Advertisement

ಗ್ರಾಮೀಣ ಸಮಸ್ಯೆಗೆ ಮಾಧ್ಯಮ ಗಮನಹರಿಸಲಿ

01:11 PM Jul 23, 2022 | Team Udayavani |

ಆಳಂದ: ಪ್ರತಿಯೊಬ್ಬರು ಪತ್ರಿಕೆಗಳನ್ನು ಕೊಂಡು ಓದಬೇಕು, ಟಿವಿ, ಕಂಪ್ಯೂಟರ್‌ ಹಾಗೂ ಸಾಮಾಜಿಕ ಜಾಲತಾಣದಿಂದ ಪತ್ರಿಕೆಗಳ ಓದು ಕುಗ್ಗಬಾರದು ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

Advertisement

ಪಟ್ಟಣದ ಜೂನಿಯರ್‌ ಕಾಲೇಜಿನ ಆವರಣದಲ್ಲಿ ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು ನಗರ ಸಮಸ್ಯೆಗಳಿಗೆ ಒತ್ತು ನೀಡಿದಂತೆ ಗ್ರಾಮೀಣ ಸಮಸ್ಯೆಗಳಿಗೂ ಹೆಚ್ಚು ಗಮನಹರಿಸಿ, ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮಾಧ್ಯಮ ಸಮಾಜದ ನಾಲ್ಕನೇ ಸ್ತಂಭವಾಗಿದೆ. ಈ ಮಾಧ್ಯಮದ ಮೂಲಕ ಜನ ಜಾಗೃತಿ ಮೂಡಿಸುವ ಕೆಲಸ ವಾಗಬೇಕು. ಸಾಮಾಜಿಕ ಕಳಕಳಿ ಹೊಂದಿ ಜನಪರ ವರದಿ ನೀಡುವ ಕಾರ್ಯವಾಗಬೇಕು ಎಂದರು.

ಪ್ರಭುಲಿಂಗ ನಿಲೂರ ಮಾತ ನಾಡಿ, ಪತ್ರಕರ್ತರು ಸಮಸ್ಯೆ, ಸವಾಲುಗಳ ನಡುವೆ ವರದಿ ಮಾಡಿ ಜನರೆದುರು ಇಡುತ್ತಿದ್ದಾರೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ. ಪತ್ರಕರ್ತರು ವಾಸ್ತವಿಕತೆ ಅರಿತು ವರದಿ ಮಾಡಬೇಕು ಎಂದು ಹೇಳಿದರು.

Advertisement

ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್‌. ಖಜೂರಿ ಉದ್ಘಾಟಿಸಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್‌ ಯಡ್ರಾಮಿ ಮಾತನಾಡಿ, ಯುವ ಜನತೆ ಮಾಧ್ಯಮ ಕ್ಷೇತ್ರಕ್ಕೆ ಬಂದು ಸಮಾಜದ ಬದಲಾವಣೆಗೆ ಪ್ರಯತ್ನಿಸ ಬೇಕು ಎಂದು ಕರೆ ನೀಡಿದರು.

ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ಪಿಯು ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ, ಪತ್ರಕರ್ತ ಪ್ರಭುಲಿಂಗ ನಿಲೂರೆ ಮಾತನಾಡಿದರು.

ತಾಪಂ ಇಒ ವಿಲಾಸರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ, ರೇಷ್ಮೆ ವಿಸ್ತರಣಾಧಿಕಾರಿ ಡಿ.ಬಿ.ಪಾಟೀಲ, ಬಿಸಿಎಂ ಅಧಿಕಾರಿ ಬಸವರಾಜ ಕಾಳೆ, ಜಿಪಂ ಎಇಇ ನಾಗಮೂರ್ತಿ ಶೀಲವಂತ, ತೋಟಗಾರಿಕೆ ಶಂಕರಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಸಮಿತಿ ಸದಸ್ಯ ಶಿವರಂಜನ ಸತ್ಯೆಂಪೇಟ್‌, ಸಂಪಾದಕ ಶಿವಲಿಂಗಪ್ಪ ದೊಡ್ಡಮನಿ, ಶಿವರಾಯ ದೊಡ್ಡಮನಿ, ವಿಜಯ ವಾರದ, ಕುಮಾರಸ್ವಾಮಿ, ಚಂದ್ರಶೇಖರ ಕವಲಗಾ, ಸಿಪಿಐ ಭಾಸು ಚವ್ಹಾಣ, ಪಿಎಸ್‌ಐ ತಿರುಮಲ್ಲೇಶ, ಕಲಬುರಗಿ ಅಕ್ಷರದಾಸೋಹ ಅಧಿಕಾರಿ ಭರತರಾಜ ಸಾವಳಗಿ, ಪಿಯು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಅರುಣಿತಾ, ಪಿಯು ಪ್ರಾಚಾರ್ಯ ಶಶಿಕಾಂತ ಮೇತ್ರಿ, ಬಾಲಕಿಯರ ಪಿಯು ಪ್ರಾಚಾರ್ಯ ಜೋಹರಾ ಪಾತೀಮಾ, ಮುಖ್ಯ ಶಿಕ್ಷಕ ಮಚೇಂದ್ರ ಪಾಂಚಾಳ ಇದ್ದರು. ಇದೇ ವೇಳೆ ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next