Advertisement

PaduKuthyaru ಧ್ವಜವು ಏಕತೆಯ ದ್ಯೋತಕವಾಗಲಿ: ಆನೆಗುಂದಿ ಶ್ರೀ

11:44 PM Sep 10, 2023 | Team Udayavani |

ಕಾಪು: ಸಮಾಜದ ಎಲ್ಲ ದೇವಸ್ಥಾನಗಳ ಧರ್ಮದರ್ಶಿಗಳು, ವಿದ್ವಾಂಸರು, ವೈದಿಕ ಮುಖಂಡರು, ಸಂಘಟನೆಯ ಮುಖಂಡರುಗಳ ಒಮ್ಮತದ ಅಭಿಪ್ರಾಯದೊಂದಿಗೆ ವಿಶ್ವ ಕರ್ಮ ಧ್ವಜ ಮೂಡಿ ಬಂದಿರುವುದು ಸಂತಸ ತಂದಿದೆ. ವಿಶ್ವಕರ್ಮ ಧ್ವಜವು ಸಮಾಜದ ಏಕತೆಯ ದ್ಯೋತಕವಾಗಬೇಕು ಎಂದು ಶ್ರೀಮತ್‌ ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.

Advertisement

ರವಿವಾರ ಪಡುಕುತ್ಯಾರು ಶ್ರೀ ಆನೆಗುಂದಿ ಮಹಾಸಂಸ್ಥಾನದಲ್ಲಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷರಿಗೆ ವಿಶ್ವಕರ್ಮ ಧ್ವಜ  ಹಸ್ತಾಂತರಿಸಿ, ಆಶೀರ್ವಚನ ನೀಡಿದರು.
ಮುಂದಿನ ವಿಶ್ವಕರ್ಮ ಮಹೋತ್ಸವದ ದಿನದಂದು ಮಹಾ ಸಂಸ್ಥಾನದ ವ್ಯಾಪ್ತಿ ಗೊಳಪಟ್ಟಿರುವ ಎಲ್ಲ ದೇವಸ್ಥಾನಗಳ ಧರ್ಮದರ್ಶಿಗಳು, ಸಂಘಟನೆಗಳ ಮುಖಂಡರುಗಳು ಪ್ರತೀ ದೇವಸ್ಥಾನ, ಸಂಸ್ಥೆಗಳು ಹಾಗೂ ಮನೆ ಗಳಲ್ಲಿ ವಿಶ್ವಕರ್ಮ ಧ್ವಜವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಸಂಘಟಿತ ಶಕ್ತಿಯನ್ನು ಪ್ರದರ್ಶಿಸುವಂತೆ ಕರೆ ನೀಡಿದರು.

ಆಸ್ಥಾನ ವಿದ್ವಾಂಸ ವೇ. ಬ್ರ. ಶಂಕರಾಚಾರ್ಯ ಕಡ್ಲಾಸ್ಕರ್‌, ಆನೆಗುಂದಿ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಅಸೆಟ್‌ ಅಧ್ಯಕ್ಷ ಬಿ. ಸೂರ್ಯಕುಮಾರ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ತ್ರಾಸಿ ಸುಧಾಕರ ಆಚಾರ್ಯ, ಕಳಿ ಚಂದ್ರಯ್ಯ ಆಚಾರ್ಯ, ಸುಂದರ ಆಚಾರ್ಯ ಕೋಟೆಕಾರು, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ,
ಸುರೇಶ್‌ ಆಚಾರ್ಯ ನಿಟ್ಟೆ, ಜನಾರ್ದನ ಆಚಾರ್ಯ ಆರಿಕ್ಕಾಡಿ, ಶೇಖರಆಚಾರ್ಯ ಕಾಪು, ಬಾಲಕೃಷ್ಣ ಆಚಾರ್ಯ ಬೆಳಪು, ದಿನೇಶ್‌ ಆಚಾರ್ಯ ಪಡುಬಿದ್ರಿ, ಧ್ವಜ ಸಮಿತಿಯ ಸಂಚಾಲಕ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next