಪ್ರಜ್ಞಾ ಪ್ರವಾಹದ ಸಂಯೋಜಕ ರಘುನಂದನ ಅಭಿಪ್ರಾಯಪಟ್ಟರು.

Advertisement

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿಹಮ್ಮಿಕೊಂಡಿದ್ದ ಆಜಾದಿ ಕಾ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಬ್ಬದ ರೀತಿಯಲ್ಲಿ ಎಲ್ಲ ಭಾರತೀಯರು ಆಚರಿಸಬೇಕು. ಅಂದಾಗ ಮಾತ್ರ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ ನಮ್ಮ ಹುತಾತ್ಮರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಪಾಶ್ಚಾತ್ಯ ರಾಷ್ಟ್ರಗಳು ಶೇ. 17ರಷ್ಟು ಸಾಕ್ಷರತೆ ಹೊಂದಿದ ಸಮಯದಲ್ಲಿ ಭಾರತ ದೇಶ 90ರಷ್ಟು ಸಾಕ್ಷರತೆ ಹೊಂದಿತ್ತು. ಭಾಸ್ಕರಾಚಾರ್ಯ (ಗಣಿತ), ಆರ್ಯಭಟ, ಸೂಶ್ರೂಷ (ವೈದ್ಯಕೀಯ) ಸ್ವಾಮಿ ವಿವೇಕಾನಂದ ಅವರಂತ ಮಹನೀಯರು ಹುಟ್ಟಿದ ದೇಶ ನಮ್ಮದು. ಅವರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಬಿ.ಕೆ.ತುಳಸಿಮಾಲಾ ಮಾತನಾಡಿ, ಪ್ರಾಚೀನ ಕಾಲದ ಭಾರತದ ಸಂಸ್ಕೃತಿ, ಪರಂಪರೆ, ಕಲೆ ಮತ್ತು ವಾಸ್ತುಶಿಲ್ಪ ಸೇರಿದಂತೆ ನಮ್ಮ ಮೂಲ ನೆಲೆ-ಕಲೆಗಳ ಬಗ್ಗೆ ಇಂದಿನ ಪೀಳಿಗೆ ಅರಿಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಎಂ.ಎನ್‌. ಚೋರಗಸ್ತಿ, ರಾಷ್ಟ್ರೀಯ ಸೇವಾ ಯೋಜನೆ ಕೋಶದ ಕಾರ್ಯಕ್ರಮ ಅಧಿಕಾರಿ ನಾಮದೇವಗೌಡ ಡಾ| ವಿಷ್ಣು ಶಿಂಧೆ, ಜಿ.ಎನ್‌. ಕಿರಣ, ಅಕ್ಷಯ ಯಾರ್ದಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next